ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ ಉಲ್ಲಂಘನೆ ಡ್ರೋನ್‌ ಕ್ಯಾಮೆರಾ ಕಣ್ಣು!

Last Updated 7 ಏಪ್ರಿಲ್ 2020, 21:25 IST
ಅಕ್ಷರ ಗಾತ್ರ

ಬೆಂಗಳೂರು: ಲಾಕ್‌ಡೌನ್ ಉಲ್ಲಂಘಿಸಿ ಅನಗತ್ಯವಾಗಿ ಓಡಾಡುವವರ ಮೇಲೆ ಇನ್ನು ಮುಂದೆ ಡ್ರೋನ್ ಕ್ಯಾಮೆರಾ ಹದ್ದಿನ ಕಣ್ಣಿಡಲಿದೆ.

ಜನರು ಮನೆಯಿಂದ ಹೊರಗೆ ಬರುವುದನ್ನು ನಿಯಂತ್ರಿಸಲು ಮತ್ತು ಎಚ್ಚರಿಕೆ ಸಂದೇಶ ರವಾನಿಸಲು ಪೊಲೀಸ್ ಇಲಾಖೆ ಸಹಯೋಗದಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್ ಸೈನ್ಸ್ ವಿಶೇಷ ಡ್ರೋನ್‌ ಅಭಿವೃದ್ಧಿಪಡಿಸಿದೆ. ಈ ಡ್ರೋನ್ ಕಾರ್ಯಾಚರಣೆಗೆ ಪೊಲೀಸ್‌ ಕಮಿಷನರ್‌ ಭಾಸ್ಕರ್ ರಾವ್ ತಮ್ಮ ಕಚೇರಿಯಲ್ಲಿ ಮಂಗಳವಾರ ಚಾಲನೆ ನೀಡಿದರು.

ಡ್ರೋನ್ ವಿಶೇಷತೆಗಳೇನು?: ಈ ಡ್ರೋನ್‌ ಮೂರು ಕೆ.ಜಿ ತೂಕವಿದ್ದು, ಜಿಪಿಎಸ್ ಅಳಡಿಸಲಾಗಿದೆ. ವಿಶೇಷಕ್ಯಾಮೆರಾ ಜತೆಗೆ ಹೊಯ್ಸಳ ಧ್ವನಿವರ್ಧಕ ಕೂಡಾ ಜೋಡಿಸಲಾಗಿದೆ. ಒಂದೂವರೆ ಕಿ.ಮೀ ವ್ಯಾಪ್ತಿಯವರೆಗೂ ಡ್ರೋನ್ ಹಾರಾಟ ನಡೆಸಲಿದ್ದು, ಜನದಟ್ಟಣೆ ಪ್ರದೇಶದ ದೃಶ್ಯಗಳನ್ನು ಸೆರೆ ಹಿಡಿದು ಪೊಲೀಸರಿಗೆ ರವಾನಿಸಲಿದೆ.

ಈ ಡ್ರೋನ್‌ ಸಹಾಯದಿಂದ ಒಂದೆಡೆ ಕುಳಿತುಕೊಂಡು ಪೊಲೀಸ್ ಸಿಬ್ಬಂದಿ ಒಂದೂವರೆ ಕಿ.ಮೀ ವ್ಯಾಪ್ತಿಯಲ್ಲಿ ಸುತ್ತಮುತ್ತ ನಿಗಾ ಇಡಬಹುದು. ಧ್ವನಿವರ್ಧಕದ ಮೂಲಕ ಎಚ್ಚರಿಕೆ ಸಂದೇಶ ರವಾನಿಸಬಹುದು. ಕೊರೊನಾ ಬಗ್ಗೆ ಪ್ರಕಟಣೆಗಳನ್ನುನೀಡಬಹುದು. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್‌ ಸೈನ್ಸ್‌ನ ಸಿಬ್ಬಂದಿ ಸದ್ಯ ಈ ಡ್ರೋನ್‌ ಅನ್ನು ನಿರ್ವಹಿಸಲಿದ್ದಾರೆ.

109 ಠಾಣೆಗಳ ವ್ಯಾಪ್ತಿಗೆ ವಿಸ್ತರಣೆ?: ಪ್ರಸ್ತುತ 10ರಿಂದ 12 ಡ್ರೋನ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ. ಶಿವಾಜಿನಗರ, ಕೆ.ಜಿ. ಹಳ್ಳಿ, ಗೌರಿಪಾಳ್ಯ, ಚಿಕ್ಕಪೇಟೆ ಸೇರಿ ನಗರದ ಸೂಕ್ಷ್ಮಪ್ರದೇಶಗಳಲ್ಲಿ ಮೊದಲ ಹಂತದಲ್ಲಿ ಇವು ಹಾರಾಡಲಿವೆ. ಇಲ್ಲಿ ಯಶಸ್ವಿಯಾದ ಬಳಿಕ ನಗರದ 109 ಠಾಣಾ ವ್ಯಾಪಿಯಲ್ಲೂ ಬಳಸಲು ಚಿಂತನೆ ನಡೆಸಲಾಗಿದೆ ಎಂದು ಭಾಸ್ಕರ್ ರಾವ್ ತಿಳಿಸಿದರು.

‘ಕಾನೂನು ಉಲ್ಲಂಘಿಸುವವರಮೇಲೆಕಣ್ಣಿಡಲು ಮತ್ತು ಸೋಂಕು ಹರಡುವ ಬಗ್ಗೆ ಜಾಗೃತಿ ಮೂಡಿಸಲು ಈ ಡ್ರೋನ್ ಸಹಕಾರಿಯಾಗಿದೆ. ಈ ವ್ಯವಸ್ಥೆಯ ಜೊತೆ ಕೈ ಜೋಡಿಸಲು ಬಯಸುವ ಖಾಸಗಿ ವ್ಯಕ್ತಿಗಳಿಗೂ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಯಾರಾದರೂ ಬಯಸಿದರೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್‌ ಸೈನ್ಸ್ ಸಂಸ್ಥೆಯ ತಂಡದ ಜೊತೆ ಭಾಗಿಯಾಗುವಂತೆ ಮಾಡಲು ಚಿಂತನೆ ನಡೆದಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT