ಗೋವಾ, ಮೇಘಾಲಯ ಮತ್ತು ಅಸ್ಸಾಂನ ಹೆದ್ದಾರಿ ಯೋಜನೆಗಳು, ಬಿಹಾರದ ರೈಲ್-ಓವರ್-ರೈಲ್ ಬಲ್ಬ್ ಲೈನ್ ನಿರ್ಮಾಣ, ಬೆಂಗಳೂರು ಮತ್ತು ದೆಹಲಿ/ಎನ್‌ಸಿಆರ್‌ನಲ್ಲಿ ನಗರ ಮೆಟ್ರೊ ಸಾರಿಗೆ ಯೋಜನೆಗಳ ವಿವರಗಳನ್ನು ಪಿಎಂ ಗತಿಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ (ಎನ್‌ಎಂಪಿ) ಮ್ಯಾಪಿಂಗ್ ಆಧರಿಸಿ ಪರಿಶೀಲಿಸಲಾಗಿದೆ. 65ನೇ ನೆಟ್‌ವರ್ಕ್ ಪ್ಲಾನಿಂಗ್ ಗ್ರೂಪ್ (ಎನ್‌ಪಿಜಿ) ಸಭೆಯಲ್ಲಿ ಮೌಲ್ಯಮಾಪನ ಮಾಡಲಾಗಿದೆ. ಆನಂತರ ಅನುಮೋದನೆಗೆ ಶಿಫಾರಸು ಮಾಡಲಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ತಿಳಿಸಿದೆ.