ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡುವಿಗೂ ಮುನ್ನವೇ ಮೆಟ್ರೊ ಆರಂಭ?

ಯಲಚೇನಹಳ್ಳಿ ನಿಲ್ದಾಣ–ಅಂಜನಾಪುರ ಟೌನ್‌ಶಿಪ್ ಹಳಿ ಜೋಡಣೆ ಕಾರ್ಯ ಪೂರ್ಣ
Last Updated 9 ಫೆಬ್ರುವರಿ 2020, 20:13 IST
ಅಕ್ಷರ ಗಾತ್ರ

ಬೆಂಗಳೂರು:‘ನಮ್ಮ ಮೆಟ್ರೊ’ ಯೋಜನೆಯ ಎರಡನೇ ಹಂತದಲ್ಲಿ ಯಲಚೇನಹಳ್ಳಿ ನಿಲ್ದಾಣದಿಂದ ಅಂಜನಾಪುರ ಟೌನ್‌ಶಿಪ್‌ವರೆಗಿನ ವಿಸ್ತ ರಿಸಿದ ಮಾರ್ಗದಲ್ಲಿ (ರೀಚ್‌ 4ಬಿ) ಹಳಿ ಜೋಡಣೆ ಕಾರ್ಯ ಪೂರ್ಣಗೊಂಡಿದೆ. ಸಿಗ್ನಲಿಂಗ್‌ ಕಾರ್ಯ ಮಾರ್ಚ್‌ನಿಂದ ನಡೆಯಲಿದ್ದು, ಪರಿಷ್ಕೃತ ಗಡುವಿಗಿಂತ ಮುನ್ನವೇ ಮೆಟ್ರೊ ರೈಲು ಸಂಚರಿಸಲಿದೆ.

ಈ ಮಾರ್ಗದಲ್ಲಿ 2020ರ ಸೆಪ್ಟೆಂಬರ್‌ನಲ್ಲಿ ಮೆಟ್ರೊ ರೈಲು ಸಂಚಾರ ಆರಂಭವಾಗಲಿದೆ ಎಂದು ಬೆಂಗಳೂರು ಮೆಟ್ರೊ ರೈಲು
ನಿಗಮ ಹೇಳಿತ್ತು. ಆದರೆ, ಕಾಮಗಾರಿ ನಿರೀಕ್ಷೆ ಗಿಂತ ವೇಗವಾಗಿ ನಡೆಯುತ್ತಿದ್ದು, ಈ ವರ್ಷದ ಜುಲೈ ವೇಳೆಗೇ ಪ್ರಯಾ ಣಿಕರಿಗೆ ಮೆಟ್ರೊ ರೈಲು ಸೇವೆ ಆರಂಭ ವಾಗಲಿದೆ ಎಂದು ನಿಗಮದ ಮೂಲಗಳು ತಿಳಿಸಿವೆ.

‘ವಿಸ್ತರಿತ ಮಾರ್ಗದಲ್ಲಿ ಮೆಟ್ರೊ ರೈಲು ಸಂಚಾರ ಆರಂಭವಾದರೆ ಪ್ರಯಾಣದ ಅವಧಿ ಸಾಕಷ್ಟು ಕಡಿಮೆ ಯಾಗುತ್ತದೆ. ಬೆಳಿಗ್ಗೆ ಮತ್ತು ಸಂಜೆಯ ವೇಳೆ ಮೈಸೂರು ರಸ್ತೆ, ವೈಟ್‌ಫೀಲ್ಡ್‌ ಅಥವಾ ಮೆಜೆಸ್ಟಿಕ್‌ ಕಡೆಗೆ ಹೋಗಲು ತುಂಬಾ ದಟ್ಟಣೆ ಇರುತ್ತದೆ. ಈ ಮಾರ್ಗದಲ್ಲಿ ಮೆಟ್ರೊ ಸಂಚಾರ ಬೇಗ ಆರಂಭವಾದರೆ ಅನುಕೂಲವಾಗುತ್ತದೆ’ ಎಂದು ಪ್ರಯಾಣಿಕ ರಮೇಶ್‌ ಹೇಳುತ್ತಾರೆ.

ಕಾಮಗಾರಿ ಪ್ರಗತಿ:ಈ ಮಾರ್ಗದ ಅಂಜನಾಪುರ ಟೌನ್‌ ಷಿಪ್‌ನಅಂಜನಾಪುರ ರಸ್ತೆ (ಕೋಣನ ಕುಂಟೆ ಕ್ರಾಸ್‌),ಕೃಷ್ಣಲೀಲಾ ಪಾರ್ಕ್‌ (ಗುಬ್ಬಲಾಳ ಗೇಟ್‌), ವಜ್ರಹಳ್ಳಿ, ತಲಘಟ್ಟಪುರ, ಅಂಜನಾಪುರ ನಿಲ್ದಾಣ ಗಳಲ್ಲಿಹಳಿ ಜೋಡಣೆ ಪೂರ್ಣಗೊಂಡಿದೆ.

ನಿಲ್ದಾಣಗಳಿಗೆ ಬಣ್ಣ ಬಳಿಯ ಲಾಗಿದ್ದು, ನಿಲ್ದಾಣದೊಳಗೆ ಪ್ಲಾಟ್‌ ಫಾರಂ, ಟಿಕೆಟ್‌ ಕೌಂಟರ್, ಗ್ರಾಹಕ ಸೇವಾ ಕೇಂದ್ರಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ.

ಹಳಿಗಳ ಅಗಲ ಪರೀಕ್ಷೆ ನಂತರ, ರೈಲ್ವೆ ಇಲಾಖೆಯ ಸುರಕ್ಷತಾ ವಿಭಾಗದ ಆಯುಕ್ತರು ಪರಿಶೀಲನೆ ನಡೆಸಿದ ನಂತರ ಮೆಟ್ರೊ ರೈಲಿನ ಪರೀಕ್ಷಾರ್ಥ ಸಂಚಾರ ಶುರುವಾಗಲಿದೆ. ಅನುಮೋದನೆ ದೊರೆತ ನಂತರ, ಮೆಟ್ರೊ ರೈಲಿನ ವಾಣಿಜ್ಯ ಸಂಚಾರ ಆರಂಭವಾಗಲಿದೆ.

***

ಪೀಣ್ಯ ಡಿಪೊ ಬಳಕೆ

ಕನಕಪುರ ರಸ್ತೆಯಲ್ಲಿ ಅಂಜನಾ ಪುರ ಡಿಪೊಗೆ ವಯಡಕ್ಟ್‌ ನಿರ್ಮಾಣ ಮಾಡುವುದಕ್ಕೆ ಬಿಎಂಆರ್‌ಸಿಎಲ್‌ಗೆ 856 ಚದರ ಮೀಟರ್‌ನಷ್ಟು ನೈಸ್‌ ಜಾಗದ ಅವಶ್ಯಕತೆ ಇದೆ. ಆದರೆ, ಭೂಸ್ವಾಧೀನ ಪ್ರಕ್ರಿಯೆ ವಿಳಂಬವಾಗುತ್ತಿರುವುದರಿಂದ ಕಾಮಗಾರಿಯೂ ನಿಧಾನವಾಗಿತ್ತು. ಸದ್ಯಕ್ಕೆ, ಅಂಜನಾಪುರ ಡಿಪೊ ಬದಲು ಪೀಣ್ಯ ಡಿಪೊವನ್ನೇ ಬಳಸಿಕೊಂಡು ಕಾರ್ಯಾಚರಣೆ ಪ್ರಾರಂಭಿಸಲು ನಿರ್ಧರಿಸಲಾಗಿದೆ. ಹೀಗಾಗಿ, ಭೂಸ್ವಾಧೀನ ಪ್ರಕ್ರಿಯೆ ನಿಧಾನವಾದರೂ, ರೈಲು ಕಾರ್ಯಾಚರಣೆಗೆ ತೊಂದರೆ ಯಾಗದು ಎಂದು ನಿಗಮದ ಅಧಿಕಾರಿಗಳು ಹೇಳಿದರು.

ಯಲಚೇನಹಳ್ಳಿ-ಅಂಜನಾಪುರ

ಮಾರ್ಗದ ಉದ್ದ: 6.29 ಕಿ.ಮೀ.

ಒಟ್ಟು ನಿಲ್ದಾಣಗಳು 5

ಮಾರ್ಗದ ಯೋಜನಾ ವೆಚ್ಚ: ₹1,765 ಕೋಟಿ

ಸಿವಿಲ್ ಕಾಮಗಾರಿ ಯೋಜನೆ ವೆಚ್ಚ: ₹508.86 ಕೋಟಿ

ಕಾಮಗಾರಿ ಆರಂಭ: 2016ರ ಮೇ

ಕಾಮಗಾರಿ ಮುಕ್ತಾಯ: 2020ರ ಜುಲೈ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT