ಬೆಳಿಗ್ಗೆಯಿಂದ ಬೈಯ್ಯಪ್ಪನಹಳ್ಳಿವರೆಗೆ ಸಂಚರಿಸುತ್ತಿದೆ ಮೆಟ್ರೊ ರೈಲು

7

ಬೆಳಿಗ್ಗೆಯಿಂದ ಬೈಯ್ಯಪ್ಪನಹಳ್ಳಿವರೆಗೆ ಸಂಚರಿಸುತ್ತಿದೆ ಮೆಟ್ರೊ ರೈಲು

Published:
Updated:

ಬೆಂಗಳೂರು: ಮೆಟ್ರೊ ಪರ್ಪಲ್‌ ಲೈನ್‌ ಮತ್ತೆ ಕಾರ್ಯಾರಂಭ ಮಾಡಿದೆ. ಮಂಗಳವಾರ ಬೆಳಿಗ್ಗೆ 9 ಗಂಟೆಯ ನಂತರ ಮೈಸೂರು ರಸ್ತೆಯಿಂದ ಬೈಯ್ಯಪ್ಪನಹಳ್ಳಿಯವರೆಗೆ ಮೆಟ್ರೊ ರೈಲುಗಳು ಸಂಚರಿಸಿದವು.

ಸೋಮವಾರ ರಾತ್ರಿಯೇ ಮೆಟ್ರೊ ನಿಗಮದ ಸಿಬ್ಬಂದಿ ಪ್ರಾಯೋಗಿಕ ಸಂಚಾರ (ಟ್ರಯಲ್ ರನ್) ನಡೆಸಿದ ಮಾರ್ಗದ ಸುರಕ್ಷತೆ ಖಾತ್ರಿಪಡಿಸಿಕೊಂಡಿದ್ದರು. ಮಂಗಳವಾರ ಮಧ್ಯಾಹ್ನ 1 ಗಂಟೆಯ ನಂತರ ರೈಲುಗಳು ಸಂಚರಿಸಲಿವೆ ಎಂದು ಹೇಳಲಾಗಿತ್ತು. ಆದರೆ ಸುರಕ್ಷಿತ ಎಂದು ಖಾತ್ರಿಯಾದ ಕಾರಣ ಬೆಳಿಗ್ಗೆಯೇ ರೈಲುಗಳನ್ನು ಓಡಿಸುವ ನಿರ್ಧಾರ ತೆಗೆದುಕೊಳ್ಳಲಾಯಿತು.

‘ಪರ್ಪಲ್‌ ಲೈನ್‌ನಲ್ಲಿ ಮಾರ್ಗದ ಸುರಕ್ಷತಾ ಪರೀಕ್ಷೆ ನಡೆಯುತ್ತಿದೆ. ನಗರದಲ್ಲಿ ಉಳಿದೆಲ್ಲ ಪಿಲ್ಲರ್ ಹಾಗೂ ವಯಾಡಕ್ಟ್‌ಗಳ ತಾಂತ್ರಿಕ ಪರಿಶೀಲನೆ ನಡೆಸಲು ನಿರ್ಧರಿಸಲಾಗಿದೆ. ದೋಷ ಕಂಡುಬಂದಲ್ಲಿ ತಕ್ಷಣ ಸರಿಪಡಿಸಲಾಗುವುದು’ ಎಂದು ಮೆಟ್ರೊ ನಿಗಮದ ಹಿರಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಬಿ.ಎಲ್.ಯಶವಂತ ಚೌಹಾಣ್ ತಿಳಿಸಿದರು.

ಟ್ರಿನಿಟಿ ಸ್ಟೇಷನ್‌ ಬಳಿಯ ಪಿಲ್ಲರ್ ಸಂಖ್ಯೆ 155ರ ಮೇಲೆ ಭಾರತೀಯ ವಿಜ್ಞಾನ ಸಂಸ್ಥೆಯ ತಜ್ಞರ ತಂಡ ನಿಗಾ ವಹಿಸಲಿದೆ. ಈ ಪಿಲ್ಲರ್ ವಯಾಡಕ್ಟ್ ಪ್ರದೇಶದಲ್ಲಿ 27 ಸೆನ್ಸರ್‌ಗಳನ್ನು ಅಳವಡಿಸಲಾಗಿದೆ. ಇವುಗಳ ಮೂಲಕ ವಯಾಡಕ್ಟ್ ಅದರ ತಾಳಿಕೆ ಸಾಮರ್ಥ್ಯವನ್ನು ಅಳೆಯಲಾಗುವುದು ಎಂದು ಮೆಟ್ರೊ ಅಧಿಕಾರಿಗಳು ತಿಳಿಸಿದರು.

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !