ಬೆಂಗಳೂರು:ಗೆಂಡೆ ಮೀನುಗಳಿಗೆ ಪರ್ಯಾಯವಾಗಿ ಅಭಿವೃದ್ಧಿ ಪಡಿಸಿರುವ ತಿಲಾಪಿ ಮೀನು (ಟೈಗರ್ ಜಿಲೇಬಿ) ಮೇಳಕ್ಕೆ ಬಂದಿದ್ದವರ ಅಚ್ಚುಮೆಚ್ಚಿನ ಆಯ್ಕೆಯಾಗಿತ್ತು. 21ನೇ ಶತಮಾನದ ‘ಆಹಾರದ ಮೀನು’ ಎಂದೇ ಹೆಸರಾದ ಈ ಮೀನಿನಲ್ಲಿ ಮೂಳೆ ಇರುವುದಿಲ್ಲ.

ಕನಿಷ್ಠ ಒಂದು ಮೀಟರ್ ನೀರು ಇದ್ದರೂ 4 ತಿಂಗಳಲ್ಲಿ 200 ರಿಂದ 250 ಗ್ರಾಂ ತಿಲಾಪಿ ಮೀನುಗಳು ಸಿಗುತ್ತವೆ. ಒಂದು ಚದರ ಮೀಟರ್‌ನಷ್ಟು ಕಡಿಮೆ ಸಾಂದ್ರತೆಯಲ್ಲಿ ಐದು ಮರಿ ಬೆಳೆಯುತ್ತವೆ.

ಕೃಷಿ ಹೊಂಡದಲ್ಲಿಯೂ ಸಾಕಬಹುದು. ಅಲ್ಪಾವಧಿ ನೀರು ನಿಲ್ಲುವ ಮತ್ತು ಕಡಿಮೆ ನೀರಿನ ಆಳ ಇರುವಲ್ಲಿ ಸಾಕಬಹುದಾಗಿದೆ. ಈ ಮೀನುಗಳ ಮಾರಾಟದಿಂದ ವರ್ಷಕ್ಕೆ ಒಂದು ಹೆಕ್ಟರ್ ಪ್ರದೇಶದಲ್ಲಿ ₹ 4.02ಲಕ್ಷ ನಿವ್ವಳ ಆದಾಯ ಗಳಿಸಬಹುದು ಎಂದು ಜಿಕೆವಿಕೆಯ ಮುಖ್ಯ ವಿಜ್ಞಾನಾಧಿಕಾರಿ ಡಾ. ಬಿ.ವಿ. ಕೃಷ್ಣಮೂರ್ತಿ ಹೇಳಿದರು.

ಜಿಕೆವಿಕೆಯಲ್ಲಿ ನಿರ್ಮಿಸಿರುವ ಕೃಷಿ ಹೊಂಡದಲ್ಲಿ ಈ ಮೀನುಗಳನ್ನು ಸಾಕಲಾಗುತ್ತದೆ. ಇದರ ಮೇಲೆ ಕೋಳಿ ಸಾಕಣೆ ನಡೆಯಲಿದ್ಗದು, ಕೋಳಿಗಳ ಹಿಕ್ಕೆ ಮೀನು ಮರಿಗಳಿಗೆ ಆಹಾರವಾಗಲಿದೆ. ಸಮಗ್ರ ಕೃಷಿ ವ್ಯವಸ್ಥೆಗೆ ಇದೊಂದು ಉತ್ತಮ ಮಾದರಿಯಾಗಿದೆ.

ಮಾಹಿತಿಗೆ, 080–23515644.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.