ಸೋಮವಾರ, ಆಗಸ್ಟ್ 15, 2022
23 °C

ಕೆಎಸ್‌ಆರ್‌ಟಿಸಿ: ಇಟಿಎಂ ಸ್ಲಿಟಿಂಗ್ ಯಂತ್ರಗಳಿಗೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಮುದ್ರಣಾಲಯದಲ್ಲಿ ಪ್ಲಾಸ್ಟಿಕ್ ಕೊಳವೆ ರಹಿತ ಟಿಕೆಟ್ ರೋಲ್ ತಯಾರಿಸುವ ಎರಡು 'ಇಟಿಎಂ ಸ್ಲಿಟಿಂಗ್' (ಎಲೆಕ್ಟ್ರಾನಿಕ್ ಟಿಕೆಟಿಂಗ್) ಯಂತ್ರಗಳಿಗೆ ಕೆಎಸ್‌ಆರ್‌ಟಿಸಿ ಅಧ್ಯಕ್ಷ ಎಂ.ಚಂದ್ರಪ್ಪ ಸೋಮವಾರ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, 'ಪ್ರತಿ ಯಂತ್ರದ ಬೆಲೆ ₹10 ಲಕ್ಷ. ಇವು ಸಂಪೂರ್ಣ ಸ್ವದೇಶಿ ಯಂತ್ರಗಳಾಗಿವೆ. ಇದರಿಂದ ತಯಾರಾಗುವ ಥರ್ಮಲ್ ರೋಲ್‍ಗಳಲ್ಲಿ ಪ್ಲಾಸ್ಟಿಕ್ ಕೊಳವೆ (ಪೈಪ್) ಉಪಯೋಗಿಸುವುದಿಲ್ಲ. ನಿರ್ವಾಹಕರು ವಿದ್ಯುತ್‍ಚಾಲಿತ ಟಿಕೆಟ್ ಯಂತ್ರಗಳಲ್ಲಿ ಈ ರೋಲ್ ಬಳಸಿ, ಪ್ರಯಾಣಿಕರಿಗೆ ಟಿಕೆಟ್ ವಿತರಿಸುತ್ತಾರೆ' ಎಂದರು.

'ನಿಗಮ ಮತ್ತು ಅದರ ಅಂಗ ಸಂಸ್ಥೆಗಳಿಗೆ ಪ್ರತಿ ವರ್ಷ 1.50 ಕೋಟಿ ರೋಲ್‍ಗಳು ಖಾಸಗಿಯವರಿಂದ ಸರಬರಾಜಾಗುತ್ತಿತ್ತು. ಅದರಲ್ಲಿದ್ದ ಪ್ರತಿ ಪ್ಲಾಸ್ಟಿಕ್ ಕೊಳವೆಗೆ 50 ಪೈಸೆಯಂತೆ, ವಾರ್ಷಿಕ ₹75 ಲಕ್ಷ ಖರ್ಚಾಗುತ್ತಿತ್ತು. ಈ ಯಂತ್ರಗಳಿಂದ ದಿನಕ್ಕೆ 16 ಸಾವಿರ ರೋಲ್‍ಗಳನ್ನು ತಯಾರಿಸಬಹುದು. ಇದರಿಂದ ಸಂಸ್ಥೆಗೆ ವಾರ್ಷಿಕ ₹4.80 ಕೋಟಿ ಉಳಿತಾಯವಾಗಲಿದೆ' ಎಂದು ಮಾಹಿತಿ ನೀಡಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು