ಶನಿವಾರ, ಜೂನ್ 19, 2021
26 °C

ಶೀಘ್ರ 19 ಮಳಿಗೆ ಆರಂಭಿಸಲಿದೆ ಮಲಬಾರ್ ಗೋಲ್ಡ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಚಿನ್ನಾಭರಣಗಳ ಚಿಲ್ಲರೆ ಮಾರಾಟ ಕ್ಷೇತ್ರದ ಮುಂಚೂಣಿ ಸಂಸ್ಥೆಗಳಲ್ಲಿ ಒಂದಾದ ‘ಮಲಬಾರ್‌ ಗೋಲ್ಡ್‌ ಆ್ಯಂಡ್‌ ಡೈಮಂಡ್ಸ್‌’ ದೇಶದ ವಿವಿಧ ನಗರಗಳಲ್ಲಿ ಮತ್ತು ವಿದೇಶಗಳಲ್ಲಿ ವಹಿವಾಟು ವಿಸ್ತರಿಸುವ ಭಾರಿ ಯೋಜನೆ ಯನ್ನು ಜಾರಿಗೊಳಿಸುತ್ತಿದೆ. ಇನ್ನು ಮೂರು ತಿಂಗಳುಗಳಲ್ಲಿ ಒಟ್ಟು 19 ಅತ್ಯಾಧುನಿಕ ಮಾರಾಟ ಮಳಿಗೆಗಳನ್ನು ಆರಂಭಿಸಲಿದೆ.

ಭಾರತದ ವಿವಿಧ ರಾಜ್ಯಗಳಲ್ಲಿ ಒಟ್ಟು 13 ಮಾರಾಟ ಮಳಿಗೆಗಳು ಹಾಗೂ ವಿವಿಧ ದೇಶಗಳಲ್ಲಿ 6 ಮಳಿಗೆಗಳು ಆರಂಭವಾಗಲಿವೆ.

ಚಂಡಿಗಡ, ತಮಿಳುನಾಡಿನ ಕುಂಭಕೋಣಂ, ಪಟ್ನಾ, ತೆಲಂಗಾಣದ ಕಮ್ಮಮ್‌, ಉತ್ತರ ಪ್ರದೇಶದ ಲಖನೌ ಮತ್ತು ಗಾಜಿಯಾ ಬಾದ್‌, ಮಧ್ಯಪ್ರದೇಶದ ಇಂದೋರ್‌, ಮಹಾರಾಷ್ಟ್ರದ ವಾಶಿ ಮತ್ತು ಥಾಣೆ, ಒಡಿಶಾದ ಭುವನೇಶ್ವರ, ದೆಹಲಿಯ ದ್ವಾರಕ ಹಾಗೂ ಆಂಧ್ರಪ್ರದೇಶದ ಶ್ರಿಕಾಕುಳಂಗಳಲ್ಲಿ ಮಳಿಗೆಗಳು ಆರಂಭವಾಗಲಿವೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು