ಗುರುವಾರ , ಫೆಬ್ರವರಿ 9, 2023
30 °C
* ಕಾಲೇಜು ಶೌಚಾಲಯದಲ್ಲಿ ರಹಸ್ಯ ಕ್ಯಾಮೆರಾ ಇರಿಸುತ್ತಿದ್ದ ವಿದ್ಯಾರ್ಥಿ * ವಶಕ್ಕೆ ಪಡೆದು ವಿಚಾರಣೆ

ಬೆಂಗಳೂರು: ವಿದ್ಯಾರ್ಥಿನಿಯರ 1,200 ಅರೆನಗ್ನ ವಿಡಿಯೊ ಚಿತ್ರೀಕರಿಸಿದ್ದವನ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಾಲೇಜು ಶೌಚಾಲಯಗಳಲ್ಲಿ ರಹಸ್ಯ ಕ್ಯಾಮೆರಾ ಅಳವಡಿಸಿ ವಿದ್ಯಾರ್ಥಿನಿಯರ ಅರೆನಗ್ನ ಫೋಟೊ ಹಾಗೂ ವಿಡಿಯೊ ಚಿತ್ರೀಕರಿಸುತ್ತಿದ್ದ ಆರೋಪದಡಿ ಶುಭಂ ಎಂ. ಆಜಾದ್ (21) ಎಂಬುವರ ವಿರುದ್ಧ ಗಿರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಹೊಸಕೆರೆಹಳ್ಳಿ ದ್ವಾರಕನಗರದಲ್ಲಿರುವ ಪಿಇಎಸ್ ಕಾಲೇಜಿನಲ್ಲಿ ಬಿಬಿಎ ಎಲ್‌ಎಲ್‌ಬಿ ಐದನೇ ಸೆಮಿಸ್ಟರ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದ ಆರೋಪಿ ಶುಭಂ, ಮೂರು ವರ್ಷಗಳಿಂದ ಕೃತ್ಯ ಎಸಗುತ್ತಿದ್ದ. ಕಾಲೇಜಿನ ವಿಭಾಗವೊಂದರ ಡೀನ್‌ ನೀಡಿರುವ ದೂರಿನಡಿ ಶುಭಂ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ವಿದ್ಯಾರ್ಥಿನಿಯರ ಶೌಚಾಲಯಕ್ಕೆ ಹೋಗುತ್ತಿದ್ದ ಆರೋಪಿ, ಯಾರಿಗೂ ಕಾಣದಂತೆ ರಹಸ್ಯ ಕ್ಯಾಮೆರಾ ಅಳವಡಿಸುತ್ತಿದ್ದ.
ಶೌಚಾಲಯ ಬಳಸುತ್ತಿದ್ದ ವಿದ್ಯಾರ್ಥಿನಿಯರ ಅರೆನಗ್ನ ಫೋಟೊ ಹಾಗೂವಿಡಿಯೊ ಕ್ಯಾಮೆರಾದಲ್ಲಿ ಸೆರೆಯಾಗುತ್ತಿತ್ತು. ಕೆಲ ದಿನ
ಬಿಟ್ಟು ಶೌಚಾಲಯಕ್ಕೆ ಹೋಗುತ್ತಿದ್ದ ಆರೋಪಿ, ಕ್ಯಾಮೆರಾ ತೆಗೆದುಕೊಂಡು ಬರುತ್ತಿದ್ದ’ ಎಂದು ಮೂಲಗಳು ತಿಳಿಸಿವೆ.

‘ಕ್ಯಾಮೆರಾ ಅಳವಡಿಸಲೆಂದು ಆರೋಪಿ ಇತ್ತೀಚೆಗೆ ಶೌಚಾಲಯಕ್ಕೆ ಹೋಗಿದ್ದ. ಇದೇ ವೇಳೆಯಲ್ಲಿ ವಿದ್ಯಾರ್ಥಿನಿಯರು ಆರೋಪಿಯನ್ನು ಕಂಡು ಚೀರಾಡಿದ್ದರು. ಕಾಲೇಜು ಸಿಬ್ಬಂದಿ ಹಿಡಿಯುವಷ್ಟರಲ್ಲೇ ಆರೋಪಿ ಪರಾರಿಯಾಗಿದ್ದ’ಎಂದಿವೆ.

‘ನಂತರ, ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದಾಗ ಆರೋಪಿ ಶುಭಂ ಎಂಬುದು ಗೊತ್ತಾಗಿತ್ತು’ ಎಂದು ಹೇಳಿವೆ.

ಸ್ನೇಹಿತೆಯರ ವಿಡಿಯೊ ಚಿತ್ರೀಕರಣ: ‘ಸಹಪಾಠಿಯಾಗಿದ್ದ ಐವರು ಸ್ನೇಹಿತೆಯರ ಜೊತೆ ಆರೋಪಿ ಹೆಚ್ಚು ಕಾಲ ಕಳೆಯುತ್ತಿದ್ದ. ಸ್ನೇಹಿತೆಯರ ಗಮನಕ್ಕೆ ಬಾರದಂತೆ ಅವರ ಅರೆನಗ್ನ ಫೋಟೊ ಹಾಗೂ ವಿಡಿಯೊಗಳನ್ನು ಚಿತ್ರೀಕರಿಸಿಕೊಳ್ಳುತ್ತಿದ್ದ. ಅವುಗಳನ್ನೇ ಸ್ನೇಹಿತರಿಗೆ ಕಳುಹಿಸುತ್ತಿದ್ದ. ಕೆಲ ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲೂ ಅಪ್‌ಲೋಡ್ ಮಾಡಿರುವ ಮಾಹಿತಿ ಇದೆ’
ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಕಾಲೇಜಿನ ಎಲ್ಲ ವಿದ್ಯಾರ್ಥಿನಿಯರ ಫೋಟೊ ಹಾಗೂ ವಿಡಿಯೊ ಚಿತ್ರೀಕರಿಸಲು ಮುಂದಾಗಿದ್ದ ಆರೋಪಿ, ಶೌಚಾಲಯದಲ್ಲಿ ಕ್ಯಾಮೆರಾ ಇರಿಸಲಾರಂಭಿಸಿದ್ದ. ಮೂರು ವರ್ಷಗಳಲ್ಲಿ ಹಲವು ವಿದ್ಯಾರ್ಥಿನಿಯರ ಸುಮಾರು 1,200 ಫೋಟೊ ಹಾಗೂ ವಿಡಿಯೊಗಳನ್ನು ಚಿತ್ರೀಕರಿ
ಸಿರುವುದಾಗಿ ಆರೋಪಿಯೇ ತಪ್ಪೊಪ್ಪಿಕೊಂಡಿದ್ದಾನೆ’ ಎಂದು ಹೇಳಿವೆ.

ಕ್ಷಮಾಪಣಾ ಪತ್ರ ನೀಡಿದ್ದ ಆರೋಪಿ: ‘ಅರೆನಗ್ನ ವಿಡಿಯೊ ಚಿತ್ರೀಕರಣ ಮಾಡುವಾಗ ಸಿಕ್ಕಿಬಿದ್ದಿದ್ದ ಆರೋಪಿ ಶುಭಂ, ಕಾಲೇಜಿಗೆ ಕ್ಷಮಾಪಣಾ ಪತ್ರ ಬರೆದುಕೊಟ್ಟಿದ್ದ. ಇದಾದ ನಂತರವೂ ತನ್ನ ಹಳೇ ಚಾಳಿ ಮುಂದುವರಿಸಿದ್ದ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಆರೋಪಿಯ ಒಂದು ಮೊಬೈಲ್ ಜಪ್ತಿ ಮಾಡಲಾಗಿದ್ದು, ಕೆಲ ಫೋಟೊ ಹಾಗೂ ವಿಡಿಯೊಗಳು ಪತ್ತೆಯಾಗಿದೆ. ಇನ್ನೊಂದು ಮೊಬೈಲ್ ಜಪ್ತಿ ಮಾಡಬೇಕಿದ್ದು, ಅದರಲ್ಲಿ ಮತ್ತಷ್ಟು ವಿದ್ಯಾರ್ಥಿನಿಯರ ಫೋಟೊ ಹಾಗೂ ವಿಡಿಯೊ ಸಂಗ್ರಹವಿರುವ ಮಾಹಿತಿ ಇದೆ’ ಎಂದು ಹೇಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು