‘ಚಿಕ್ಕೋಡಿ ತಾಲ್ಲೂಕಿನ ಹಿರೇಕೋಡಿಯ ಕಾಮಕುಮಾರ ನಂದಿ ಮಹರಾಜರ ಹತ್ಯೆಯನ್ನು ಜೈನ ಸಮಾಜವು ಬಲವಾಗಿ ಖಂಡಿಸುತ್ತದೆ. ಈ ಘಟನೆಯಿಂದ ನಮ್ಮ ಸಮಾಜವು ಅಸುರಕ್ಷತೆಯಿಂದ ಭಯಭೀತವಾಗಿದೆ. ಸರ್ವರ ಹಿತವನ್ನು ಬಯಸುವ, ಶಾಂತಿ, ಅಹಿಂಸೆ, ಪ್ರೇಮದ ಭಾವನೆಯನ್ನು ನಾಡಿಗೆ ಸಾರುತ್ತಿರುವ ಜೈನ ಸಮಾಜದ ಮೇಲೆ, ಸಾಧುಗಳ ಮೇಲೆ ನಡೆದಿರುವ ಈ ಆಕ್ರಮಣ ಖಂಡನೀಯ. ದೇಶ ವಿದೇಶದಲ್ಲಿರುವ ಜೈನ ಸಮುದಾಯವು ಸಾಧು, ಸಾಧ್ವಿಗಳ ಅಭದ್ರತೆಯ ಕುರಿತು ಭಯದಿಂದ ತತ್ತರಿಸಿದೆ’ ಎಂದು ಕೇಂದ್ರದ ಅಧ್ಯಕ್ಷ ಮಹೇಂದ್ರ ಸಿಂಘಿ ಕಳವಳ ವ್ಯಕ್ತಪಡಿಸಿದ್ದಾರೆ.