ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮತದಾನದ ಅರಿವು ಮೂಡಿಸಿ: ತುಷಾರ್‌ ಗಿರಿನಾಥ್‌

Published 25 ಮಾರ್ಚ್ 2024, 23:47 IST
Last Updated 25 ಮಾರ್ಚ್ 2024, 23:47 IST
ಅಕ್ಷರ ಗಾತ್ರ

ಬೆಂಗಳೂರು: ದೊಡ್ಡ ಅಪಾರ್ಟ್‌ಮೆಂಟ್‌ ಗಳು ಹಾಗೂ ಹೆಚ್ಚು ಮತದಾರರಿರುವ ವಸತಿ ಸಮುಚ್ಚಯಗಳಲ್ಲಿರುವ ಸಂಘಗಳ ಸದಸ್ಯರು ಮತದಾನದ ಪ್ರಮಾಣ ಹೆಚ್ಚಾಗಲು ಎಲ್ಲರಲ್ಲೂ ಅರಿವು ಮೂಡಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ತುಷಾರ್‌ ಗಿರಿನಾಥ್‌ ಹೇಳಿದರು.

ಲೋಕಸಭಾ ಚುನಾವಣೆಗೆ
ಸಂಬಂಧಿಸಿದಂತೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿ
ಗಳೊಂದಿಗೆ ಸೋಮವಾರ ವಿಡಿಯೊ ಸಂವಾದ ನಡೆಸಿದರು.

‘ಚುನಾವಣೆಯ ಸಂಪೂರ್ಣ ಮಾಹಿತಿಯನ್ನು ಚುನಾವಣಾ ವಿಭಾಗ ದಿಂದ ನೀಡಲಾಗುವುದು. ಆ ಮಾಹಿತಿ ಯನ್ನು ತಮ್ಮ ಸಮುಚ್ಚಯಗಳಲ್ಲಿ ಬಿತ್ತ ರಿಸಿಕೊಂಡು ಮತದಾನದ ಕುರಿತು ಅರಿವು ಮೂಡಿಸಬೇಕು. ಜೊತೆಗೆ ತಪ್ಪದೆ ಮತದಾನ ಮಾಡುವಂತೆ ಎಲ್ಲರಿಗೂ ಪ್ರೇರೇಪಿಸಬೇಕು’ ಎಂದು ತಿಳಿಸಿದರು.

‘ಬಿಬಿಎಂಪಿ ವ್ಯಾಪ್ತಿಯ 28 ವಿಧಾನ ಸಭೆ ಕ್ಷೇತ್ರಗಳು ನಾಲ್ಕು ಲೋಕಸಭಾ ಕ್ಷೇತ್ರಗಳಿಗೆ ಬರಲಿದ್ದು, ಮತದಾನದ ಪ್ರಮಾಣವನ್ನು ಕಳೆದ ಬಾರಿಗಿಂತ ಹೆಚ್ಚಳ ಮಾಡಬೇಕಿದೆ. ಅದಕ್ಕೆ ತಮ್ಮ ಸಹಕಾರ ಅತ್ಯಗತ್ಯವಿದೆ’ ಎಂದು ಹೇಳಿದರು.

‘85 ವರ್ಷ ಮೇಲ್ಪಟ್ಟವರು ಹಾಗೂ ಅಂಗವಿಕಲರಿಗೆ ಅಂಚೆ ಮತದಾನ ಮಾಡುವ ಅವಕಾಶವಿದ್ದು, ಆ ಕುರಿತು ಮಾಹಿತಿ ನೀಡಿ ಬೂತ್ ಮಟ್ಟದ ಅಧಿಕಾರಿಗಳಿಂದ 12ಡಿ ನಮೂನೆ ಗಳನ್ನು ಭರ್ತಿ ಮಾಡಿಸಬೇಕು’ ಎಂದು ಹೇಳಿದರು.

ಮತಗಟ್ಟೆಗಳ ಬಳಿ ಶೌಚಾಲಯ, ಕುಡಿಯುವ ನೀರು, ಕುರ್ಚಿಗಳು, ಫ್ಯಾನ್‌, ವಿದ್ಯುತ್ ವ್ಯವಸ್ಥೆ, ಅಂಗವಿಕಲರಿಗೆ ರ‍್ಯಾಂಪ್ ವ್ಯವಸ್ಥೆ ಸೇರಿದಂತೆ ಇನ್ನಿತರೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗು
ವುದು ಎಂದರು.

ಸ್ವೀಪ್ ಮೇಲ್ವಿಚಾರಣಾ ಸಮಿತಿಯ ಅಧ್ಯಕ್ಷ ಕಾಂತರಾಜು, ಬೆಂಗಳೂರು ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿ ಪ್ರತಿಭಾ, ನಿವಾಸಿ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT