ನಗರದ ಎಲ್ಲ ಪ್ರದೇಶಗಳಿಗೆ ಹಾಗೂ ಹೊರ ರಾಜ್ಯದ ಎಲ್ಲ ಭಾಗಗಳಿಗೆ ಮೆಜೆಸ್ಟಿಕ್‌ನಿಂದ ಬಸ್ ಸೇವೆ ಇದೆ. ನಿಲ್ದಾಣದಿಂದ ಹೊರಬರುವ ಬಹುತೇಕ ಬಸ್‌ಗಳು ಶೇಷಾದ್ರಿ ರಸ್ತೆ ಮೂಲಕ ಸಾಗುತ್ತವೆ. ದಟ್ಟಣೆ ಉಂಟಾದರೆ ಬಸ್‌ಗಳು ನಿಂತಲೇ ನಿಲ್ಲಬೇಕಾಗುತ್ತದೆ. ಮೆಜೆಸ್ಟಿಕ್‌ಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು
ದೇವೇಂದ್ರ ನಾಯಕ್ ಆಟೊ ಡ್ರೈವರ್
ಮೆಜೆಸ್ಟಿಕ್‌ನಿಂದ ಓಕಳಿಪುರಂ ಜಂಕ್ಷನ್‌ಗೆ ಸಂರ್ಪಕ ಕಲ್ಪಿಸುವ ರಸ್ತೆಯಲ್ಲಿ ಗುಂಡಿಗಳು ಬಿದ್ದಿವೆ. ಈ ರಸ್ತೆಯಲ್ಲಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ರಸ್ತೆಯಲ್ಲಿ ಗುಂಡಿಗಳು ಬಿದ್ದಿರುವ ಕಾರಣ ವಾಹನ ಸಂಚಾರ ನಿಧಾನವಾಗಿ ಸಂಚಾರ ದಟ್ಟಣೆ ಆಗುತ್ತಿದೆ. ಮೆಜೆಸ್ಟಿಕ್‌ನ ಧನ್ವಂತರಿ ರಸ್ತೆಯಲ್ಲಿ ಖಾಸಗಿ ಬಸ್‌ಗಳು ಲಗೇಜ್ ತುಂಬಿಕೊಳ್ಳಲು ಸಾಲುಗಟ್ಟಿ ನಿಲ್ಲುವುದರಿಂದ ರಾತ್ರಿ ಸಮಯದಲ್ಲಿ ವಿಪರೀತ ದಟ್ಟಣೆ ಆಗುತ್ತಿದೆ. ಸಂಚಾರ ವಿಭಾಗದ ಪೊಲೀಸರು ಇದಕ್ಕೆ ಕಡಿವಾಣ ಹಾಕಬೇಕು