ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬನಶಂಕರಿ ದೇಗುಲ ಅಭಿವೃದ್ಧಿಗೆ ‘ಮಾಸ್ಟರ್‌ ಪ್ಲಾನ್‌’

Last Updated 22 ಆಗಸ್ಟ್ 2022, 20:29 IST
ಅಕ್ಷರ ಗಾತ್ರ

ಬೆಂಗಳೂರು: ಮುಜರಾಯಿ ಇಲಾಖೆಯ ‘ದೈವಸಂಕಲ್ಪ’ ಯೋಜನೆಯಡಿ ನಗರದ ಬನಶಂಕರಿ ದೇವಸ್ಥಾನದ ಆವರಣದಲ್ಲಿರುವ ವರಪ್ರಸಾದ ಆಂಜನೇಯ ದೇವಸ್ಥಾನದ ಪುನರ್‌ನಿರ್ಮಾಣ, ಅನ್ನದಾಸೋಹ ಭವನದ ಮುಂಭಾಗ ಶಾಶ್ವತ ಚಾವಣಿ ನಿರ್ಮಾಣ, ಅನ್ನಪ್ರಸಾದ ವಿತರಣಾ ಕೌಂಟರ್‌ ಮತ್ತು ಆಸನಗಳ ವ್ಯವಸ್ಥೆಯ ಜೊತೆಗೆ ಲಿಫ್ಟ್‌ ಅಳವಡಿಸಲು ತೀರ್ಮಾನಿಸಲಾಗಿದೆ.

ಈ ಸಂಬಂಧ ದೇವಸ್ಥಾನದ ಸಮಗ್ರ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್‌ವೊಂದನ್ನು ರೂಪಿಸುವಂತೆ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಅಧಿಕಾರಿಗಳಿಗೆ ಸೂಚಿಸಿದರು.

ಕಂದಾಯ ಸಚಿವ ಆರ್‌.ಅಶೋಕ ಜತೆ ಸೋಮವಾರ ದೇವಸ್ಥಾನದ ಅಭಿ ವೃದ್ಧಿ ವಿಚಾರವಾಗಿ ಸಭೆ ನಡೆಸಿದರು.

ಬಳಿಕ ಅವರು ಹಿರಿಯ ಅಧಿಕಾರಿಗಳ ಜತೆಗೆ ಬನಶಂಕರಿ ದೇವಸ್ಥಾನಕ್ಕೆ ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ದೇವಸ್ಥಾನವನ್ನು ‘ದೈವಸಂಕಲ್ಪ’ ಯೋಜನೆಯ ಮೊದಲ ಹಂತದ ದೇವಾ
ಲಯಗಳ ಪಟ್ಟಿಯಲ್ಲಿ ಸೇರ್ಪಡೆ ಗೊಳಿಸ
ಲಾಗಿದೆ. ದೇವಾಲಯದ ಖಾತೆಯಲ್ಲಿ ₹48 ಕೋಟಿ ಇದ್ದು, ಈ ಹಣವನ್ನು ಬಳಸಿ ಭಕ್ತರ ಸ್ನೇಹಿ ಪರಿಸರವನ್ನು ನಿರ್ಮಾಣ ಮಾಡಲು ಯೋಜನೆ ರೂಪಿಸಬೇಕು ಎಂದು ಜೊಲ್ಲೆ ಹೇಳಿದರು.

ದೇವಸ್ಥಾನದ ಆವರಣದಲ್ಲಿರುವ 1915ರಲ್ಲಿ ನಿರ್ಮಾಣಗೊಂಡಿದ್ದ ವರಪ್ರಸಾದ ಆಂಜನೇಯ ದೇವಸ್ಥಾನ ಈಗ ಶಿಥಿಲಾವಸ್ಥೆಯಲ್ಲಿದೆ.

ಅದರ ಜೀರ್ಣೋದ್ಧಾರಕ್ಕಾಗಿ ಮೂಲ ದೇವಾಲಯದ ಗರ್ಭಗುಡಿಯ ಹಿಂಭಾಗ ಅಲಂಕಾರ ಮೂರ್ತಿಯಾಗಿ ಮತ್ತೊಂದು ಹೊಸ ಮೂರ್ತಿ ಪ್ರತಿಷ್ಠಾಪಿಸಲು ಮತ್ತು ಮೂಲ ದೇವಾಲಯದ ಗರ್ಭಗುಡಿ, ಪ್ರಾಂಗಣಗಳ ವಿಸ್ತೀರ್ಣವನ್ನು ವಿನ್ಯಾಸಗೊಳಿಸಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರಿಗೆ ದರ್ಶನಕ್ಕೆ ಅನುಕೂಲಕರವಾಗುವ ರೀತಿಯಲ್ಲಿ ನಕ್ಷೆಯನ್ನು ತಯಾರಿಸುವಂತೆಯೂ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಅನ್ನದಾಸೋಹ ಭವನದ ಮುಂಭಾಗ ಶಾಶ್ವತ ಚಾವಣಿ ನಿರ್ಮಾಣ, ಅನ್ನಪ್ರಸಾದ ವಿತರಣಾ ಕೌಂಟರ್‌ ಮತ್ತು ಆಸನಗಳ ನಿರ್ಮಾಣಕ್ಕಾಗಿ ಯೋಜನೆ ರೂಪಿಸಬೇಕು. ದೇವಾಲಯದ ಹಿಂಭಾ ಗದ‌ಲಿರುವ ಕಾಂಪೌಂಡ್‌ ಅನ್ನು ಎತ್ತರಿಸುವುದರ ಜೊತೆಗೆ ಗಾಳಿ–ಬೆಳಕು ಸರಾಗವಾಗಿ ಒಳಬರಲು ಕಾಂಪೌಂಡಿನ ಮೇಲ್ಭಾಗದಲ್ಲಿ ಲೂವರ್ಸ್‌ಗಳನ್ನು ಅಳ ವಡಿಸಬೇಕು. ದಾಸೋಹ ಭವನಕ್ಕೆ ನೆಲ ಮಾಳಿಗೆಯಿಂದ ಲಿಫ್ಟ್‌ ವ್ಯವಸ್ಥೆಯನ್ನೂ ಮಾಡಬೇಕು ಎಂದು ಸಲಹೆ
ನೀಡಿದರು.

ದೇವಸ್ಥಾನದ ಆವರಣದಲ್ಲಿರುವ ಸಾರ್ವಜನಿಕ ಶೌಚಾಲಯ ಕಟ್ಟಡ ತುಂಬ ಹಳೆಯದಾಗಿದೆ. ಪುರುಷರು ಮತ್ತು ಮಹಿಳೆಯರಿಗೆ ಒಂದೇ ಪ್ರವೇಶವಿದೆ. ಇದರಿಂದ ಭಕ್ತರಿಗೆ ಅನನುಕೂಲವಾಗುತ್ತಿದೆ. ಆದ್ದರಿಂದ ಆಧುನಿಕ ಮಾದರಿಯ ಶೌಚಾಲಯ ನಿರ್ಮಿಸಬೇಕು. ಇದಕ್ಕೆ ಅಂದಾಜುಪಟ್ಟಿ ಸಲ್ಲಿಸುವಂತೆಯೂ ಅವರು ಸೂಚಿಸಿದರು.

ಸಭೆಯಲ್ಲಿ ಮುಜರಾಯಿ ಆಯುಕ್ತೆ ರೋಹಿಣಿ ಸಿಂಧೂರಿ, ಲೋಕೋ ಪಯೋಗಿ ಇಲಾಖೆ ಅಧಿಕಾರಿಗಳು, ಬನಶಂಕರಿ ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಕೆ.ಪದ್ಮಾ ಹಾಗೂ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT