ಬೆಂಗಳೂರು: ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಮತ್ತು ಕ್ರೈಸ್ಟ್ ಡೀಮ್ಡ್ ಟು ಬಿ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಲಾ ಜಂಟಿಯಾಗಿ ಕಾನೂನು ಸೇವಾ ಕ್ಲಿನಿಕ್ ಬಲಪಡಿಸಲು ಒಪ್ಪಂದವನ್ನು 10 ವರ್ಷ ಕಾಲ ನವೀಕರಿಸಿವೆ.

ಕ್ರೈಸ್ಟ್ ವಿಶ್ವವಿದ್ಯಾಲಯದ ಸೆಂಟ್ರಲ್ ಕ್ಯಾಂಪಸ್ನಲ್ಲಿ ಬುಧವಾರ ಒಪ್ಪಂದ ನವೀಕರಣ ಸಮಾರಂಭ ನಡೆಯಿತು.

ಕಾನೂನು ಸೇವಾ ಪ್ರಾಧಿಕಾರದ ಬೆಂಗಳೂರು ನಗರ ಜಿಲ್ಲಾ ಸದಸ್ಯ ಕಾರ್ಯದರ್ಶಿ ಎಚ್. ಶಶಿಧರ ಶೆಟ್ಟಿ, ‘ಕಾನೂನು ಶಿಕ್ಷಣವು ಕೇವಲ ತರಗತಿಗಳಲ್ಲದೆ ಜನಜೀವನಕ್ಕೂ ತಲುಪಬೇಕು. ಇಂತಹ ದೀರ್ಘಾವಧಿ ಸಹಯೋಗವು ವಿದ್ಯಾರ್ಥಿಗಳು ಹಾಗೂ ಸಮಾಜದ ಸಬಲಿಕರಣಕ್ಕೆ ಸಹಕಾರಿಯಾಗಲಿದೆ’ ಎಂದು ಹೇಳಿದರು.

ಕಳೆದ ದಶಕದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಕಾನೂನು ಜಾಗೃತಿ ಶಿಬಿರಗಳು, ಮನೆಮನೆ ಸಮೀಕ್ಷೆ, ಮಹಿಳೆಯರ ಹಾಗೂ ಕಾರ್ಮಿಕರ ಹಕ್ಕುಗಳ ಕುರಿತು ಕಾರ್ಯಾಗಾರ, ಕಾನೂನು ಸಲಹಾ ಶಿಬಿರ ನಡೆಸಲಾಗಿದೆ ಎಂದು ಕಾನೂನು ಸೇವಾ ಕ್ಲಿನಿಕ್ ಸಂಯೋಜಕರಾದ ಎಚ್.ಎಲ್. ಜಯಂತಿ ಬಾಯಿ ತಿಳಿಸಿದರು.

ಮುಂದಿನ 10 ವರ್ಷಗಳಲ್ಲಿ ಇನ್ನಷ್ಟು ಆಧುನಿಕ ಕಾನೂನು ಸೇವೆಗಳು, ಡಿಜಿಟಲ್ ಸಹಾಯ ವೇದಿಕೆ, ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳ ವಿಶೇಷ ಕಾರ್ಯಕ್ರಮಗಳು, ಕಾನೂನು ಅರಿವು ಗ್ರಾಮ ಸಂಚಾರಗಳನ್ನು ನಡೆಸಲು ವೇದಿಕೆ ಒದಗಿಸಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರಿಜಿಸ್ಟ್ರಾರ್ ಅನಿಲ್ ಜೋಸೆಫ್ ಪಿಂಟೊ, ಟಿ.ವಿ.ಥಾಮಸ್, ಎಸ್.ಸಪ್ನಾ, ಪಿ.ಶಿಬು, ಜಯದೇವ ಎಸ್. ನಾಯರ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.