ಬುಧವಾರ, ಜುಲೈ 28, 2021
23 °C

ಕೊರೊನಾ ಪಾಸಿಟಿವ್: ಮುದ್ದನಪಾಳ್ಯ ಸೀಲ್‍ಡೌನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೆಸರಘಟ್ಟ: ದಂಪತಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಕಸಘಟ್ಟಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುದ್ದನಪಾಳ್ಯ ಗ್ರಾಮವನ್ನು ಸೀಲ್‍ಡೌನ್ ಮಾಡಲಾಯಿತು. 

ಗ್ರಾಮದಲ್ಲಿರುವ 46 ವರ್ಷದ ವ್ಯಕ್ತಿಯೊಬ್ಬರು ತಲೆನೋವು, ಸುಸ್ತು ಬಂದಿದ್ದರಿಂದ ನಗರದ ವಿಕ್ರಂ ಅಸ್ಪತ್ರೆಗೆ ಸ್ವಯಂ ಪ್ರೇರಿತರಾಗಿ ದಾಖಲಾಗಿದ್ದರು. ರೋಗ ಲಕ್ಷಣಗಳನ್ನು ಗುರುತಿಸಿದ ವೈದ್ಯರು ಕಫ ಮತ್ತು ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದರು. ಅವರಿಗೆ ಸೋಂಕು ಇರುವುದು ದೃಢಪಟ್ಟಿದೆ. ಅವರ ಪತ್ನಿಗೂ ಸೋಂಕು ತಗುಲಿದೆ. ಹೀಗಾಗಿ, ಗ್ರಾಮವನ್ನು ಸೀಲ್‌ಡೌನ್‌ ಮಾಡಲಾಗಿದೆ ಎಂದು ಚಿಕ್ಕಬಾಣಾವರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಜಯರಾಂ ತಿಳಿಸಿದರು.

‘ದಂಪತಿಯ ಇಬ್ಬರು ಮಕ್ಕಳನ್ನು ಹೋಟೆಲ್‌ವೊಂದರಲ್ಲಿ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಸೋಂಕಿತ ವ್ಯಕ್ತಿಯು ಬಸವೇಶ್ವರ ನಗರದಲ್ಲಿ ಮನೆ ಕಟ್ಟಿಸುತ್ತಿದ್ದರು. ಅದರ ಸಮೀಪದಲ್ಲಿಯೇ ಅವರ ಅತ್ತೆಯ ಮನೆಯಿತ್ತು. ಅವರ ಅತ್ತೆಗೂ ಕೊರೊನಾ ಸೋಂಕು ತಗಲಿತ್ತು. ಈಗ ಗುಣಮುಖರಾಗಿದ್ದಾರೆ. ಅವರಿಂದಲೇ ಸೋಂಕು ಹರಡಿರಬಹುದು’ ಎಂದು ವೈದ್ಯರು ಹೇಳಿದರು. 

‘ಪ್ರತಿ ದಿನ ಗ್ರಾಮಕ್ಕೆ ವೈದ್ಯರು ಭೇಟಿ ನೀಡಿ ಗ್ರಾಮಸ್ಥರ ಆರೋಗ್ಯ ತಪಾಸಣೆ ಮಾಡಿದ್ದಾರೆ. ಗ್ರಾಮಸ್ಥರಲ್ಲಿ ಸೋಂಕು ಹರಡಿರುವ ಯಾವುದೇ ಲಕ್ಷಣ ಕಂಡು ಬಂದಿಲ್ಲ’ ಎಂದು ಜಯರಾಂ ತಿಳಿಸಿದರು.

ಇಡೀ ಗ್ರಾಮದಲ್ಲಿ ಸೋಂಕು ನಿವಾರಕ ದ್ರಾವಣವನ್ನು ಸಿಂಪಡಿಸಲಾಗಿದೆ. ದೊಡ್ಡಬ್ಯಾಲಕೆರೆ ಗ್ರಾಮದಿಂದ ಮುದ್ದನಪಾಳ್ಯ ಗ್ರಾಮ ಪ್ರವೇಶಿಸಲು ಇರುವ ಎಲ್ಲ ನಾಲ್ಕು ರಸ್ತೆಯನ್ನು ಬಂದ್ ಮಾಡಲಾಗಿದೆ. ಔಷಧಿ ಅಂಗಡಿಯನ್ನು ಹೊರತುಪಡಿಸಿ ಎಲ್ಲ ಅಂಗಡಿಗಳನ್ನು ಮುಚ್ಚಿಸಲಾಗಿದೆ.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.