ಬೆಂಗಳೂರು: ನಗರದಲ್ಲಿ ತಾಪಮಾನ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಚಳಿ ಹೆಚ್ಚಲಾರಂಭಿಸಿದೆ. ಇದರಿಂದಾಗಿ ಜನರು ಮುಂಜಾನೆ ಹಾಗೂ ಸಂಜೆ ವೇಳೆ ಥಂಡಿಯಿಂದ ರಕ್ಷಿಸಿಕೊಳ್ಳಲು ಬೆಚ್ಚನೆಯ ಉಡುಪುಗಳ ಮೊರೆ ಹೋಗುತ್ತಿದ್ದಾರೆ.

ಮೋಡ ಕವಿದ ವಾತಾವರಣ, ತೇವಾಂಶಯುಕ್ತ ಗಾಳಿಯಿಂದಾಗಿ ದಿನವಿಡೀ ಚಳಿಯ ಅನುಭವವಾಗುತ್ತಿದೆ. ಶನಿವಾರ ಇಡೀ ದಿನ ಮೋಡ ಕವಿದ ವಾತಾವರಣ ಇತ್ತು. ತಾಪಮಾನ ಕುಸಿದಿತ್ತು. ಗರಿಷ್ಠ ಉಷ್ಣಾಂಶ ಸಾಮಾನ್ಯಕ್ಕಿಂತ ಐದರಿಂದ ಆರು ಡಿಗ್ರಿ ಕುಸಿದಿದ್ದು, 22.6 ಡಿಗ್ರಿ ದಾಖಲಾಗಿತ್ತು. ತೇವಾಂಶಯುಕ್ತ ಗಾಳಿ, ಚಳಿಯಿಂದಾಗಿ ಜನರು ಬಿಸಿ ಪಾನೀಯ, ಬೆಚ್ಚನೆಯ ಉಡುಪಿನ ಮೊರೆ ಹೋದರು.

ನಗರದ ಮೂರು ಸ್ಥಳದಲ್ಲಿ ತಾಪಮಾನ ಮಾಪನ ಕೇಂದ್ರಗಳಿವೆ. ಎಚ್ಎಎಲ್, ಬೆಂಗಳೂರು ನಗರ ಪ್ರದೇಶ, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವೀಕ್ಷಣಾಲಯವಿದೆ. ಹವಾಮಾನ ಇಲಾಖೆಯ ಪ್ರಕಾರ, ಕಳೆದ ವಾರ ಸರಾಸರಿ ಗರಿಷ್ಠ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ವರದಿಯಾಗಿತ್ತು.

ಬಂಗಾಳಕೊಲ್ಲಿಯ ನೈರುತ್ಯ ಭಾಗದಲ್ಲಿ ವಾಯುಭಾರ ಕುಸಿತದಿಂದಾಗಿ ನಗರದ ವಾತಾವರಣದಲ್ಲಿನ ಉಷ್ಣಾಂಶ ತಗ್ಗಲು ಕಾರಣ. ನಗರದ ಮೂರು ಸ್ಥಳದಲ್ಲಿನ ತಾಪಮಾನ ಮಾಪನ ಕೇಂದ್ರದಲ್ಲಿ ಶನಿವಾರ ಗರಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿದ್ದರೆ, ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿ ದಾಖಲಾಗಿತ್ತು.

‘ಇದು ಈ ವರ್ಷದ ಎರಡನೆ ಅತೀ ಕಡಿಮೆ ಗರಿಷ್ಠ ಉಷ್ಣಾಂಶವಾಗಿದೆ. ಮುಂದಿನ ನಾಲ್ಕು ದಿನಗಳು ಮೋಡ ಕವಿದ ವಾತಾವರಣ ಇರಲಿದ್ದು, ತುಂತುರು ಮಳೆಯಾಗುವ ಸಾಧ್ಯತೆಯಿದೆ’ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

‘ಫೆಸಿಫಿಕ್ ಮಹಾಸಾಗರದಲ್ಲಿ ಮೇಲ್ಮೈ ಉಷ್ಣಾಂಶ ಕಡಿಮೆಯಾಗುವುದರಿಂದ ಹೆಚ್ಚಿನ ಚಳಿಯ ಅನುಭವವಾಗಲಿದೆ. ‘ಲಾ-ನಿನೊ’ ಪರಿಸ್ಥಿತಿಯಿಂದಾಗಿ ಡಿಸೆಂಬರ್ ತಿಂಗಳಲ್ಲಿ ಅಧಿಕ ಚಳಿ ಇರಲಿದ್ದು, ಈ ಚಳಿಯ ಅನುಭವ ಜನವರಿಯಿಂದ ಮಾರ್ಚ್ವರೆಗೂ ಮುಂದುವರೆಯುವ ಸಾಧ್ಯತೆ ಇದೆ’ ಎಂದು ಹವಾಮಾನ ತಜ್ಞರು ತಿಳಿಸಿದರು.

ಬೆಚ್ಚನೆ ಉಡುಪುಗಳಿಗೆ ಬೇಡಿಕೆ

ನಗರದಲ್ಲಿ ವಾರದಿಂದ ಚಳಿ ಕಾಣಿಸಿಕೊಂಡಿದ್ದರಿಂದ ಮಾರುಕಟ್ಟೆಯಲ್ಲಿ ಬೆಚ್ಚನೆಯ ಉಡುಪುಗಳಿಗೆ ಬೇಡಿಕೆ ಹೆಚ್ಚಿದೆ. ವಿದ್ಯಾರ್ಥಿಗಳು ಉದ್ಯೋಗಿಗಳು ಕಾರ್ಮಿಕರು ಬೆಚ್ಚನೆಯ ಉಡುಪಿನ ಮೊರೆ ಹೋಗುತ್ತಿದ್ದಾರೆ. ಮಕ್ಕಳು ವೃದ್ಧರು ಯುವತಿಯರು ಟೋಪಿ–ಸ್ವೇಟರ್ ಧರಿಸಿ ಸಂಚರಿಸುತ್ತಿರುವುದು ಸಾಮಾನ್ಯವಾಗಿದೆ. ಕಾರ್ಮಿಕರು ವ್ಯಾಪಾರಿಗಳು ಮುಂಜಾನೆ ಚಳಿಗೆ ನಡುಗುತ್ತಲೇ ಕೆಲಸ ಕಾರ್ಯದಲ್ಲಿ ತೊಡಗಿಕೊಳ್ಳುತ್ತಿದ್ದಾರೆ.

ಡಿಸೆಂಬರ್ ತಿಂಗಳಲ್ಲಿ ಚಳಿಯ ತೀವ್ರತೆ ಹೆಚ್ಚಲಿದ್ದು ಕನಿಷ್ಠ ಉಷ್ಣಾಂಶ 16ರಿಂದ 15 ಡಿಗ್ರಿ ಸೆಲ್ಸಿಯಸ್ಗೆ ಇಳಿಯುವ ಸಾಧ್ಯತೆಯಿದೆ. ಮಾರ್ಚ್ ಮೊದಲ ವಾರದವರೆಗೂ ಚಳಿ ಇರುವ ಸಂಭವವಿದೆ
-ಸಿ.ಎಸ್. ಪಾಟೀಲ್, ಹವಾಮಾನ ತಜ್ಞ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.