ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ವಿಮಾನದಲ್ಲಿ ಬೀಡಿ ಸೇದಿದ ವ್ಯಕ್ತಿ ಬಂಧನ

Published 17 ಮೇ 2023, 13:05 IST
Last Updated 17 ಮೇ 2023, 13:05 IST
ಅಕ್ಷರ ಗಾತ್ರ

ಬೆಂಗಳೂರು: ವಿಮಾನ ಪ್ರಯಾಣದ ವೇಳೆ ಬೀಡಿ ಸೇದಿದ ವ್ಯಕ್ತಿಯನ್ನು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.

ರಾಜಸ್ಥಾನ ಮೂಲದ ವ್ಯಕ್ತಿಯೊಬ್ಬರು ಇದೇ ಮೊದಲ ಬಾರಿಗೆ ವಿಮಾನದಲ್ಲಿ ಪ್ರಯಾಣ ಮಾಡಿದ್ದು, ಈ ವೇಳೆ ಈ ಕೃತ್ಯ ಎಸಗಿದ್ದಾರೆ.

ರಾಜಸ್ಥಾನದ ಮರ್ವಾರ್‌ ಮೂಲದ 56 ವರ್ಷ ವ್ಯಕ್ತಿ ಅಹಮದಾಬಾದ್‌ನಿಂದ ಆಕಾಶ ಏರ್‌ನಲ್ಲಿ ಬೆಂಗಳೂರಿಗೆ ಪ್ರಯಾಣಿಸಿದ್ದಾರೆ. ಪ್ರಯಾಣದ ವೇಳೆ ಶೌಚಾಲಯಕ್ಕೆ ತೆರಳಿ ಬೀಡಿ ಸೇದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೂಡಲೇ ವಿಮಾನ ಪರಿಚಾರಕರು ಕ್ರಮ ತೆಗೆದುಕೊಂಡಿದ್ದು, ಲ್ಯಾಂಡಿಂಗ್ ಆದ ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.

ತಾನು ಇದೇ ಮೊದಲ ಬಾರಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿರುವುದಾಗಿಯೂ, ನಿಯಮಗಳ ಬಗ್ಗೆ ತಮಗೆ ಅರಿವಿಲ್ಲದಿರುವುದಾಗಿಯೂ ವಿಚಾರಣೆ ವೇಳೆ ವ್ಯಕ್ತಿ ಹೇಳಿದ್ದಾರೆ.

ರೈಲು ಪ್ರಯಾಣದ ವೇಳೆ ಶೌಚಾಲಯದಲ್ಲಿ ಬೀಡಿ ಸೇದುತ್ತಿದ್ದೆ. ಅದನ್ನೇ ಇಲ್ಲಿಯೂ ಮಾಡಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT