ಗುರುವಾರ , ನವೆಂಬರ್ 14, 2019
19 °C

ಹೆಬ್ಬಾಳ ಶಾಸಕ ಭೈರತಿ ಸುರೇಶ್ ಕೊಲೆಗೆ ಯತ್ನ

Published:
Updated:

ಬೆಂಗಳೂರು: ಹೆಬ್ಬಾಳ ಶಾಸಕ ಭೈರತಿ ಸುರೇಶ್ ಅವರಿಗೆ ಶಿವು ಎಂಬಾತ ಚಾಕುವಿನಿಂದ ಇರಿಯಲು ಯತ್ನಿಸಿದ್ದಾನೆ. ಇದಕ್ಕೆ ಅಪಘಾತವೇ ಕಾರಣವೆಂಬುದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.

ಕೆ.ಆರ್.ಪುರ ಸಮೀಪದ ಭೈರತಿ ಗ್ರಾಮದಲ್ಲಿ ಶುಕ್ರವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಆರೋಪಿಯಿಂದ ಭೈರತಿ ಸುರೇಶ್ ತಪ್ಪಿಸಿಕೊಂಡಿದ್ದಾರೆ.

ಆರೋಪಿ ಶಿವು, ಕಾರ್ಪೆಂಟರ್ ಕೆಲಸ‌ ಮಾಡುತ್ತಿದ್ದ ಎಂದು ಗೊತ್ತಾಗಿದೆ. ಆತ ಚಾಕು ಇರಿಯಲು ಕಾರಣವೇನು ಎಂಬುದು ಗೊತ್ತಾಗಿಲ್ಲ.
ಕೊತ್ತನೂರು ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ‌.

‘ಬೈರತಿ ಅವರ ಕಾರು ಹಾಗೂ ಶಿವು ಅವರ ಬೈಕ್ ನಡುವೆ ಅಪಘಾತ. ಅದರಿಂದ ಕೋಪಗೊಂಡ ಶಿವು, ಶಾಸಕರ ಕಾರಿನ ಚಾಲಕನನ್ನು ಪ್ರಶ್ನಿಸಿದ್ದ. ಅದೇ ವೇಳೆಯೇ ಮಾತಿಗೆ ಮಾತು ಬೆಳೆದಿತ್ತು. ಕಾರಿನಿಂದ ಇಳಿದ ಶಾಸಕ ಜೊತೆಯೂ ವಾಗ್ವಾದ ನಡೆಸಿದ್ದ ಶಿವು. ಇದೇ ವೇಳೆಯೇ ಹಲ್ಲೆಗೆ ಯತ್ನಿಸಿದ್ದ. ಶಿವುನನ್ನು ಹಿಡಿದ ಗನ್ ಮ್ಯಾನ್ ಪೊಲೀಸರಿಗೆ ಒಪ್ಪಿಸಿದ್ದಾನೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಅಪಘಾತದಲ್ಲಿ ಜಖಂಗೊಂಡ ಕಾರಿನ ನೋಂದಣಿ ಫಲಕ

 

ಪ್ರತಿಕ್ರಿಯಿಸಿ (+)