ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Krishi Mela 2023 | ಗಮನ ಸೆಳೆದ ಏಕಲವ್ಯ ಹಳ್ಳಿಕಾರ್ ಎತ್ತು, ಬೆಲೆ ₹26 ಲಕ್ಷ

Published 18 ನವೆಂಬರ್ 2023, 0:30 IST
Last Updated 18 ನವೆಂಬರ್ 2023, 0:30 IST
ಅಕ್ಷರ ಗಾತ್ರ

ಯಲಹಂಕ: ತುರುವೇಕೆರೆಯ ಏಕಲವ್ಯ ಹಳ್ಳಿಕಾರ್ ನಾಟಿ ಎತ್ತು ಈ ಬಾರಿಯ ಕೃಷಿ ಮೇಳದಲ್ಲಿ ಜನರ ಗಮನ ಸೆಳೆಯುತ್ತಿದೆ.

ಕೃಷಿಮೇಳದ ಪಶುಸಂಗೋಪನಾ ವಿಭಾಗದ ಮಳಿಗೆಯಲ್ಲಿ ಈ ಎತ್ತು ಜನರನ್ನು ಸೆಳೆಯುತ್ತಿದೆ. ಇದರ ವಯಸ್ಸು 4 ವರ್ಷ. ಬೆಲೆ ಬರೋಬ್ಬರಿ ₹ 26 ಲಕ್ಷ.

ತುರುವೇಕೆರೆಯ ಮಾಜಿ ಶಾಸಕ ಮಸಾಲ ಜಯರಾಂ ಅವರು, ಈ ಹಳ್ಳಿಕಾರ್ ಹೋರಿಯನ್ನು ಖರೀದಿಸಿದ್ದರು.

ಈ ಹೋರಿಗೆ ಬೇಯಿಸಿದ ಹುರುಳಿ ನುಚ್ಚು, ರವೆಬೂಸ, ಕೊಬ್ಬರಿ, ಬೆಲ್ಲ, ನಾಟಿ ಮೊಟ್ಟೆ, ಪಚ್ಚಬಾಳೆಹಣ್ಣು, ವಾರಕ್ಕೊಮ್ಮೆ ನಾಟಿ ಬೆಣ್ಣೆ, ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ತಲಾ ಎರಡೂವರೆ ಲೀಟರ್ ಹಾಲನ್ನು ಆಹಾರವಾಗಿ ನಿಡಲಾಗುತ್ತಿದೆ ಎಂದು ಸಾಕಾಣಿಕೆದಾರ ಯಡಿಯೂರಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT