ಬೆಂಗಳೂರು: ಶಾಲಾ ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಮಧ್ಯಾಹ್ನದ ಊಟ ಒದಗಿಸಲು ಟ್ರಾನ್ಸ್ ಡಿಸಿಪ್ಲಿನರಿ ಯುನಿವರ್ಸಿಟಿ ಆಫ್ ಹೆಲ್ತ್ ಸೈನ್ಸ್ಸ್ ಆ್ಯಂಡ್ ಟೆಕ್ನಾಲಜಿ (ಟಿಡಿಯು) ಮತ್ತು ಅಕ್ಷಯ ಪಾತ್ರ ಫೌಂಡೇಶನ್ (ಟಿಎಪಿಎಫ್) ಒಪ್ಪಂದ ಮಾಡಿಕೊಂಡಿವೆ.

ಶಾಲಾ ಮಕ್ಕಳ ಆರೋಗ್ಯ ಮತ್ತು ಕ್ಷೇಮ ನೋಡಿಕೊಳ್ಳುವುದರ ಜೊತೆಗೆ ಅವರಿಗೆ ಹೊಸ ಉತ್ಪನ್ನ ಅಭಿವೃದ್ಧಿ, ಸಂಶೋಧನೆ ಕುರಿತು ತರಬೇತಿಯನ್ನು ಒದಗಿಸಲಾಗುತ್ತದೆ.

ಭಾರತದಾದ್ಯಂತ ಲಕ್ಷಾಂತರ ಮಕ್ಕಳಿಗೆ ಮಧ್ಯಾಹ್ನದ ಊಟ ಒದಗಿಸುವ ಅಕ್ಷಯ ಪಾತ್ರ ಸಂಸ್ಥೆಯ ವ್ಯಾಪ್ತಿ ಮತ್ತು ಪೌಷ್ಟಿಕತೆ ಹಾಗೂ ಆರೋಗ್ಯ ವಿಜ್ಞಾನ ಕ್ಷೇತ್ರದಲ್ಲಿ ಟಿಡಿಯು ಹೊಂದಿರುವ ಪರಿಣತಿಯನ್ನು ಬಳಸಿಕೊಂಡು ಶಾಲಾ ಮಕ್ಕಳನ್ನು ಅಭಿವೃದ್ಧಿ ಪಥದಲ್ಲಿ ಕರೆದೊಯ್ಯುವ ಉದ್ದೇಶವಿದೆ ಎಂದು ಅಕ್ಷಯ ಪಾತ್ರ ಫೌಂಡೇಶನ್ ತಿಳಿಸಿದೆ.

ಈ ಒಪ್ಪಂದಕ್ಕೆ ಟಿಡಿಯುನ ರಿಜಿಸ್ಟ್ರಾರ್ ಮತ್ತು ಸಿಎಫ್ಒ ಅತುಲ್ ಕೆ. ಗುಪ್ತಾ ಮತ್ತು ಅಕ್ಷಯ ಪಾತ್ರ ಫೌಂಡೇಶನ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸನಿಲ್ ಭಾಸ್ಕರನ್ ಅವರು ಸಹಿ ಹಾಕಿದ್ದಾರೆ.

ಸೋಯಾ ಮತ್ತು ಅಕ್ಕಿಯಂತಹ ಸಸ್ಯಾಧಾರಿತ ಪ್ರೋಟಿನ್ಗಳನ್ನು ಬಳಸಿಕೊಂಡು ಕಡಿಮೆ ವೆಚ್ಚದಲ್ಲಿ ಪ್ರೋಟಿನ್ಯುಕ್ತ ಸಮೃದ್ಧ ಊಟವನ್ನು ಒದಗಿಸುವುದರ ಮೇಲೆ ಈ ಸಂಸ್ಥೆಗಳು ಗಮನ ಹರಿಸಲಿವೆ. ಸಿರಿ ಧಾನ್ಯಗಳನ್ನು ಬಳಸಿಕೊಂಡು ಪೌಷ್ಟಿಕ ಆಹಾರ ತಯಾರಿಸುವ ನಿಟ್ಟಿನಲ್ಲಿಯೂ ವಿಶ್ಲೇಷಣೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.