ಬೆಂಗಳೂರು: ಪಾಸ್ಪೋರ್ಟ್ ಅರ್ಜಿಗಳ ಪರಿಶೀಲನೆ ಪ್ರಕ್ರಿಯೆಯ ವೇಳೆ ಪೊಲೀಸ್ ಸಿಬ್ಬಂದಿ ಕಡ್ಡಾಯವಾಗಿ ಬಾಡಿವೋರ್ನ್ ಕ್ಯಾಮೆರಾ ಬಳಕೆ ಮಾಡಬೇಕು. ಜತೆಗೆ, ನಿಗದಿತ ಮಾನದಂಡಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ನಗರ ಪೊಲೀಸ್ ಕಮಿಷನರ್ ಸೀಮಾಂತ್ಕುಮಾರ್ ಸಿಂಗ್ ಅವರು ಆದೇಶಿಸಿದ್ದಾರೆ.

ಪಾಸ್ಪೋರ್ಟ್ ಅರ್ಜಿದಾರರನ್ನು ಪೊಲೀಸ್ ಠಾಣೆಗಳಿಗೆ ಪರಿಶೀಲನೆಗೆಂದು ಕರೆಸುವಂತಿಲ್ಲ. ಪಾಸ್ಪೋರ್ಟ್ ಅರ್ಜಿಗಳ ಪರಿಶೀಲನೆಗೆ ಅರ್ಜಿದಾರರು ನೀಡಿರುವ ವಿಳಾಸಕ್ಕೆ ಹೋಗುವ ಮೊದಲು ಅರ್ಜಿದಾರರಿಗೆ ಮಾಹಿತಿ ನೀಡಬೇಕು (ಕನಿಷ್ಠ 24 ಗಂಟೆಗಳ ಮುಂಚಿತವಾಗಿ ಎಸ್ಎಂಎಸ್ ಅಥವಾ ಕರೆ ಮಾಡುವ ಮೂಲಕ). ಎಲ್ಲ ಕ್ರಮಗಳನ್ನೂ ಪಾರದರ್ಶಕವಾಗಿ ದಾಖಲಿಸಬೇಕು.

ಪರಿಶೀಲನೆ ನಡೆಸುವ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿ ಆರಂಭದಿಂದ ಕೊನೆಯವರೆಗೆ ಬಾಡಿವೋರ್ನ್ ಕ್ಯಾಮೆರಾವನ್ನು ಕಡ್ಡಾಯವಾಗಿ ಧರಿಸಿರಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಎಲ್ಲ ವಿಭಾಗದ ಡಿಸಿಪಿಗಳು ಮೇಲ್ವಿಚಾರಣೆ ನಡೆಸಿ ವಾರಕ್ಕೊಮ್ಮೆ ನಗರ ಪೊಲೀಸ್ ಕಮಿಷನರ್ ಕಚೇರಿಗೆ ವರದಿ ಸಲ್ಲಿಸಬೇಕು. ಪರಿಶೀಲನೆಯ ವೇಳೆ ಕೆಲವು ನಿಯಮಗಳ ಪಾಲನೆಯಲ್ಲಿ ವಿನಾಯಿತಿ ಅಗತ್ಯವಿದ್ದಲ್ಲಿ ಕಚೇರಿಗೆ ಲಿಖಿತ ಮನವಿ ಸಲ್ಲಿಸಿ ಪೂರ್ವಾನುಮತಿ ಪಡೆದುಕೊಳ್ಳಬೇಕು ಎಂದು ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.