ಸೋಮವಾರ, ಅಕ್ಟೋಬರ್ 26, 2020
25 °C

ಎನ್‌95 ಮಾಸ್ಕ್ ಹೆಸರಿನಲ್ಲಿ ₹ 1.23 ಕೋಟಿ ವಂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಎನ್‌–95 ಮಾಸ್ಕ್ ಪೂರೈಕೆ ಮಾಡುವುದಾಗಿ ಹೇಳಿದ್ದ ಅಮೆರಿಕದ ಕಂಪನಿಯೊಂದು ₹ 1.23 ಕೋಟಿ ಪಡೆದು ವಂಚಿಸಿದೆ’ ಎಂದು ಆರೋಪಿಸಿ ಟಿ. ಮಂಜುನಾಥ್ ಎಂಬುವರು ಸಿಐಡಿ ಸೈಬರ್ ಕ್ರೈಂ ವಿಭಾಗಕ್ಕೆ ದೂರು ನೀಡಿದ್ದಾರೆ.

ನಕ್ಷತ್ರ ಕ್ರಿಯೆಷನ್ಸ್ ಪ್ರತಿನಿಧಿಯಾದ ಮಂಜುನಾಥ್ ನೀಡಿರುವ ದೂರು ಆಧರಿಸಿ, ಅಮೆರಿಕದ ಜಾರ್ಜ್ ಹೌಂಗ್, ಜಾನ್ ವಾಂಗ್ ಹಾಗೂ ರೈನ್ ಫಿಲಿಪ್ ಎಂಬುವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

‘ಜಾಲತಾಣದ ಮೂಲಕ ಜುಲೈ 16ರಂದು ಅಮೆರಿಕದ ಮೆಡಿ ಫಾರ್ಮಾ ಕಂಪನಿ ಸಂಪರ್ಕಿಸಲಾಗಿತ್ತು. ಕಂಪನಿ ಪ್ರತಿನಿಧಿಗಳ ಸೋಗಿನಲ್ಲಿ ಇ–ಮೇಲ್ ಮೂಲಕ ಪ್ರತಿಕ್ರಿಯಿಸಿದ್ದ ಆರೋಪಿಗಳು, ₹ 4.95 ಕೋಟಿ ಪಾವತಿಸಿದರೆ 4 ಲಕ್ಷ ಎನ್‌95 ಮಾಸ್ಕ್‌ ನೀಡುವುದಾಗಿ ಹೇಳಿದ್ದರು. ಅದಕ್ಕೆ ಸಂಬಂಧಪಟ್ಟ ದಾಖಲೆಗಳನ್ನೂ ಕಳುಹಿಸಿದ್ದರು. ಅದನ್ನು ನಂಬಿ ಮುಂಗಡವಾಗಿ ಆರೋಪಿಗಳು ನೀಡಿದ್ದ ಬ್ಯಾಂಕ್ ಖಾತೆಗೆ ₹ 1.23 ಕೋಟಿ ಜಮೆ ಮಾಡಲಾಗಿತ್ತು’ ಎಂದು ದೂರಿನಲ್ಲಿ ಮಂಜುನಾಥ್ ತಿಳಿಸಿದ್ದಾರೆ.

‘ಹಣ ತಲುಪಿದ ನಂತರ ಆರೋಪಿಗಳು ಮಾಸ್ಕ್ ಪೂರೈಸಿಲ್ಲ. ಹಣವನ್ನೂ ವಾಪಸು ಕೊಡುತ್ತಿಲ್ಲ’ ಎಂದೂ ಅವರು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು