ಬೆಂಗಳೂರು: ಪುರುಷರ ಆರೋಗ್ಯ ಪ್ರೋತ್ಸಾಹಿಸಲುಮಣಿಪಾಲ್ ಆಸ್ಪತ್ರೆ ಭಾನುವಾರ ಬೆಳಿಗ್ಗೆ 7 ಗಂಟೆಯಿಂದ ನಗರದ ವಿವಿಧೆಡೆ ಬೈಕ್ ರ್ಯಾಲಿ ಹಮ್ಮಿಕೊಂಡಿದೆ.

ಭಾರತ್ ಬಿಯರ್ಡ್ ಕ್ಲಬ್ ಸಹಯೋಗದೊಂದಿಗೆ ನಡೆಯುವ ಈ ರ್ಯಾಲಿಗೆ ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಯಲ್ಲಿ ಚಾಲನೆ ದೊರೆಯಲಿದೆ.ಆಸ್ಪತ್ರೆಯ ವಿವಿಧ ವಿಭಾಗಗಳ ತಜ್ಞ ವೈದ್ಯರು ರ್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ.ಟ್ರಿನಿಟಿ ವೃತ್ತ, ಕಬ್ಬನ್ ಉದ್ಯಾನ, ಸ್ಯಾಂಕಿ ರಸ್ತೆ ಮತ್ತು ದೊಡ್ಡಬಳ್ಳಾಪುರದ ಮೂಲಕ ಸಾಗಿ, ಎಂಬೆಸಿ ಇಂಟರ್ನ್ಯಾಷನಲ್ ರೈಡಿಂಗ್ ಸ್ಕೂಲ್ನಲ್ಲಿ ಕೊನೆಗೊಳ್ಳಲಿದೆ.

‘ಈ ರ್ಯಾಲಿಯಲ್ಲಿ ಒಟ್ಟಾರೆ 35ಕಿ.ಮೀ. ದೂರಕ್ರಮಿಸಲಾಗುತ್ತದೆ.ಪ್ರೊಸ್ಟೇಟ್ ಕ್ಯಾನ್ಸರ್,ಮಾನಸಿಕ ಆರೋಗ್ಯ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ತಿಳಿಸಿ, ಜಾಗೃತಿ ಮೂಡಿಸಲಾಗುತ್ತದೆ’ ಎಂದು ಆಸ್ಪತ್ರೆಯಮುಖ್ಯ ಕಾರ್ಯಾಚರಣೆ ಅಧಿಕಾರಿ ಕಾರ್ತಿಕ್ ರಾಜಗೋಪಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.