ಬೆಂಗಳೂರು: ಹೊಸ ವರ್ಷದ ಪ್ರಯುಕ್ತ ಬುಧವಾರ ರಾತ್ರಿ 11.30ರ ನಂತರ ಮೆಟ್ರೊದಲ್ಲಿ 40,774 ಪ್ರಯಾಣಿಕರು ಸಂಚರಿಸಿದ್ದು, ಹೆಚ್ಚುವರಿಯಾಗಿ ₹1 ಕೋಟಿ ವರಮಾನವನ್ನು ಬಿಎಂಆರ್ಸಿಎಲ್ ಗಳಿಸಿದೆ.

ಡಿಸೆಂಬರ್ 25ರವರೆಗೆ ಸರಾಸರಿ 9.5 ಲಕ್ಷ ಪ್ರಯಾಣಿಕರು ಸಂಚರಿಸುತ್ತಿದ್ದರು. ಕ್ರಿಸ್ಮಸ್ ರಜೆಯಿಂದಾಗಿ ಪ್ರಯಾಣಿಕರ ಪ್ರಮಾಣ ಕಡಿಮೆಯಾಗಿತ್ತು. ಡಿ. 26 ಮತ್ತು 27ರಂದು ತಲಾ 7 ಲಕ್ಷ ಜನರು ಪ್ರಯಾಣಿಸಿದ್ದರೆ, ಡಿ.28ರಂದು 6 ಲಕ್ಷಕ್ಕಿಂತಲೂ ಕಡಿಮೆ ಜನರು ಮೆಟ್ರೊ ಬಳಸಿದ್ದರು. ಡಿ. 29 ಸೋಮವಾರ 8.51 ಲಕ್ಷ, ಮಂಗಳವಾರ 8 ಲಕ್ಷ ಪ್ರಯಾಣಿಕರು ಸಂಚರಿಸಿದ್ದರು. ಹೊಸ ವರ್ಷದ ಸಂಭ್ರಮದಿಂದಾಗಿ ಡಿ.31ರಂದು ಒಟ್ಟು 8.94 ಲಕ್ಷ ಪ್ರಯಾಣಿಸಿದ್ದರು.

ಪ್ರತಿದಿನ ₹2.8 ಕೋಟಿ ವರಮಾನ ಬರುತ್ತಿತ್ತು. ಹೆಚ್ಚುವರಿ ಅವಧಿಯ ಟಿಕೆಟ್ ಮೂಲಕ ₹40 ಲಕ್ಷ ಸೇರಿ ಒಟ್ಟು ಸುಮಾರು ₹ 1 ಕೋಟಿ ಅಧಿಕ ಆದಾಯ ಬಂದಿದೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ರಜೆಗಳೆಲ್ಲ ಮುಗಿದು ಉದ್ಯೋಗಿಗಳು ಉದ್ಯೋಗಕ್ಕೆ ಮರಳುವುದರಿಂದ ಈ ವಾರದಿಂದ ಜನರ ಸಂಚಾರ ಹೆಚ್ಚಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.