ಶುಕ್ರವಾರ, ಏಪ್ರಿಲ್ 3, 2020
19 °C

ನಮ್ಮ ಮೆಟ್ರೊ: ಬೇರಿಂಗ್ ಬದಲಾವಣೆ ಯಶಸ್ವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ನಮ್ಮ ಮೆಟ್ರೊ’ದ ಮಹಾಕವಿ ಕುವೆಂಪು ರಸ್ತೆ ಹಾಗೂ ರಾಜಾಜಿನಗರ ನಿಲ್ದಾಣಗಳ ನಡುವಿನ ಪಿಲ್ಲರ್‌ನ (ಸಂಖ್ಯೆ 221) ಬೇರಿಂಗ್ ಬದಲಾವಣೆ ಕಾರ್ಯ ಭಾನುವಾರ ಯಶಸ್ವಿಯಾಗಿ ನಡೆಯಿತು. ಆದರೆ, ಬೆಳಿಗ್ಗೆ 9ರ ಬದಲು, 10ಕ್ಕೆ ರೈಲು ಸಂಚಾರ ಪುನರಾರಂಭಗೊಂಡಿತು.

ಕಂಬದಲ್ಲಿ ಬೇರಿಂಗ್ ಹಾಳಾಗಿದ್ದು, ಹೊಸ ಬೇರಿಂಗ್ ಅಳವಡಿಸಲಾಯಿತು. ನಿರ್ವಹಣಾ ಕಾಮಗಾರಿಗಾಗಿ ಬೆಳಿಗ್ಗೆ 7 ರಿಂದ 9ರವರೆಗೆ ಮಲ್ಲೇಶ್ವರದ ಸಂಪಿಗೆ ರಸ್ತೆ ನಿಲ್ದಾಣದಿಂದ ನಾಗಸಂದ್ರ ನಿಲ್ದಾಣವರೆಗೆ ರೈಲು ಸಂಚಾರ ಸ್ಥಗಿತಗೊಳ್ಳಲಿದೆ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ತಿಳಿಸಿತ್ತು. ಆದರೆ, ನಿರ್ವಹಣಾ ಕಾರ್ಯ ತಡವಾಗಿದ್ದರಿಂದ 9 ಗಂಟೆ ಬದಲು 10 ಗಂಟೆಗೆ ರೈಲು ಸಂಚಾರ ಮರು ಆರಂಭವಾಯಿತು.

ಬೈಯ್ಯಪ್ಪನಹಳ್ಳಿ-ಮೈಸೂರು ರಸ್ತೆಯ ನೇರಳೆ ಮಾರ್ಗ ಹಳೆಯದಾಗಿರುವುದರಿಂದ ಆಗಾಗ್ಗೆ ಬೇರಿಂಗ್ ಬದಲಾವಣೆ ಮಾಡಬೇಕಾದ ಅನಿವಾರ್ಯ ಉಂಟಾಗಿತ್ತು. ಈಗ ಮೊದಲ ಬಾರಿಗೆ ಹಸಿರು ಮಾರ್ಗದಲ್ಲಿ ಬೇರಿಂಗ್ ಬದಲಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು