ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುತ್ತಪ್ಪ ರೈ ವಿರುದ್ಧ ಎನ್‌ಸಿಆರ್ ದಾಖಲು

Last Updated 2 ಮಾರ್ಚ್ 2020, 19:35 IST
ಅಕ್ಷರ ಗಾತ್ರ

ಬೆಂಗಳೂರು: ವಂಚನೆ ಹಾಗೂ ಜೀವಬೆದರಿಕೆಯೊಡ್ಡಿದ ಆರೋಪದಡಿ ಜಯ ಕರ್ನಾಟಕ ಸಂಘಟನೆ‌ಯ ಸಂಸ್ಥಾಪಕ‌ ಮುತ್ತಪ್ಪ ರೈ ಹಾಗೂ ಇತರರ ವಿರುದ್ಧ ಸದಾಶಿವನಗರ ಠಾಣೆಯಲ್ಲಿ ಎನ್‌ಸಿಆರ್‌ (ಗಂಭೀರವಲ್ಲದ ಪ್ರಕರಣ) ದಾಖಲಾಗಿದೆ.

‘ಆಸ್ತಿ ಹಾಗೂ ಹಣದ ವಿಚಾರದಲ್ಲಿ ಮುತ್ತಪ್ಪ ರೈ ವಂಚನೆ ಮಾಡಿದ್ದಾರೆ. ಹಣ ನೀಡುವಂತೆ ಕೇಳಿದರೆ ಜೀವ ಬೆದರಿಕೆ ಹಾಕುತ್ತಿದ್ದಾರೆ’ ಎಂದು ಆರೋಪಿಸಿ ಕಾಂಗ್ರೆಸ್ ಮುಖಂಡ ರಾಕೇಶ್ ಮಲ್ಲಿ ಈಚೆಗೆ ಸಿಸಿಬಿಗೆ ದೂರು ನೀಡಿದ್ದರು.

‘ದೂರು ದಾಖಲಿಸಿಕೊಳ್ಳಲು ನಮಗೆ ಅಧಿಕಾರವಿಲ್ಲ’ ಎಂದ ಸಿಸಿಬಿ ಪೊಲೀಸರು, ದೂರನ್ನು ಸದಾಶಿವನಗರ ಠಾಣೆಗೆ ಕಳುಹಿಸಿದ್ದಾರೆ. ಅದನ್ನು ಆಧರಿಸಿ ಇದೀಗ ಎನ್‌ಸಿಆರ್‌ ದಾಖಲಾಗಿದೆ.

‘10 ವರ್ಷಗಳ ಹಿಂದೆ ಇಬ್ಬರೂ ಸೇರಿಬಂಟ್ವಾಳದಲ್ಲಿ‌ 17.5 ಎಕರೆ ಜಮೀನು ಖರೀದಿಸಿ ನಿವೇಶನಗಳಾಗಿ ಪರಿವರ್ತಿಸಿದ್ದೆವು. 180 ನಿವೇಶನಗಳ ಪೈಕಿ ಸುಮಾರು 70 ನಿವೇಶನಗಳು ಮಾರಾಟವಾಗಿವೆ. ಅದರ, ಹಣದ ಹಂಚಿಕೆ ವಿಚಾರವಾಗಿ ಮುತ್ತಪ್ಪ ರೈ ನನಗೆ ವಂಚಿಸಿದ್ದಾರೆ’ ಎಂದು ದೂರಿನಲ್ಲಿ ರಾಕೇಶ್ ಮಲ್ಲಿ ಆರೋಪಿಸಿದ್ದಾರೆ.

ಸದಾಶಿವನಗರ ಠಾಣೆ ಪೊಲೀಸರು, ‘ನ್ಯಾಯಾಲಯದ ನಿರ್ದೇಶನದಂತೆ ಮುಂದುವರಿಯಲಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT