ಸೋಮವಾರ, ಜನವರಿ 20, 2020
25 °C

ಎಸ್ಸೆಸ್ಸೆಲ್ಸಿ ಪರೀಕ್ಷಾ ಸಿದ್ಧತೆಗೆ ‘ಲರ್ನ್‌ಕ್ಯಾಬ್’ ಆ್ಯಪ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಜ್ಜಾಗಲು ವಿದ್ಯಾರ್ಥಿಗಳಿಗೆ ನೆರವಾಗುವ ಸಲುವಾಗಿ ‘ಲರ್ನ್‌ಕ್ಯಾಬ್’ ಸಂಸ್ಥೆ ಮೊಬೈಲ್‌ ಆ್ಯಪ್‌ ಅನ್ನು ಅಭಿವೃದ್ಧಿಪಡಿಸಿದೆ.

ವಿಷಯಗಳ ಪುನರ್ಮನನಕ್ಕೆ ಹಾಗೂ ವಿದ್ಯಾರ್ಥಿಗಳು ಕೊನೆಯ ಹಂತದಲ್ಲಿ ಪರೀಕ್ಷೆಗೆ ಸಿದ್ಧತೆ ನಡೆಸಲು ಈ ಆ್ಯಪ್‌ ಸಹಕಾರಿ. ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ ಮಾಹಿತಿ ಒದಗಿಸಲಿದೆ.

ಆ್ಯಪ್‌ ಬಿಡುಗಡೆ ಮಾಡಿದ ಉಪಮುಖ್ಯಮಂತ್ರಿ ಸಿ.ಎನ್‌.ಅಶ್ವತ್ಥನಾರಾಯಣ, ‘ಸಂಪೂರ್ಣ ಪಠ್ಯಕ್ರಮವನ್ನು ಒಳಗೊಂಡ ಈ ಆ್ಯಪ್‌ ನಿರ್ದಿಷ್ಟ ವಿಷಯವನ್ನು 12 ದಿನಗಳಲ್ಲಿ ಕಲಿಯುವುದಕ್ಕೆ ಸಹಾಯ ಮಾಡಲಿದೆ. ಪರೀಕ್ಷಾ ತಯಾರಿಯ ಸಮಯವನ್ನು ಕಡಿಮೆಗೊಳಿಸಲಿದೆ’ ಎಂದರು.

ಲರ್ನ್‌ಕ್ಯಾಬ್‌ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ರವಿಶಂಕರ್, ‘ಶಿಕ್ಷಣ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿರುವ ಗುರುರಾಜ ಕರಜಗಿ, ಬಾಲಸುಬ್ರಹ್ಮಣ್ಯಂ, ಜಿ.ಎಸ್.ಗಣೇಶ್‌ ಮೊದಲಾದ ಶಿಕ್ಷಣ ತಜ್ಞರು ಪರೀಕ್ಷಾ ತಯಾರಿ ಸಂಬಂಧ ನೀಡಿದ ಸಲಹೆಗಳು ಆ್ಯಪ್‌ನಲ್ಲಿ ಲಭ್ಯ’ ಎಂದು ಮಾಹಿತಿ ನೀಡಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು