ಗುರುವಾರ , ಡಿಸೆಂಬರ್ 1, 2022
20 °C

ಕದ್ದ ಮೊಬೈಲ್ ಮಾರಾಟ: ಆರೋಪಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಹಲವೆಡೆ ಕದ್ದಿದ್ದ ಮೊಬೈಲ್‌ಗಳನ್ನು ಮಾರುತ್ತಿದ್ದ ಆರೋಪದಡಿ ರಹೀಮ್ ಪಾಷಾ ಎಂಬುವರನ್ನು ಶೇಷಾದ್ರಿಪುರ ಪೊಲೀಸರು ಬಂಧಿಸಿದ್ದಾರೆ.

‘ನೀಲಸಂದ್ರದ ಮುನಿಯಲ್ಲಪ್ಪ ಗಾರ್ಡನ್ ನಿವಾಸಿ ರಹೀಮ್ ಪಾಷಾ, ಮೊಬೈಲ್ ಕಳ್ಳತನ ಮಾಡುತ್ತಿದ್ದ ಮಾಹಿತಿ ಇದೆ. ಈತನಿಂದ ₹ 40 ಸಾವಿರ ಮೌಲ್ಯದ 8 ಮೊಬೈಲ್ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಶೇಷಾದ್ರಿಪುರ ಬಳಿಯ ಜಿಎಸ್‌ಬಿ ಜಂಕ್ಷನ್‌ನಲ್ಲಿ ಶನಿವಾರ ಸಂಜೆ ನಿಂತುಕೊಂಡಿದ್ದ ಆರೋಪಿ, ಮೊಬೈಲ್ ಮಾರಾಟಕ್ಕೆ ಯತ್ನಿಸುತ್ತಿದ್ದ. ಕೆಲವರು ವಿಚಾರಿಸಿದಾಗ, ಮೊಬೈಲ್‌ಗಳನ್ನು ತೋರಿಸಿದ್ದ. ಆದರೆ, ಮೊಬೈಲ್‌ ಖರೀದಿ ಬಗ್ಗೆ ಯಾವುದೇ ರಶೀದಿಗಳು ಆರೋಪಿ ಬಳಿ ಇರಲಿಲ್ಲ. ಮಾಹಿತಿ ಬರುತ್ತಿದ್ದಂತೆ ಸ್ಥಳಕ್ಕೆ ಹೋಗಿ ಆರೋಪಿಯನ್ನು ವಶಕ್ಕೆ ಪಡೆಯಲಾಯಿತು. ಮೊಬೈಲ್‌ಗಳ ಬಗ್ಗೆ ಆರೋಪಿ ಯಾವುದೇ ಮಾಹಿತಿ ನೀಡಲಿಲ್ಲ. ಬಳಿಕವೇ ಮೊಬೈಲ್ ಕಳ್ಳತನ ಆರೋಪದಡಿ ಬಂಧಿಸಲಾಯಿತು’ ಎಂದೂ ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು