ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲಬಾರ್ ಗ್ರೂಪ್‌: ‘ಹಸಿವು ಮುಕ್ತ ಜಗತ್ತು’ ಯೋಜನೆ ವಿಸ್ತರಣೆ

Published 28 ಮೇ 2024, 16:22 IST
Last Updated 28 ಮೇ 2024, 16:22 IST
ಅಕ್ಷರ ಗಾತ್ರ

ಬೆಂಗಳೂರು: ನಿರ್ಗತಿಕರಿಗೆ ಪ್ರತಿದಿನ ಊಟ ಪೂರೈಕೆ ಮಾಡುವ ‘ಹಸಿವು ಮುಕ್ತ ಜಗತ್ತು’ ಯೋಜನೆಯನ್ನು ಇನ್ನಷ್ಟು ಸ್ಥಳಗಳು ಮತ್ತು ವ್ಯಕ್ತಿಗಳಿಗೆ ಮಲಬಾರ್ ಗ್ರೂಪ್ ವಿಸ್ತರಿಸಿದೆ.

ಕಾರ್ಪೊರೇಟ್‌ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್‌ಆರ್‌) ಅಡಿ ಸಂಸ್ಥೆ ಈ ಯೋಜನೆ ನಡೆಸುತ್ತಿದೆ. ಸದ್ಯ ಯೋಜನೆಯಡಿ ಪ್ರತಿ ದಿನ 31 ಸಾವಿರ ಆಹಾರ ಪೊಟ್ಟಣಗಳನ್ನು ವಿತರಣೆ ಮಾಡಲಾಗುತ್ತಿದೆ. ವಿಶ್ವಸಂಸ್ಥೆಯ ‘ಸುಸ್ಥಿರ ಅಭಿವೃದ್ಧಿ ಗುರಿ 2- ಶೂನ್ಯ ಹಸಿವು’ ಕಾರ್ಯಕ್ರಮಕ್ಕೆ ನೆರವಾಗಲು ಮಲಬಾರ್ ಗ್ರೂಪ್ ಈ ಯೋಜನೆಯನ್ನು ಜಾರಿಗೆ ತಂದಿದೆ. ಇದರ ವಿಸ್ತರಣೆ ಭಾಗವಾಗಿ ಇನ್ನು ಮುಂದೆ ಪ್ರತಿ ದಿನ 51 ಸಾವಿರ ಆಹಾರ ಪೊಟ್ಟಣಗಳನ್ನು ವಿತರಣೆ ಮಾಡಲಾಗುತ್ತದೆ.

ಎಂ.ಜಿ.ರಸ್ತೆಯಲ್ಲಿರುವ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ನಲ್ಲಿ ಮಂಗಳವಾರ ನಡೆದ ವಿಶ್ವ ಹಸಿವು ಮುಕ್ತ ದಿನದ ಕಾರ್ಯಕ್ರಮದಲ್ಲಿ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕಿ ರೋಹಿಣಿ.ಕೆ ಯೋಜನೆಯ ವಿಸ್ತರಣೆಗೆ ಚಾಲನೆ ನೀಡಿದರು. ಮಲಬಾರ್ ಗ್ರೂಪ್‌ನ ಕರ್ನಾಟಕ ವಲಯದ ಮುಖ್ಯಸ್ಥ ಫಿಲ್ಸರ್ ಬಾಬು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT