ಬೆಂಗಳೂರು: ವಿನಾಯಕ ಗೋಕಾಕ್ ವಾಙ್ಮಯ ಟ್ರಸ್ಟ್ನ ‘ವಿ.ಕೃ. ಗೋಕಾಕ್ ಫೆಲೋಶಿಪ್’ಗೆ ಲಿಂಗರಾಜ ಸೊಟ್ಟಪ್ಪನವರ್ ಮತ್ತು ಅಂಜನಾ ಹೆಗಡೆ ಆಯ್ಕೆಯಾಗಿದ್ದಾರೆ.

ಹೊಸ ಪ್ರತಿಭೆಗಳನ್ನು ಅಧ್ಯಯನದಲ್ಲಿ ತೊಡಗಿಸುವ ಉದ್ದೇಶದಿಂದ ಟ್ರಸ್ಟ್ ಈ ಫೆಲೋಶಿಪ್ ಪ್ರಾರಂಭಿಸಿದೆ. ಲಿಂಗರಾಜ ಸೊಟ್ಟಪ್ಪನವರ್ ಅವರ ‘ಗೋಕಾಕರ ಕಾವ್ಯದಲ್ಲಿ ಪುರಾಣ’ ಮತ್ತು ಅಂಜನಾ ಹೆಗಡೆ ಅವರ ‘ಗೋಕಾಕರ ಕಾವ್ಯಮಯ ಸಂಗೀತಲೋಕ’ ಪ್ರಬಂಧಗಳನ್ನು ಈ ಫೆಲೋಶಿಪ್ಗೆ ಆಯ್ಕೆ ಮಾಡಲಾಗಿದೆ. ಅನಿಲ್ ಗೋಕಾಕ್, ನರಹಳ್ಳಿ ಬಾಲಸುಬ್ರಹ್ಮಣ್ಯ, ನ. ರವಿಕುಮಾರ ಅವರನ್ನೊಳಗೊಂಡ ಸಮಿತಿ ಈ ಆಯ್ಕೆ ಮಾಡಿದೆ.

ಈ ಫೆಲೋಶಿಪ್ ತಲಾ ₹15 ಸಾವಿರ ನಗದು ಮತ್ತು ಫಲಕವನ್ನು ಒಳಗೊಂಡಿದೆ. ಇದೇ 28ರಂದು ಮಧ್ಯಾಹ್ನ 12.30ಕ್ಕೆ ಎನ್.ಎಂ.ಕೆ.ಆರ್.ವಿ ಮಹಿಳಾ ಕಾಲೇಜಿನಲ್ಲಿ ಟ್ರಸ್ಟ್ನ ಅಧ್ಯಕ್ಷ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಈ ಫೆಲೋಶಿಪ್ ವಿತರಿಸಿ, ‘ಗೋಕಾಕರ ಸಾಹಿತ್ಯಯಾನ’ ವಿಷಯದ ಬಗೆಗೆ ಉಪನ್ಯಾಸ ನೀಡುತ್ತಾರೆ ಎಂದು ಟ್ರಸ್ಟ್ ಕಾರ್ಯದರ್ಶಿ ನ. ರವಿಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.