ಶುಕ್ರವಾರ, ಜೂಲೈ 10, 2020
22 °C
ಮಣಿಪಾಲ್‌ ಆಸ್ಪತ್ರೆಯಲ್ಲಿ ಯಶಸ್ವಿ ಚಿಕಿತ್ಸೆ

ಅಮ್ಮನಿಗೆ ಕಿಡ್ನಿ ನೀಡಲು ವಿವಾಹವನ್ನೇ ರದ್ದುಪಡಿಸಿದಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದ ತಾಯಿಗೆ ಮಗಳೇ ಮೂತ್ರಪಿಂಡ ದಾನ ಮಾಡಿದ್ದು, ಇಲ್ಲಿನ ಮಣಿಪಾಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಯಶಸ್ವಿಯಾಗಿದೆ. 

ಬಾಂಗ್ಲಾದೇಶದ ಶಿಖಾರಾಣಿ ಕಿಡ್ನಿ ಸಮಸ್ಯೆಯಿಂದ ಮಣಿಪಾಲ್‌ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಕಿಡ್ನಿ ಕಸಿ ಮಾಡಬೇಕೆಂದು ವೈದ್ಯರು ಸಲಹೆ ನೀಡಿದ್ದರು. ಅವರ 30 ವರ್ಷದ ಮಗಳು ಕಿಡ್ನಿ ದಾನ ಮಾಡಲು ನಿರ್ಧರಿಸಿದ್ದರು. ಆದರೆ, ಅವಿವಾಹಿತೆ ಆದ ಕಾರಣ ಆಕೆಯ ಕಿಡ್ನಿ ಪಡೆಯಲು ವೈದ್ಯರು ನಿರಾಕರಿಸಿದ್ದರು. ತಾಯಿಯ ಜೀವ ಉಳಿಯುವುದು ಮುಖ್ಯ ಎಂದು ನಿರ್ಧರಿಸಿದ ಯುವತಿ ಇದಕ್ಕಾಗಿ ನಿಶ್ಚಿತಾರ್ಥ ಹಾಗೂ ಮದುವೆಯನ್ನು ರದ್ದು ಮಾಡಿದರು’ ಎಂದು ಮಣಿಪಾಲ್ ಆಸ್ಪತ್ರೆಯ ಮೂತ್ರಪಿಂಡ ರೋಗತಜ್ಞ ಡಾ.ಸನಕರನ್‌ ಸುಂದರ್‌ ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಸಾಮಾನ್ಯವಾಗಿ ಅವಿವಾಹಿತ ಯುವತಿಯರು ಮೂತ್ರಪಿಂಡ ದಾನ ಮಾಡುವುದನ್ನು ನಾವು ಪ್ರೋತ್ಸಾಹಿಸುವುದಿಲ್ಲ. ಆದರೆ, ಭವಿಷ್ಯವನ್ನು ಲೆಕ್ಕಿಸದೇ ಅಮ್ಮನ ಜೀವ ಉಳಿಸಲು ಯುವತಿ ದೃಢವಾಗಿದ್ದಳು. ಹೀಗಾಗಿ ಅನಿವಾರ್ಯವಾಗಿ ಶಸ್ತ್ರಚಿಕಿತ್ಸೆ ಮಾಡಬೇಕಾಯಿತು. ಈಗ ಇಬ್ಬರ ಆರೋಗ್ಯ ಸುಧಾರಣೆಯಾಗಿದೆ’ ಎಂದು ತಿಳಿಸಿದರು.

‘ಕಳೆದ ವರ್ಷದವರೆಗೆ ಭಾರತದಲ್ಲಿ ಅಂಗಾಂಗ ದಾನ ‍‍‍ಪ್ರಮಾಣ ಪ್ರತಿ ದಶಲಕ್ಷ ಜನಸಂಖ್ಯೆಗೆ 0.5ರಷ್ಟಿತ್ತು. ಈ ವರ್ಷ 0.8ಕ್ಕೆ ತಲುಪಿದೆ. ಇಷ್ಟೆಲ್ಲ ಆದರೂ, ಅಮೆರಿಕ, ಚೀನಾ, ಜರ್ಮನಿ, ಆಸ್ಟ್ರೇಲಿಯಾ, ಬ್ರೆಜಿಲ್‌ನಂತಹ ದೇಶಗಳಿಗಿಂತ ನಾವು ಬಹಳ ಹಿಂದಿದ್ದೇವೆ’ ಎಂದರು.

 

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು