ಮಂಗಳವಾರ, ಏಪ್ರಿಲ್ 7, 2020
19 °C
ಸಿಎಸ್ಐನ ಬಿಷಪ್ ಡಾ.ಪ್ರಸನ್ನಕುಮಾರ್ ಸಾಮ್ಯುಯೆಲ್ ವಿಷಾದ

ಗುಣಮಟ್ಟಕ್ಕೆ ಒತ್ತುನೀಡದ ವ್ಯಾಪಾರಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಲಹಂಕ: ವ್ಯಾಪಾರಿಗಳು ತ್ವರಿತಗತಿಯಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡುವ ಭರದಲ್ಲಿ ಗುಣಮಟ್ಟದ ಕಡೆಗೆ ಗಮನಹರಿಸುತ್ತಿಲ್ಲ ಎಂದು ಸಿಎಸ್ಐ ನ ಬಿಷಪ್ ಡಾ.ಪ್ರಸನ್ನಕುಮಾರ್ ಸಾಮ್ಯುಯೆಲ್ ಕಳವಳ ವ್ಯಕ್ತಪಡಿಸಿದರು.

ಉಪನಗರದ ಬಿಷಪ್ ಕಾಟನ್ ಕಾಲೇಜಿನಲ್ಲಿ ಆಯೋಜಿಸಿದ್ದ ವಾಣಿಜ್ಯ, ನಿರ್ವಹಣೆ ಹಾಗೂ ತಂತ್ರಜ್ಞಾನದಲ್ಲಿ ಆಗುತ್ತಿರುವ ಕ್ರಾಂತಿ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

‘ವ್ಯಾಪಾರಿಗಳು ಜನರನ್ನು ಗಮನದಲ್ಲಿಟ್ಟುಕೊಂಡು ವ್ಯಾಪಾರ ಮಾಡದೆ, ತನ್ನಲ್ಲಿರುವ ಉತ್ಪನ್ನಗಳು ಮಾರಾಟವಾದರೆ ಸಾಕೆಂಬ ರೀತಿಯಲ್ಲಿ ವಹಿವಾಟು ನಡೆಸುತ್ತಿದ್ದಾರೆ. ಈ ವ್ಯವಸ್ಥೆಯಿಂದ ಗ್ರಾಹಕರು ಮೋಸಹೋಗುವುದರ ಜೊತೆಗೆ ವ್ಯಾಪಾರಿಗಳ ಮೇಲಿನ ನಂಬಿಕೆ, ವಿಶ್ವಾಸ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಹಕರು ಜಾಗೃತಗೊಳ್ಳಬೇಕಿದೆ’ ಎಂದು ಹೇಳಿದರು.

ಬಿಷಪ್ ಕಾಟನ್ ಬಾಲಕರ ಶಾಲೆಯ ಪ್ರಾಂಶುಪಾಲ ಡಾ.ಎಡ್ವಿನ್ ಕ್ರಿಸ್ಟೋಫರ್ ಮಾತನಾಡಿ, ‘ಆಧುನಿಕ ತಂತ್ರಜ್ಞಾನ ಮತ್ತು ಡಿಜಿಟಲೀಕರಣದ ಯುಗದಲ್ಲಿ ಶಿಕ್ಷಕರು ತಮ್ಮ ಭೋದನಾ ಕ್ರಮದಲ್ಲಿ ನೂತನ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ  ಜ್ಞಾನವನ್ನು ಉನ್ನತೀಕರಿಸಿಕೊಳ್ಳಬೇಕಾದ ಅಗತ್ಯವಿದೆ’ ಎಂದರು. ಲೊಯೊಲಾ ಕಾಲೇಜಿನ (ತಮಿಳುನಾಡು) ಉಪಪ್ರಾಂಶುಪಾಲ ಡಾ.ಅರುಲ್ ಪಾನ್, ಬಿಎಂಎಸ್ಐಟಿ ಪ್ರಾಂಶುಪಾಲರಾದ ಡಾ.ಅನ್ನಮ್ಮ ಅಬ್ರಹಾಂ, ಬಿಷಪ್ ಕಾಟನ್ ಕಾಲೇಜಿನ ಪ್ರಾಂಶುಪಾಲರಾದ ಸ್ಯಾಮ್ ಮಾರ್ಟಿನ್ ಕ್ರಿಸ್ಟೋಫರ್, ಪ್ರವೀಣ್ ಕುಮಾರ್ ಆರ್. ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು