ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಟ್ರೊ: 5ಜಿ ನೆಟ್‌ವರ್ಕ್ ಪರೀಕ್ಷೆ ಯಶಸ್ವಿ

Last Updated 22 ಜುಲೈ 2022, 16:01 IST
ಅಕ್ಷರ ಗಾತ್ರ

ಬೆಂಗಳೂರು: 5ಜಿ ನೆಟ್‌ವರ್ಕ್ ಪ್ರಾಯೋಗಿಕ ಪರೀಕ್ಷೆಯನ್ನು ನಗರದ ಎಂ.ಜಿ.ರಸ್ತೆಯಲ್ಲಿನ ಮೆಟ್ರೊ ರೈಲು ನಿಲ್ದಾಣವನ್ನು ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ(ಟ್ರಾಯ್) ನಡೆಸಿದ್ದು, ಪರೀಕ್ಷೆ ಯಶಸ್ವಿಯಾಗಿದೆ.

ಹೊರಾಂಗಣ ಸಣ್ಣ ಕೋಶಗಳು(ಒಡಿಎಸ್‌ಸಿ), ಡಿಸ್ಟ್ರಿಬ್ಯೂಟೆಡ್ ಆಂಟೆನಾ ಸಿಸ್ಟಮ್(ಡಿಎಎಸ್) ಒಳಗೊಂಡಿರುವ ವ್ಯವಸ್ಥೆಯನ್ನು ಎಂ.ಜಿ. ರಸ್ತೆಯ ನಿಲ್ದಾಣದಲ್ಲಿ ರಿಲಯನ್ಸ್ ಜಿಯೊ ಕಂಪನಿ ಜುಲೈ 5ರಂದು ಅಳವಡಿಕೆ ಮಾಡಿತ್ತು. ಜುಲೈ 21ರವರಗೆ ಪರೀಕ್ಷೆ ನಡೆಸಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.

‘200 ಮೀಟರ್ ವ್ಯಾಸದಲ್ಲಿ 5ಜಿ ನೆಟ್‌ವರ್ಕ್ ಲಭ್ಯವಾಗುವಂತೆ ಅಳವಡಿಕೆ ಮಾಡಲಾಗಿತ್ತು. 1.45 ಜಿಬಿಪಿಎಸ್‌ ಡೌನ್‌ಲೋಡ್‌ ಮತ್ತು 65 ಎಂಬಿಪಿಎಸ್‌ ಅಪ್‌ಲೋಡ್‌ ವೇಗ ದಾಖಲಾಗಿದೆ. ಇದು 4ಜಿ ವೇಗಕ್ಕಿಂತ 50 ಪಟ್ಟು ಹೆಚ್ಚು ವೇಗವನ್ನು ಹೊಂದಿದೆ’ ಎಂದು ವಿವರಿಸಿದೆ.

ವಿಮಾನ ನಿಲ್ದಾಣ, ಬಂದರು, ಮೆಟ್ರೊ ರೈಲು ನಿಲ್ದಾಣ, ರೈಲು ನಿಲ್ದಾಣಗಳಲ್ಲಿ ಪ್ರಾಯೋಗಿಕವಾಗಿ 5ಜಿ ನೆಟ್‌ವರ್ಕ್ ಅಳವಡಿಸುವ ಕಾರ್ಯವನ್ನು ಟ್ರಾಯ್ ಆರಂಭಿಸಿದೆ. 5ಜಿ ನೆಟ್‌ವರ್ಕ್ ಬಳಸಿದ ದೇಶದ ಮೊದಲ ಮೆಟ್ರೊ ಎಂಬ ಹೆಗ್ಗಳಿಕೆಗೆ ಬಿಎಂಆರ್‌ಸಿಎಲ್ ಪಾತ್ರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT