ಬೆಂಗಳೂರು: ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ನಡೆಸುತ್ತಿರುವ ದಾಳಿಯನ್ನು ಖಂಡಿಸಿರುವ ವಿವಿಧ ಎಡಪಕ್ಷಗಳು, ಇದು ಅಮೆರಿಕದ ಸಾಮ್ರಾಜ್ಯಶಾಹಿ, ದುರಹಂಕಾರದ ಪರಾಕಾಷ್ಠೆ ಎಂದು ಟೀಕಿಸಿವೆ.

ದಾಳಿ ನಡೆಸಿ ಖಮೇನಿ ಅವರನ್ನು ಹತ್ಯೆ ಮಾಡಿರುವುದು, ಆಸ್ಪತ್ರೆಗಳ ಮೇಲೆ ಬಾಂಬ್ ದಾಳಿ ನಡೆಸುತ್ತಿರುವುದು, ಶಾಲೆಗಳ ಮೇಲೆ ಬಾಂಬ್ಗಳನ್ನು ಹಾಕಿ ಮಕ್ಕಳನ್ನು ಕೊಲ್ಲುತ್ತಿರುವುದು ಅಮಾನವೀಯ. ಇರಾನ್ ದೇಶದ ಸಾರ್ವಭೌಮತ್ವ, ವಿಶ್ವಸಂಸ್ಥೆಯ ನಿಯಮಗಳು ಮತ್ತು ಎಲ್ಲ ಅಂತರರಾಷ್ಟ್ರೀಯ ಒಪ್ಪಂದಗಳ ಘೋರ ಉಲ್ಲಂಘನೆಯಾಗಿದೆ ಎಂದು ಸಿಪಿಎಂ ಕಾರ್ಯದರ್ಶಿ ಪ್ರಕಾಶ್ ಕೆ., ಸಿಪಿಐ ಕಾರ್ಯದರ್ಶಿ ಸಾತಿ ಸುಂದರೇಶ್, ಸಿಪಿಐ (ಎಂಎಲ್) ಕಾರ್ಯದರ್ಶಿ ಕ್ಲಿಫ್ಟನ್ ರೊಜಾರಿಯೋ, ಎಸ್ಯುಸಿಐ (ಸಿ) ಕಾರ್ಯದರ್ಶಿ ಉಮಾ ಕೆ., ಎಐಎಫ್ಬಿ ಕಾರ್ಯದರ್ಶಿ ಜಿ.ಆರ್. ಶಿವಶಂಕರ್ ಆಗ್ರಹಿಸಿದ್ದಾರೆ.

ಇರಾನ್ ಮೇಲಿನ ದಾಳಿಯ ನಿಜವಾದ ಗುರಿ ಅಲ್ಲಿನ ನೈಸರ್ಗಿಕ ಸಂಪನ್ಮೂಲಗಳನ್ನು ಸ್ವಾಧೀನಪಡಿಸಿಕೊಳ್ಳುವುದಾಗಿದೆ ಎಂದು ತಿಳಿಸಿದ್ದಾರೆ.

ಮಾನವ ಹತ್ಯಾಕಾಂಡ ನಡೆಸುತ್ತಿರುವ ಇಸ್ರೇಲ್ಗೆ ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಭೇಟಿ ನೀಡಿ ಬೆಂಬಲ ಘೋಷಿಸಿದ್ದಾರೆ. ಈ ಪ್ರವಾಸ ಮುಗಿದ ಎರಡು ದಿನಗಳಲ್ಲೇ ಈ ದಾಳಿ ನಡೆದಿದೆ. ಇರಾನ್ ಮೇಲೆ ನಡೆದ ದಾಳಿಯನ್ನು ಭಾರತ ತೀವ್ರವಾಗಿ ಖಂಡಿಸಬೇಕು. ಇಸ್ರೇಲ್ ಮತ್ತು ಅಮೆರಿಕ ಕುರಿತು ತನ್ನ ನಿಲುವನ್ನು ಬದಲಾಯಿಸಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

‘ಜಾಗೃತ ನಾಗರಿಕರು–ಕರ್ನಾಟಕ’ ಟೀಕೆ

ಅಮೆರಿಕ ಮತ್ತು ಇಸ್ರೇಲ್ ಏಕಪಕ್ಷೀಯವಾಗಿ ಇರಾನ್ ಮೇಲೆ ನಡೆಸಿರುವ ಬಾಂಬ್ ಮತ್ತು ಕ್ಷಿಪಣಿ ದಾಳಿಯನ್ನು ‘ಜಾಗೃತ ನಾಗರಿಕರು–ಕರ್ನಾಟಕ’ ಖಂಡಿಸಿದೆ.

ಇರಾನ್ನ ಸಾರ್ವಭೌಮತ್ವ ಮತ್ತು ಸ್ವಾತಂತ್ರ್ಯದ ಮೇಲೆ ನಡೆದ ದಾಳಿ ಇದು ಎಂದು ‘ಜಾಗೃತ ನಾಗರಿಕರು ಕರ್ನಾಟಕ’ದ ಕೆ.ಮರುಳ ಸಿದ್ದಪ್ಪ, ಜಿ. ರಾಮಕೃಷ್ಣ, ವಿಜಯಾ, ಎಸ್.ಜಿ. ಸಿದ್ದರಾಮಯ್ಯ, ವಿಮಲಾ ಕೆ.ಎಸ್., ಬಿ. ಶ್ರೀಪಾದ ಭಟ್, ಬಂಜಗೆರೆ ಜಯಪ್ರಕಾಶ್, ಟಿ. ಸುರೇಂದ್ರ ರಾವ್, ವಸುಂಧರಾ ಭೂಪತಿ, ಎನ್. ಗಾಯತ್ರಿ, ಮಾವಳ್ಳಿ ಶಂಕರ್, ಜಾಣಗೆರೆ ವೆಂಕಟರಾಮಯ್ಯ, ರುದ್ರಪ್ಪ ಹನಗವಾಡಿ, ಮೀನಾಕ್ಷಿ ಬಾಳಿ, ಇಂದಿರಾ ಕೃಷ್ಣಪ್ಪ, ವಾಸುದೇವ ಉಚ್ಚಿಲ, ಎನ್.ಕೆ. ವಸಂತರಾಜ್, ಬಿ.ಆರ್. ಮಂಜುನಾಥ್, ಎಚ್.ಜಿ. ಜಯಲಕ್ಷ್ಮಿ ಟೀಕಿಸಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ನೆತನ್ಯಾಹು ಹೇಳಿಕೆ ಅನಾಗರಿಕತೆ ಮತ್ತು ಸಾಮ್ರಾಜ್ಯಶಾಹಿ ಧೋರಣೆಯ ಪ್ರತೀಕ. ಅಮೆರಿಕ ಮತ್ತು ಇರಾನ್ ಮಧ್ಯೆ ಶಾಂತಿ ಮಾತುಕತೆ ನಡೆಯುತ್ತಿರುವಾಗ ನಡೆಸಿದ ಇವರಿಬ್ಬರ ಈ ಪುಂಡಾಟಿಕೆ ಜಾಗತಿಕವಾಗಿ ತೀವ್ರವಾದ ಸಂಘರ್ಷ ಸೃಷ್ಟಿಸಿದೆ ಎಂದು ಹೇಳಿದ್ದಾರೆ.

ಇರಾನ್ ಮೇಲಿನ ದಾಳಿಯನ್ನು ಖಂಡಿಸಬೇಕು ಮತ್ತು ಯುದ್ಧವನ್ನು ತಕ್ಷಣವೇ ನಿಲ್ಲಿಸಬೇಕೆಂದು ಭಾರತ ಸರ್ಕಾರ ಆಗ್ರಹಿಸಬೇಕು ಎಂದು ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.