ವೈಟ್‌ಫಿಲ್ಡ್ ಮೆಟ್ರೊ ರೈಲು ಮಾರ್ಗ: ವೆಬ್ ಗರ್ಡರ್ ಅಳವಡಿಕೆ ಕಾಮಗಾರಿ ಆರಂಭ

ಬೆಂಗಳೂರು: ವೈಟ್‌ಫಿಲ್ಡ್ ಮೆಟ್ರೊ ರೈಲು ಮಾರ್ಗಕ್ಕೆ ಸವಾಲಾಗಿರುವ ವೆಬ್ ಗರ್ಡರ್ ಅಳವಡಿಕೆಗೆ ಪ್ರಾಥಮಿಕ ಕಾಮಗಾರಿಯನ್ನು ಬಿಎಂಆರ್‌ಸಿಎಲ್ ಸೋಮವಾರ ಆರಂಭಿಸಿದೆ.
65 ಮೀಟರ್ ಉದ್ದದ ವೆಬ್ ಗರ್ಡರ್ ಇದಾಗಿದ್ದು, ಬೆಂಗಳೂರು ಮೆಟ್ರೊ ರೈಲು ಮಾರ್ಗದಲ್ಲಿ ಅಳವಡಿಕೆ ಆಗುತ್ತಿರುವ ಅತಿ ಉದ್ದದ ವೆಬ್ ಗರ್ಡರ್ ಇದಾಗಿದೆ. ವೆಬ್ ಗರ್ಡರ್ ಅಳವಡಿಕೆ ಕಾಮಗಾರಿಯನ್ನು ಡಿಸೆಂಬರ್ ಕೊನೆ ವಾರದಲ್ಲಿ ನಡೆಸಲು ಉದ್ದೇಶಿಸಲಾಗಿತ್ತು. ಅಟ್ಟಣಿಗೆ ಸೇರಿದಂತೆ ಪೂರ್ವ ಸಿದ್ಧತಾ ಕಾರ್ಯ ಇನ್ನೂ ಬಾಕಿ ಇರುವುದರಿಂದ ಕಾಮಗಾರಿಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿತ್ತು.
ರೈಲ್ವೆ ಮಾರ್ಗ ಮತ್ತು ರಸ್ತೆ ಮೇಲ್ಸೇತುವೆ ಮೇಲೆ ಈ ಗರ್ಡರ್ ಅಳವಡಿಕೆಯಾಗಬೇಕಿದ್ದು, ಸುರಕ್ಷತೆಗೆ ಆದ್ಯತೆ ನೀಡಿದೆ. ಎಲ್ಲಾ ರೀತಿಯ ಮುನ್ನೆಚ್ಚರಿಕೆಗಳನ್ನು ಕೈಗೊಂಡು ಈಗ ಪ್ರಾಥಮಿಕ ಕಾಮಗಾರಿಯನ್ನು ಆರಂಭಿಸಲಾಗಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನೊಂದೆಡೆ ಕೆ.ಆರ್.ಪುರ–ವೈಟ್‌ಫೀಲ್ಡ್ ನಡುವೆ ಮೆಟ್ರೊ ರೈಲು ಸಂಚಾರ ಆರಂಭಿಸಲು ಸಿದ್ಧತೆಯನ್ನು ಬಿಎಂಆರ್‌ಸಿಎಲ್ ನಡೆಸುತ್ತಿದೆ. ಸುರಕ್ಷತೆ ಪರಿಶೀಲಿಸಲು ಮೆಟ್ರೊ ರೈಲು ಸುರಕ್ಷತಾ ಆಯುಕ್ತರನ್ನು ಫೆಬ್ರುವರಿಯಲ್ಲಿ ಆಹ್ವಾನಿಸಲು ಯೋಚಿಸಲಾಗುತ್ತಿದೆ ಎಂದೂ ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.