ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುನ್ಸೂಚನೆ ನೀಡದೆ ಲಾಕ್‌ ಔಟ್‌: ಬಿಡದಿಯ ಮಿಟ್ಸುಬಿಷಿ ಎಲೆಕ್ಟ್ರಿಕ್ ಕಂಪನಿಗೆ ಬೀಗ!

ನೂರಾರು ಕಾರ್ಮಿಕರು ಅತಂತ್ರ
Last Updated 7 ನವೆಂಬರ್ 2022, 20:58 IST
ಅಕ್ಷರ ಗಾತ್ರ

ಬಿಡದಿ: ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಮಿಟ್ಸುಬಿಷಿ ಎಲೆಕ್ಟ್ರಿಕ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿ ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿ ಲಾಕ್ ಔಟ್ ಘೋಷಿಸಿದ್ದು, ನೂರಾರು ಕಾರ್ಮಿಕರು ಅತಂತ್ರರಾಗಿದ್ದಾರೆ. ಬೆಮೆಲ್ ಹಾಗೂ ಮೆಟ್ರೊಗೆ ಅಗತ್ಯವಾದ ಎಲೆಕ್ಟ್ರಾನಿಕ್ ‌ವಸ್ತುಗಳನ್ನು ಈ ಕಂಪನಿ ಸರಬರಾಜು ಮಾಡುತಿತ್ತು.

ಈ ಘಟಕದಲ್ಲಿ ಕೆಲಸ ಮಾಡುತ್ತಿದ್ದ54 ಕಾಯಂ ನೌಕರರು ಶುಕ್ರವಾರ ಸಂಜೆ ಕೆಲಸ ಮುಗಿಸಿ ತೆರಳಿದ್ದಾರೆ.ಕಂಪನಿ ಶನಿವಾರ ಕಾರ್ಮಿಕರ ಬ್ಯಾಂಕ್‌ ಖಾತೆಗೆ ₹4 ಲಕ್ಷ ಪರಿಹಾರ ಹಣ ಹಾಕಿದೆ. ಇದು ಗಮನಕ್ಕೆ ಬರುತ್ತಿದ್ದಂತೆಯೇ ನೌಕರರು ಕಂಪನಿಯ ಮಾನವ ಸಂಪನ್ಮೂಲ ವಿಭಾಗವನ್ನು (ಎಚ್‌.ಆರ್‌) ಸಂಪರ್ಕಿಸಿದ್ದಾರೆ.

ಶನಿವಾರ ಮತ್ತು ಭಾನುವಾರ ರಜೆ ಇದ್ದ ಕಾರಣ ಎಚ್.ಆರ್ ಸಿಬ್ಬಂದಿ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಸೋಮವಾರ ಕೆಲಸಕ್ಕೆ ಕರೆತರಲು ಕಂಪನಿಯ ವಾಹನ (ಕ್ಯಾಬ್‌) ಕೂಡ ಬಂದಿರಲಿಲ್ಲ. ಸ್ವಂತ ವಾಹನದಲ್ಲಿ ಬಂದ ನೌಕರರನ್ನು ಭದ್ರತಾ ಸಿಬ್ಬಂದಿ ಪ್ರವೇಶ ದ್ವಾರದಲ್ಲಿಯೇ ತಡೆದು ನಿಲ್ಲಿಸಿದ್ದಾರೆ. ಗೇಟ್‌ಗೆ ಬೀಗ ಜಡಿದು ನೌಕರರನ್ನು ಮರಳಿ ಕಳಿಸಿದ್ದಾರೆ.

‘ಪೂರ್ವಾನುಮತಿ ಇಲ್ಲದೆ ಯಾರೂ ಕಂಪನಿಯ ಆವರಣ ಪ್ರವೇಶಿಸುವಂತಿಲ್ಲ’ ಎಂದು ಪ್ರವೇಶ ದ್ವಾರದಲ್ಲಿ ಕಂಪನಿಯು ನೋಟಿಸ್‌ ಅಂಟಿಸಿದೆ. ಶೀಘ್ರದಲ್ಲಿಯೇ ಕಂಪನಿಯ ಪ್ರತಿನಿಧಿಗಳು ನೌಕರರೊಂದಿಗೆ ಮಾತನಾಡಲಿದ್ದಾರೆ ಎಂದು ಕಾರ್ಮಿಕರಿಗೆ ಮೌಖಿಕವಾಗಿ ತಿಳಿಸಲಾಗಿದೆ. ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಬ್ರಿಟಾನಿಯ ಬಿಸ್ಕೆಟ್ ಕಾರ್ಖಾನೆ ವಾರದ ಹಿಂದೆ ಗುತ್ತಿಗೆ ನೌಕರರನ್ನು ಕೆಲಸದಿಂದ ತೆಗೆದು ಹಾಕಿತ್ತು. ಬ್ರಿಟಾನಿಯಾ ಗುತ್ತಿಗೆ ನೌಕರರು ಮುಷ್ಕರ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT