ಮೂರನೇ ಹಂತದಲ್ಲಿ ನಿರ್ಮಾಣವಾಗಲಿರುವ ಎರಡು ಕಾರಿಡಾರ್‌ಗಳಲ್ಲಿ ಏಳು ಅಂತರ್‌ಬದಲಾವಣೆ (ಇಂಟರ್‌ಚೇಂಜ್) ನಿಲ್ದಾಣಗಳು ಇರಲಿವೆ. ಜೆ.ಪಿ. ನಗರ 4ನೇ ಹಂತದಲ್ಲಿ ಗುಲಾಬಿ ಮಾರ್ಗವನ್ನು ಜೆ.ಪಿ. ನಗರದಲ್ಲಿ ಹಸಿರು ಮಾರ್ಗವನ್ನು ಮೈಸೂರು ರಸ್ತೆಯಲ್ಲಿ ನೇರಳೆ ಮಾರ್ಗವನ್ನು ಸುಮನಹಳ್ಳಿ ಕ್ರಾಸ್‌ನಲ್ಲಿ ಮೂರನೇ ಹಂತದ ಎರಡೂ ಕಾರಿಡಾರ್‌ಗಳು ಗೊರಗುಂಟೆಪಾಳ್ಯದಲ್ಲಿ ಹಸಿರು ಮಾರ್ಗ ಕೆಂಪಾಪುರದಲ್ಲಿ ನೀಲಿ ಮಾರ್ಗ ಹಾಗೂ ಹೊಸಹಳ್ಳಿಯಲ್ಲಿ ನೇರಳೆ ಮಾರ್ಗವನ್ನು ಸಂಪರ್ಕಿಸಲಿದೆ.