ಬೊಮ್ಮನಹಳ್ಳಿ: ‘ರಾಜ್ಯದ ಕರಕುಶಲ ಮಾರುಕಟ್ಟೆಯನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ವಿಸ್ತರಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಸಣ್ಣ ಕೈಗಾರಿಕೆ ಸಚಿವ ಸಿ.ಸಿ.ಪಾಟೀಲ ತಿಳಿಸಿದರು.

ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ಹಾಗೂ ಕೇಂದ್ರ ಸರ್ಕಾರದ ಕರಕುಶಲ ಜವಳಿ ಮಂತ್ರಾಲಯದ ಸಹಯೋಗದಲ್ಲಿ ಎಚ್ಎಸ್ಆರ್ ಬಡಾವಣೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಡಿ.ರೂಪಾ,‘ಕರಕುಶಲ ವಸ್ತುಗಳ ಮಾರಾಟಕೊರೊನಾ ಹೊಡೆತದಿಂದ ಗಣನೀಯವಾಗಿ ಇಳಿಕೆಯಾಗಿತ್ತು. ವಹಿವಾಟು ಪುನಶ್ಚೇತನಗೊಳಿಸಲು ಫ್ಲಿಪ್ ಕಾರ್ಟ್, ಅಮೆಜಾನ್, ಸರ್ಕಾರದ ಇ-ಮಾರ್ಕೆಟ್ ವೆಬ್ ತಾಣದ ಮೂಲಕವೂ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ’ ಎಂದು ವಿವರಿಸಿದರು.

12 ಸ್ಥಳಗಳಲ್ಲಿ ಕರಕುಶಲ ಮಳಿಗೆ: ‘ಕರಕುಶಲ ಅಭಿವೃದ್ಧಿ ನಿಗಮದ ವತಿಯಿಂದ ತಿರುಪತಿ, ಅಯೋಧ್ಯೆ, ಉಡುಪಿ, ಶಿರಡಿ, ನವದೆಹಲಿ ಸೇರಿದಂತೆ ದೇಶದ 12 ಸ್ಥಳಗಳಲ್ಲಿನಿಗಮದ ವತಿಯಿಂದ ಮಳಿಗೆಗಳನ್ನು ತೆರೆಯಲು ಉದ್ದೇಶಿಸಲಾಗಿದೆ. ಈ ಕುರಿತು ಸವಿಸ್ತಾರವಾಗಿ ಯೋಜನೆ ರೂಪಿಸಿ, ಪ್ರಸ್ತಾವನೆ ಸಲ್ಲಿಸಲಾಗಿದೆ’ ಎಂದುರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ತಿಳಿಸಿದರು.

‘ಎಚ್‌ಎಸ್‌ಆರ್ ಬಡಾವಣೆಯ ವೈಟ್‌ಹೌಸ್ ಕನ್ವೆಂಷನ್ ಹಾಲ್‌ನಲ್ಲಿ ಇದೇ 11ರವರೆಗೆ ನಡೆಯಲಿರುವಕರಕುಶಲ ಮೇಳದಲ್ಲಿ50ಕ್ಕೂ ಹೆಚ್ಚು ಮಳಿಗೆಗಳಿವೆ. ಖಾದಿ, ಕೈಮಗ್ಗದ ವಸ್ತ್ರಗಳು, ಮನೆಯ ಅಲಂಕಾರಕ ವಸ್ತುಗಳು, ಮಣ್ಣಿನ ಮಡಿಕೆಗಳು, ಮರದ ಕಲಾಕೃತಿಗಳು ಕುಶಕಕರ್ಮಿಗಳಿಂದ ನೇರವಾಗಿ ಗ್ರಾಹಕರ ಕೈಸೇರುವ ವೇದಿಕೆ ಕಲ್ಪಿಸಿದ್ದೇವೆ’ ಎಂದು ಮೇಳದ ಆಯೋಜಕರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.