ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬ್ಬನ್‌ ಉದ್ಯಾನ: ಮಾಹಿತಿ ನೀಡಲಿವೆ ಮರಗಳು

‘ಸ್ಮಾರ್ಟ್‌ಸಿಟಿ’ ಎರಡನೇ ಹಂತದ ಯೋಜನೆಗೆ ಕೈಜೋಡಿಸಿದ ತೋಟಗಾರಿಕೆ ಇಲಾಖೆ
Last Updated 26 ಜೂನ್ 2021, 19:09 IST
ಅಕ್ಷರ ಗಾತ್ರ

ಬೆಂಗಳೂರು: ಕಬ್ಬನ್‌ ಉದ್ಯಾನದಲ್ಲಿರುವ ಪ್ರತಿ ಮರದ ಸಂಪೂರ್ಣ ವಿವರಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ‘ಸ್ಮಾರ್ಟ್‌ಸಿಟಿ’ ಯೋಜನೆ ಅಡಿ ಉದ್ಯಾನದ ಎಲ್ಲ ಮರಗಳ ಹೆಸರು, ಅವುಗಳ ಮೂಲ ಮತ್ತು ವೈಶಿಷ್ಟ್ಯ ಸಾರುವ ಫಲಕ ಅಳವಡಿಸುವ ಯೋಜನೆಗೆ ತೋಟಗಾರಿಕೆ ಇಲಾಖೆ ಕೈಜೋಡಿಸಿದೆ.

ಉದ್ಯಾನದಲ್ಲಿ ತರಹೇವಾರಿ ಮರಗಳಿದ್ದು, ಅವುಗಳ ಬಗ್ಗೆ ಜನರಿಗೆ ಸೂಕ್ತ ಮಾಹಿತಿ ಇರಲಿಲ್ಲ. ಹಾಗಾಗಿ, ‘ಐಡೆಂಟಿಫಿಕೇಷನ್ ಆ್ಯಂಡ್ ಟ್ರೇಸಿಂಗ್’ ಹೆಸರಿನಲ್ಲಿ ಪ್ರತಿ ಮರದ ಪೂರ್ಣ ವಿವರಗಳನ್ನು ಪತ್ತೆ ಮಾಡಲಿದ್ದು, ಉದ್ಯಾನಕ್ಕೆ ಬರುವವರು ಶೀಘ್ರದಲ್ಲೇ ಮರಗಳ ಮಾಹಿತಿ ತಿಳಿದುಕೊಳ್ಳ
ಬಹುದು.

‘ಕಬ್ಬನ್ ಉದ್ಯಾನದಲ್ಲಿ ಬಹಳ ವರ್ಷಗಳಷ್ಟು ಹಳೆಯದಾದ ಸಾವಿರಾರು ಮರಗಳಿವೆ. ಪ್ರತಿ ಮರವೂ ಭಿನ್ನವಾದ ಗುಣಲಕ್ಷಣಗಳನ್ನು ಒಳಗೊಂಡಿದೆ. ಹಲವು ಅಪರೂಪದ ಹಾಗೂ ಪಾರಂಪರಿಕ ಮರಗಳೂ ಉದ್ಯಾನದಲ್ಲಿದ್ದು, ಅವುಗಳ ಸಂಪೂರ್ಣ ವಿವರಗಳುಳ್ಳ ಫಲಕ ಅಳವಡಿಸುವ ಯೋಜನೆ ರೂಪಿಸಲಾಗಿದೆ’ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ (ಕಬ್ಬನ್‌ ಉದ್ಯಾನ) ಎಚ್.ಪಿ.ಬಾಲಕೃಷ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಸಸ್ಯಶಾಸ್ತ್ರಜ್ಞರು ಪ್ರತಿ ಮರದ ಹೆಸರು, ವಯಸ್ಸು, ಅದರ ಗುಣ, ಮೂಲ, ಉಪಯೋಗ ಹಾಗೂ ವಿಶೇಷತೆಗಳನ್ನು ಸೂಚಿಸಲಿದ್ದಾರೆ. ಅವರಿಂದ ಮಾಹಿತಿ ಪಡೆದು ಎಲ್ಲ ಮರಗಳಿಗೆ ಸ್ವವಿವರವುಳ್ಳ ಫಲಕ ಅಳವಡಿಸಲಾಗುವುದು. ಇದರಿಂದ ಮುಂದಿನ ದಿನಗಳಲ್ಲಿ ಸಸ್ಯಗಳ ಬಗ್ಗೆ ಆಸಕ್ತಿ ಉಳ್ಳವರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೂ ಅನುಕೂಲವಾಗಲಿದೆ’ ಎಂದು ಅವರು ಮಾಹಿತಿ ನೀಡಿದರು.

ಮರಕ್ಕೆ ಹಾನಿಯಾಗದಂತೆ ಫಲಕ:‘ಈ ಯೋಜನೆಯಡಿ ಅಳವಡಿಸುವ ಫಲಕಗಳು ಮರಗಳಿಗೆ ಯಾವುದೇ ರೀತಿಯ ಹಾನಿ ಉಂಟು ಮಾಡುವುದಿಲ್ಲ. ಮೊಳೆ ಹೊಡೆಯುವುದು, ರಾಸಾ ಯನಿಕ ಲೇ‍ಪನ ಸೇರಿದಂತೆ ಯಾವುದೇ ಅಪಾಯಕಾರಿ ವಿಧಾನ ಗಳನ್ನು ಬಳಸುವುದಿಲ್ಲ. ಫಲಕ ಅಳವಡಿಕೆಗೆ ಆಧುನಿಕ ವಿಧಾನ ಅನುಸರಿಸಲಾಗುವುದು. ಫಲಕಕ್ಕೆ ‘ಸ್ಪ್ರಿಂಗ್’ ಮಾದರಿಯ ವಸ್ತುಗಳನ್ನು ಬಳಸಲಾಗುವುದು. ಇವು ಮರದ ಬೆಳವಣಿಗೆಗೆ ಅಡ್ಡಿಪಡಿಸುವುದಿಲ್ಲ’ ಎಂದು ಎಚ್.ಪಿ.ಬಾಲಕೃಷ್ಣ ವಿವರಿಸಿದರು.‌

ಮರಗಳಿಗೆ ಜಿಪಿಎಸ್, ಕ್ಯೂಆರ್ ಕೋಡ್
‘ಸ್ಮಾರ್ಟ್‌ಸಿಟಿ ಯೋಜನೆಯಡಿ ಮರಗಳಿಗೆಫಲಕದೊಂದಿಗೆ ಜಿಪಿಎಸ್ ಸಹ ಅಳವಡಿಸಲಾಗು
ವುದು. ಫಲಕದಲ್ಲಿ ಒಂದು ಕ್ಯೂಆರ್ ಕೋಡ್ ನೀಡಲಿದ್ದೇವೆ. ಅದನ್ನು ಸ್ಕ್ಯಾನ್ ಮಾಡಿಯೂ ಮರದ ವಿವರ ಪಡೆದುಕೊಳ್ಳಬಹುದು. ಇದಕ್ಕಾಗಿ ಪ್ರತ್ಯೇಕವಾಗಿ ಮೊಬೈಲ್‌ ಆ್ಯಪ್‌ ಅಭಿವೃದ್ಧಿಪಡಿಸಲಾಗುವುದು. ಮರದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಆ್ಯಪ್‌ ಸಹಾಯ ಕಾರಿಯಾಗಲಿದೆ. ಯೋಜನೆಯ ರೂಪರೇಷೆ ಸಿದ್ಧಗೊಂಡಿದ್ದು, ಮುಂದಿನ ವಾರದಿಂದಲೇ ಇದರ ಕೆಲಸ ಗಳು ಆರಂಭಗೊಳ್ಳಲಿವೆ’ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ (ಕಬ್ಬನ್‌ ಉದ್ಯಾನ) ಬಾಲಕೃಷ್ಣ ಮಾಹಿತಿ ನೀಡಿದರು.

ಅಂಕಿ ಅಂಶ

8 ಸಾವಿರ: ಉದ್ಯಾನದಲ್ಲಿರುವ ಮರಗಳು (ಅಂದಾಜು)

₹23 ಲಕ್ಷ:ಯೋಜನೆಯ ವೆಚ್ಚ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT