ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಟ್ರೊ: ಪ್ರಯಾಣಿಕರ ಸಂಖ್ಯೆ ಹೆಚ್ಚಳ

Last Updated 16 ಏಪ್ರಿಲ್ 2021, 5:27 IST
ಅಕ್ಷರ ಗಾತ್ರ

ಬೆಂಗಳೂರು: ಸಾರಿಗೆ ನೌಕರರ ಮುಷ್ಕರ ಕಾರಣದಿಂದಾಗಿ ನಗರದೊಳಗೆ ಏಕೈಕ ಸಾರ್ವಜನಿಕ ಸಾರಿಗೆ ಎನಿಸಿರುವ ಮೆಟ್ರೊ ರೈಲಿನ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ.

ಕೋವಿಡ್‌ ಮಾರ್ಗಸೂಚಿಯಡಿ ಅನೇಕ ನಿರ್ಬಂಧಗಳ ಹೊರತಾಗಿಯೂ, ಮೆಟ್ರೊ ರೈಲು ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಏ.9ರಂದು 1.89 ಲಕ್ಷ ಪ್ರಯಾಣಿಕರು ಮೆಟ್ರೊ ಬಳಸಿದ್ದಾರೆ.

ಕೋವಿಡ್‌ ಬಿಕ್ಕಟ್ಟಿಗೂ ಮುನ್ನ, ನಿತ್ಯ ಸರಾಸರಿ 4.5 ಲಕ್ಷ ಜನ ಪ್ರಯಾಣಿಸುತ್ತಿದ್ದರು. ಕಳೆದ ಸೆಪ್ಟೆಂಬರ್‌ನಲ್ಲಿ ಮೆಟ್ರೊ ಸೇವೆ ಪುನರಾರಂಭಗೊಂಡ ಸಂದರ್ಭದಲ್ಲಿ ಸರಾಸರಿ 31 ಸಾವಿರ ಜನ ಮೆಟ್ರೊ ಬಳಸುತ್ತಿದ್ದರು. ಈ ಸಂಖ್ಯೆ ದುಪ್ಪಟ್ಟಾಗಿದ್ದು, ತಿಂಗಳುಗಳ ನಂತರ ಅಂದರೆ ಜನವರಿಯಲ್ಲಿ. ಆ ತಿಂಗಳಲ್ಲಿ ಸರಾಸರಿ 65 ಸಾವಿರ ಜನ ಪ್ರಯಾಣಿಸುತ್ತಿದ್ದರು. ಮಾರ್ಚ್‌ನಲ್ಲಿ ಈ ಸಂಖ್ಯೆ 1.54 ಲಕ್ಷಕ್ಕೆ ಮುಟ್ಟಿದ್ದರೆ, ಈಗ ಎರಡು ಲಕ್ಷದ ಸಮೀಪ ಬಂದು ನಿಂತಿದೆ.

‘ಮುಷ್ಕರದ ಕಾರಣ ಪೂರ್ಣ ಸಾಮರ್ಥ್ಯದೊಂದಿಗೆ ಮೆಟ್ರೊ ಸೇವೆ ನೀಡಲಾಗುತ್ತಿದೆ. ಆದರೂ, ಕೋವಿಡ್‌ ಮಾರ್ಗಸೂಚಿಗಳನ್ನು ರೈಲಿನಲ್ಲಿ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಸರ್ಕಾರದ ಸೂಚನೆಯಂತೆ, ಮೆಟ್ರೊ ರೈಲಿನಲ್ಲಿ ಮಾಸ್ಕ್‌ ಧರಿಸದೆ ಪ್ರಯಾಣಿಸುವವರಿಗೆ ದಂಡ ವಿಧಿಸಲಾಗುತ್ತಿದೆ. ಏ.5ರಿಂದ 12ರವರೆಗೆ 440 ಪ್ರಯಾಣಿಕರಿಗೆ ತಲಾ ₹ 250 ದಂಡ ವಿಧಿಸಲಾಗಿದೆ’ ಎಂದು ಬಿಎಂಆರ್‌ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಬಿ.ಎಲ್. ಯಶವಂತ ಚೌಹಾಣ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT