ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಭೋವಿ ನಿಗಮದ ಹಗರಣ ಮತ್ತು ಕಾಂಗ್ರೆಸ್ ಸರ್ಕಾರದಲ್ಲಿ ನಡೆದ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಗಳು ಪರಿಶಿಷ್ಟರ ಅಭಿವೃದ್ದಿಗಾಗಿ ಸ್ಥಾಪಿಸಲಾಗಿರುವ ನಿಗಮ–ಮಂಡಳಿಗಳ ಕಾರ್ಯವೈಖರಿಯ ಕರಾಳತೆಗೆ ಹಿಡಿದ ಕೈಗನ್ನಡಿಯಾಗಿದೆ. ವಾಲ್ಮೀಕಿ ಹಗರಣದಲ್ಲಿ ತಪ್ಪಿತಸ್ಥರನ್ನು ಜೈಲಿಗಟ್ಟಿರುವಂತೆ, ಭೋವಿ ನಿಗಮ ಸೇರಿದಂತೆ ಎಲ್ಲಾ ಹಗರಣಗಲ್ಲಿ ಶಾಮೀಲಾಗಿರುವವರ ಭ್ರಷ್ಟರನ್ನು ಕಾನೂನಿನ ಕೈಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.