ಬೆಂಗಳೂರು: ಕೊಪ್ಪಳ ಜಿಲ್ಲೆ ಆನೆಗೊಂದಿಯಲ್ಲಿರುವ ನವವೃಂದಾವನದ ಮೂವರು ಯತಿಗಳ ಪೂಜಾ ಹಕ್ಕು ಹಾಗೂ ಆರಾಧನೆ ವಿಚಾರಕ್ಕೆ ಸಂಬಂಧಿಸಿ ಏಳು ದಶಕದಿಂದ ಕರ್ನಾಟಕದ ಎರಡು ಪ್ರಮುಖ ಮಾಧ್ವ ಮಠಗಳ ನಡುವೆ ಏರ್ಪಟ್ಟಿದ್ದ ವಿವಾದ ಬಗೆಹರಿಸಿಕೊಳ್ಳಲು ಅಂತಿಮ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.

ಮಂತ್ರಾಲಯದ ರಾಘವೇಂದ್ರಸ್ವಾಮಿಗಳ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮೀಜಿ ಹಾಗೂ ಉತ್ತರಾದಿ ಮಠದ ಪೀಠಾಧಿಪತಿ ಸತ್ಯಾತ್ಮತೀರ್ಥ ಸ್ವಾಮೀಜಿ ಬೆಂಗಳೂರಿನಲ್ಲಿ ಶನಿವಾರ ನಡೆಸಿದ ಸೌಹಾರ್ದ ಸಮಾಗಮ ಕಾರ್ಯಕ್ರಮದಲ್ಲಿ ಒಪ್ಪಂದಕ್ಕೆ ಬಂದರು.

ಜಯನಗರದಲ್ಲಿರುವ ರಾಘವೇಂದ್ರಸ್ವಾಮಿಗಳ ಮಠದಲ್ಲಿ ಮೊದಲು ಉಭಯ ಯತಿಗಳು ಚರ್ಚಿಸಿ ಒಪ್ಪಂದ ಅಂತಿಮಗೊಳಿಸಿ ನಂತರ ಬಸವನಗುಡಿಯಲ್ಲಿರುವ ಉತ್ತರಾದಿಮಠಕ್ಕೆ ಬಂದು ಪ್ರಕಟಿಸಿದರು. ಬಳಿಕ ಜಯನಗರದ ರಾಯರಮಠಕ್ಕೆ ತೆರಳಿ ಅಲ್ಲಿ ಸಹಿ ಹಾಕಿದರು. ಈ ವೇಳೆ ಹಾಜರಿದ್ದ ಭಕ್ತರು ಸಂತಸದಿಂದಲೇ ನಿರ್ಧಾರವನ್ನು ಸ್ವಾಗತಿಸಿದರು.

ಕೂಡಲಿ ಅಕ್ಷೋಭ್ಯತೀರ್ಥಮಠದ ಪೀಠಾಧಿಪತಿ ರಘುವಿಜಯತೀರ್ಥ ಸ್ವಾಮೀಜಿ ಉಭಯ ಮಠಾಧೀಶರೊಂದಿಗೆ ಪರಸ್ಪರ ಮಾತುಕತೆ, ಮಧ್ಯಸ್ಥಿಕೆಯನ್ನು ವಹಿಸಿದ್ದರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳಾದ ದಿನೇಶ್ಕುಮಾರ್, ಶ್ರೀಧರರಾವ್, ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರರಾವ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ಮುಕುಂದ ಸಹಿತ ಹಲವರ ಉಪಸ್ಥಿತಿಯಲ್ಲಿ ಪ್ರಕ್ರಿಯೆಗಳು ನಡೆದವು.

‘ಉಭಯ ಮಠಗಳ ನಡುವೆ ಹಲವಾರು ವರ್ಷಗಳಿಂದ ವಿವಾದ ಇತ್ತು. ಈಗ ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಅಂತಿಮ ನಿರ್ಧಾರಕ್ಕೆ ಬರಲಾಗಿದೆ. ಸದ್ಯವೇ ಸುಪ್ರೀಂಕೋರ್ಟ್ಗೆ ಒಪ್ಪಂದದ ಕರಡನ್ನು ಸಲ್ಲಿಸಲಾಗುತ್ತದೆ. ಅಲ್ಲಿಂದ ಬರುವ ನಿರ್ದೇಶನ ಪಾಲಿಸಿ ಕಾನೂನು ಹೋರಾಟದಿಂದ ಹಿಂದೆ ಸರಿದು ಭಕ್ತರ ಆಶಯಗಳಿಗೆ ಅನುಗುಣವಾಗಿ ಉಭಯ ಮಠಗಳು ಮುಂದುವರಿಯಲಿವೆ. ಇನ್ನುಳಿದ ವಿವಾದಗಳನ್ನು ಹಂತ– ಹಂತವಾಗಿ ಬಗೆಹರಿಸಿಕೊಳ್ಳಲಾಗುವುದು’ ಎಂದು ಪ್ರಮುಖರೊಬ್ಬರು ತಿಳಿಸಿದರು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ರಾಯರಮಠ ಹಾಗೂ ಉತ್ತರಾದಿ ಮಠದ ನಡುವೆ ಏರ್ಪಟ್ಟಿದ್ದ ಗೊಂದಲ ಬಗೆಹರಿಸುವ ಪ್ರಯತ್ನಕ್ಕೆ ನಿರೀಕ್ಷಿತ ಫಲ ಸಿಕ್ಕಿರಲಿಲ್ಲ. ಇದು ಮಠ, ಜಾತಿಯೊಳಗಿನ ಸಂಘರ್ಷ ಎನ್ನುವುದಕ್ಕಿಂತ ಭಾರತ ಹಾಗೂ ಸನಾತನ ಧರ್ಮದ ಉಳಿವಿನ ನಿಟ್ಟಿನಲ್ಲಿ ನೋಡುವಂತೆ ಸಮಾಜದ ಪ್ರಮುಖರು ನೀಡಿದ್ದ ಸಲಹೆ, ಹಲವರ ಮಧ್ಯಸ್ಥಿಕೆಯಲ್ಲಿ ಬಗೆಹರಿದಿರುವುದು ಒಳ್ಳೆಯ ಬೆಳವಣಿಗೆ. ಭಕ್ತರು ಗೊಂದಲಕ್ಕೆ ಆಸ್ಪದಕ್ಕೆ ಅವಕಾಶ ಕೊಡಬಾರದು’ ಎಂದು ಮನವಿ ಮಾಡಿದರು.

ನವವೃಂದಾವನದಲ್ಲಿ ಮೂವರು ಯತಿಗಳಾದ ಪದ್ಮನಾಭ ತೀರ್ಥರು, ಕವೀಂದ್ರ ತೀರ್ಥರು ಹಾಗೂ ವಾಗೀಶ ತೀರ್ಥರ ಆರಾಧನೆ ಯಾರು ಆಚರಿಸಬೇಕು ಎನ್ನುವ ವಿಚಾರದಲ್ಲಿ ವಿವಾದ ಏರ್ಪಟ್ಟು ನ್ಯಾಯಾಲಯ ಮೆಟ್ಟಿಲು ಏರಿತ್ತು. ಸ್ಥಳೀಯ ನ್ಯಾಯಾಲಯ ನಂತರ ಹೈಕೋರ್ಟ್ನಲ್ಲೂ ವ್ಯಾಜ್ಯವಿತ್ತು. ಬಳಿಕ ಸುಪ್ರೀಂಕೋರ್ಟ್ಗೂ ಅರ್ಜಿ ಸಲ್ಲಿಕೆಯಾಗಿ ವಿಚಾರಣೆ ನಡೆದಿತ್ತು.

‘ಉಭಯ ಮಠಗಳ ಪ್ರಮುಖರು ಕುಳಿತು ಇದನ್ನು ಬಗೆಹರಿಸಿಕೊಳ್ಳಬೇಕು’ ಎಂದು ಸುಪ್ರೀಂಕೋರ್ಟ್ ನಿರ್ದೇಶನ ನೀಡಿತ್ತು. ಆನಂತರ ಮಾತುಕತೆಗಳು ಶುರುವಾಗಿದ್ದವು. ಈಗಾಗಲೇ ಚೆನ್ನೈ, ಬೆಂಗಳೂರು, ಆನೆಗೊಂದಿಯಲ್ಲೂ ಉಭಯರ ನಡುವೆ ಹಲವು ಸುತ್ತಿನಲ್ಲಿ ಮುಕ್ತ ಮಾತುಕತೆಗಳು ನಡೆದು ರಾಜೀ ಸಂಧಾನಕ್ಕೆ ಬರಲಾಗಿತ್ತು.

ಒಪ್ಪಂದ ಏನು?

‘ಮುಖ್ಯವಾಗಿ ನವವೃಂದಾವನದಲ್ಲಿರುವ ಮೂವರು ಯತಿಗಳ ವೃಂದಾವನದಲ್ಲಿ ಪದ್ಮನಾಭ ತೀರ್ಥರ ಆರಾಧನೆ ನವೆಂಬರ್ನಲ್ಲಿ ಕವೀಂದ್ರ ತೀರ್ಥರು ಹಾಗೂ ವಾಗೀಶ ತೀರ್ಥರ ಆರಾಧನೆ ಏಪ್ರಿಲ್ನಲ್ಲಿ ಬರಲಿದೆ. ಪದ್ಮನಾಭ ತೀರ್ಥರ ಆರಾಧನೆಯನ್ನು ಸರದಿ ಆಧಾರದಲ್ಲಿ ಒಂದೊಂದು ವರ್ಷ ಉಭಯ ಮಠಗಳು ನಡೆಸಲಿವೆ. ಇನ್ನಿಬ್ಬರ ಆರಾಧನೆಯನ್ನು ಒಂದೊಂದು ಮಠದಿಂದ ಒಂದು ವರ್ಷ ನಡೆಸಲಾಗುತ್ತದೆ. ಉಭಯ ಮಠಗಳ ಭಕ್ತರು ಪ್ರಮುಖರು ಆಯಾ ಆರಾಧನೆ ಆಚರಣೆ ವೇಳೆ ಮಠಕ್ಕೆ ಆಗಮಿಸಲಿದ್ದಾರೆ ’ ಎಂದು ಪ್ರಮುಖರೊಬ್ಬರು ತಿಳಿಸಿದರು.

ಉಭಯ ಮಠಗಳ ನಡುವಿನ ನವವೃಂದಾವನಗಡ್ಡೆ ವಿವಾದ ಸಕಾರಾತ್ಮಕ ಹಾಗೂ ಸೌಹಾರ್ದಪೂರ್ಣವಾಗಿ ಅಂತ್ಯ ಕಂಡಿದೆ.ಮಾಧ್ವ ಸಮುದಾಯದಲ್ಲಿ ಏಕತೆ ಸೌಹಾರ್ದಕ್ಕೆ ಪುಷ್ಟಿ ನೀಡಲಿದೆ.
-ಸುಬುಧೇಂದ್ರತೀರ್ಥ ಸ್ವಾಮೀಜಿ, ರಾಘವೇಂದ್ರಸ್ವಾಮಿಗಳ ಮಠ

ಸನಾತನ ಧರ್ಮ ಉಳಿಸಿಕೊಳ್ಳಲು ಒಪ್ಪಂದದ ಅಗತ್ಯವಿತ್ತು. ಇದನ್ನು ಅಂತಿಮಗೊಳಿಸಿ ಹಂತ ಹಂತವಾಗಿ ನಮ್ಮ ಆಚರಣೆಗಳ ಮೂಲಕ ಬಗೆಹರಿಸಿಕೊಳ್ಳುತ್ತಾ ಹೋಗುತ್ತೇವೆ.
-ಸತ್ಯಾತ್ಮ ತೀರ್ಥ ಸ್ವಾಮೀಜಿ, ಉತ್ತರಾದಿ ಮಠ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.