ಬೆಂಗಳೂರು: ಭಾರತೀಯ ಗಗನಯಾನದ ಆರಂಭ, ವಿಕಾಸ ಹಾಗೂ ಸಾಧನೆಗಳು, ಗಗನಯಾತ್ರಿಗಳ ತರಬೇತಿ, ಎಚ್ಎಲ್ವಿ 3ರ ಉಡ್ಡಯನ ಸೇರಿದಂತೆ ಉಪಗ್ರಹ ಯಾವ ರೀತಿಯಾಗಿ ಉಡಾವಣೆಯ ಆಗುತ್ತದೆ ಎಂಬ ಸಂಪೂರ್ಣ ಮಾಹಿತಿ ತಿಳಿದುಕೊಳ್ಳುವ ಆಸಕ್ತಿ ಇದ್ದರೆ ಜವಾಹರಲಾಲ್ ನೆಹರೂ ತಾರಾಲಯಕ್ಕೆ ಭೇಟಿ ನೀಡಬೇಕು.

ಸೌಂಡಿಂಗ್ ರಾಕೆಟ್ಗಳಿಂದ ಈಗಿನ ಗಗನಯಾನದವರೆಗಿನ ‘ಭಾರತೀಯ ಅಂತರಿಕ್ಷ ಯಾತ್ರೆ’ ಎಂಬ ಶೀರ್ಷಿಕೆ ಅಡಿಯಲ್ಲಿ ‘ಸ್ಕೈ ಶೋ’ (ಆಕಾಶ ದರ್ಶನ) ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಇಸ್ರೊ ಮಾಜಿ ಅಧ್ಯಕ್ಷ ಎ.ಎಸ್. ಕಿರಣ್ ಕುಮಾರ್ ಹಾಗೂ ಇಸ್ರೊದ ಗಗನಯಾನ ಯೋಜನಾ ನಿರ್ದೇಶಕ ಆರ್. ಹಟನ್ ಶನಿವಾರ ಚಾಲನೆ ನೀಡಿದರು.

ಎ.ಎಸ್. ಕಿರಣ್ ಕುಮಾರ್, ‘1960ರಲ್ಲಿ ಸೌಂಡಿಂಗ್ ರಾಕೆಟ್ನಿಂದ ಇಂದಿನ ಗಗನಯಾನದವರೆಗೆ ವಿವಿಧ ಅಭಿವೃದ್ಧಿ ಹಂತಗಳನ್ನು ಮುಂದಿನ ಪೀಳಿಗೆಯವರಿಗೆ ಅರ್ಥವಾಗುವಂತೆ ನೀಡಲಾಗಿದೆ. ಚಂದ್ರಯಾನ–3ರ ಯಶಸ್ಸಿನ ನಂತರ ವಿಶ್ವದಲ್ಲಿ ಹೆಚ್ಚಿನ ಯುವಕರಲ್ಲಿ ವಿಜ್ಞಾನ, ಬಾಹ್ಯಾಕಾಶ ಬಗ್ಗೆ ಹೆಚ್ಚು ಆಸಕ್ತಿ ಮೂಡಿದೆ. ಜವಾಹರಲಾಲ್ ನೆಹರೂ ತಾರಾಲಯವು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಬಾಹ್ಯಾಕಾಶದ ಬಗ್ಗೆ ಮಾಹಿತಿ ನೀಡುವಲ್ಲಿ ಉತ್ತಮ ಕೆಲಸ ಮಾಡುತ್ತಿದೆ’ ಎಂದರು.

‘ಸ್ಕೈ ಶೋ’: ಜವಾಹರಲಾಲ್ ನೆಹರೂ ತಾರಾಲಯದಲ್ಲಿ ಏ.7ರಿಂದ ಸಾರ್ವಜನಿಕ ವೀಕ್ಷಣೆಗೆ ಅವಕಾಶ ನೀಡಲಾಗಿದೆ. ಪ್ರತಿ ಸೋಮವಾರ ಮತ್ತು ತಿಂಗಳ ಎರಡನೇ ಮಂಗಳವಾರ ಹೊರತುಪಡಿಸಿ, ಪ್ರತಿದಿನ ಬೆಳಿಗ್ಗೆ 10.30ಕ್ಕೆ ಇಂಗ್ಲಿಷ್ ಭಾಷೆಯಲ್ಲಿ ಹಾಗೂ ಬೆಳಿಗ್ಗೆ 11.30ಕ್ಕೆ ಕನ್ನಡ ಭಾಷೆಯಲ್ಲಿ ಈ ‘ಸ್ಕೈ ಶೋ’ ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಲಿದೆ. ಈ ಪ್ರದರ್ಶನ ಎರಡು ತಿಂಗಳವರೆಗೆ ನಡೆಯಲಿದೆ ಎಂದು ತಾರಾಲಯದ ನಿರ್ದೇಶಕ ಬಿ.ಆರ್. ಗುರುಪ್ರಸಾದ್ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.