ಬೆಂಗಳೂರು: ಜಿರಳೆ ಪಕೋಡ, ಚಿಗಳಿ ಚಟ್ನಿ, ರೇಷ್ಮೆ ಹುಳು ಕೋಶದ ಸೂಪ್ ಹಾಗೂ ಮಂಚೂರಿ, ರೇಷ್ಮೆ ಹುಳುವಿನ ಬಾರ್ಬಿ ಕ್ಯೂ, ಕಬಾಬ್, ಮೀಲ್ವರಂ ಕೇಕ್–ಫ್ರೈಡ್ ರೈಸ್, ರಾಣಿ ಗೆದ್ದಲಿನ ಬರ್ಗರ್ ಆಹಾ ಹೊಸ ಬಗೆಯ ತಿನಿಸುಗಳು...

ಇಂತಹ ವೈವಿಧ್ಯಮಯ, ನೋಡುಗರಲ್ಲಿ ಬೆರಗು ಹುಟ್ಟಿಸುವ ಆಹಾರ ಪದಾರ್ಥಗಳು ಒಂದೆಡೆ ಕಾಣಸಿಕ್ಕಿದ್ದು ಕೃಷಿಮೇಳದಲ್ಲಿ.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಜಿಕೆವಿಕೆ ಆವರಣದಲ್ಲಿ ನಡೆಯುತ್ತಿರುವ ಮೇಳದಲ್ಲಿ ಕೀಟಶಾಸ್ತ್ರ ವಿಭಾಗದ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ತಯಾರಿಸಿದ್ದ ಇಂತಹ ತಿನಿಸುಗಳು ಎಲ್ಲರ ಗಮನ ಸೆಳೆದವು.

ಕಣಜದ ಮಸಾಲಾ, ಮಿಡತೆ ಫ್ರೈ ಹಾಗೂ ಕಬಾಬ್ ಸೇರಿದಂತೆ ನಾನಾ ರೀತಿಯ ಕೀಟಗಳ ತಿನಿಸುಗಳು, ಬೇಕರಿ ಪದಾರ್ಥಗಳು, ಫಾಸ್ಟ್ಫುಡ್ಗಳೂ ಪ್ರದರ್ಶನದಲ್ಲಿವೆ. ಈ ಆಹಾರ ಪದಾರ್ಥಗಳ ಮಹತ್ವ, ಇದರಲ್ಲಿರುವ ಪೌಷ್ಟಿಕಾಂಶಗಳ ಬಗ್ಗೆ ವಿದ್ಯಾರ್ಥಿಗಳು ಸಾರ್ವಜನಿಕರಿಗೆ ಮಾಹಿತಿ ನೀಡಿದರು.

ರೈತರಿಗೆ, ಜನ ಸಾಮಾನ್ಯರಿಗೆ, ವಿಜ್ಞಾನಿಗಳಿಗೆ, ಪರಿಸರ ಪ್ರಿಯರಿಗೆ, ಕೀಟಗಳೊಂದಿಗೆ ನಂಟು ಹೊಂದಿರುವ ಹವ್ಯಾಸಿಗಳಿಗೆ ಹಾಗೂ ಮುಖ್ಯವಾಗಿ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ಒದಗಿಸಲು ಕೀಟ ವಿಸ್ಮಯ ಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಎಸ್.ವಿ. ಸುರೇಶ ತಿಳಿಸಿದರು.

‘ಈ ಪ್ರದರ್ಶನದಲ್ಲಿ ಕೀಟಗಳ ಬಗ್ಗೆ ಇದುವರೆಗೂ ತಿಳಿದಿರುವ, ತಿಳಿಯದೆ ಇರುವ ವೈಜ್ಞಾನಿಕ ಸಂಗತಿಗಳನ್ನು ಎಲ್ಲರಿಗೂ ಸುಲಭವಾಗಿ ಅರ್ಥವಾಗುವಂತೆ ಪ್ರದರ್ಶಿಸಲಾಗಿದೆ. ಜೀವವೈವಿಧ್ಯತೆಗೆ ಹೆಸರಾದ ನಮ್ಮ ದೇಶದ ವಿವಿಧ ಭಾಗಗಳಲ್ಲಿ ಸ್ಥಳೀಯವಾಗಿ ಹಾಗೂ ಬೇರೆ ದೇಶಗಳಲ್ಲಿ ಕಂಡುಬರುವ ಜೀವಂತ ಹಾಗೂ ಸಂರಕ್ಷಿಸಿರುವ ಸಾವಿರಾರು ಕೀಟಗಳನ್ನು ಒಂದೇ ವೇದಿಕೆಯಲ್ಲಿ ನೋಡುವ ಅವಕಾಶ ಒದಗಿಸಲಾಗಿದೆ’ ಎಂದು ವಿವರಿಸಿದರು.

‘ಸೃಷ್ಟಿಯಲ್ಲಿ ಕೀಟಗಳ ಉಗಮ, ಕೀಟಗಳಲ್ಲಿರುವ ವೈವಿಧ್ಯತೆ, ಕೀಟಗಳ ವಿಭಿನ್ನವಾದ ಹಾಗೂ ವಿಸ್ಮಯಕಾರಿ ಜೀವನ ಚಕ್ರವನ್ನು ಇಲ್ಲಿ ತೋರಿಸಲಾಗಿದೆ. ನಮ್ಮ ದೇಶದಲ್ಲಿ ಕಂಡುಬರುವ ವಿವಿಧ ಬಗೆಯ ಪರಾಗಸ್ಪರ್ಶ ಕೀಟಗಳು, ಬೆಳೆಗಳನ್ನು ನಾಶಮಾಡುವ, ಮನುಷ್ಯರಿಗೆ ಮತ್ತು ಜಾನುವಾರುಗಳಿಗೆ ರೋಗಗಳನ್ನು ಹರಡುವ ಕೀಟಗಳು, ಮರಣ ಹೊಂದಿದ ಸಮಯವನ್ನು ನಿಖರವಾಗಿ ತಿಳಿಸಿ ಪತ್ತೇದಾರಿ ಕೆಲಸವನ್ನು ಸುಲಭವಾಗಿಸುವ ಕೀಟಗಳು, ಸಂಘ ಜೀವನ ನಡೆಸುವ ಕೀಟಗಳು, ಆಕರ್ಷಕ ಚಿಟ್ಟೆಗಳು, ಬಹುರೂಪಿ ದುಂಬಿಗಳು, ಬೆರಗುಗೊಳಿಸುವ ಜೀರುಂಡೆಗಳು, ಸೂಜಿ ಮೊನೆಯಷ್ಟು ಕಿರಿದಾದ ಹಾಗೂ ಅಂಗೈಯಷ್ಟು ಅಗಲದ ದೈತ್ಯ ಕೀಟಗಳೊಂದಿಗೆ ಅಪರೂಪದ ಕೀಟ ಸಂಕುಲಗಳ ಆಗರವನ್ನು ಇಲ್ಲಿ ವೀಕ್ಷಿಸುವುದರ ಜೊತೆಗೆ ತಜ್ಞರೊಂದಿಗೆ ಸಂವಾದ ನಡೆಸಬಹುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.