ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀಟ್: ಆಕಾಶ್‌ ಸಂಸ್ಥೆಯ ಚಿರಾಗ್‌ಗೆ 113ನೇ ರ‍್ಯಾಂಕ್

Last Updated 18 ಅಕ್ಟೋಬರ್ 2020, 21:22 IST
ಅಕ್ಷರ ಗಾತ್ರ

ಬೆಂಗಳೂರು: ಆಕಾಶ್‌ ಸಂಸ್ಥೆಯಲ್ಲಿ ತರಬೇತಿ ಪಡೆದಿದ್ದ ನಗರದ ಜಿ. ಚಿರಾಗ್‌ ನೀಟ್‌ನಲ್ಲಿ 113ನೇ ರ‍್ಯಾಂಕ್‌ ಪಡೆದಿದ್ದಾರೆ. ಅಲ್ಲದೆ, ರಾಜ್ಯದಲ್ಲಿ ಟಾಪ್‌ 10 ರ‍್ಯಾಂಕ್‌ ಪಡೆದವರಲ್ಲಿ ಬಹುತೇಕ ವಿದ್ಯಾರ್ಥಿಗಳು ಆಕಾಶ್‌ ಸಂಸ್ಥೆಯಲ್ಲಿ ತರಬೇತಿ ಪಡೆದವರೇ ಆಗಿದ್ದಾರೆ ಎಂದು ಸಂಸ್ಥೆ ಹೇಳಿಕೊಂಡಿದೆ.

ಮೈಸೂರಿನ ಎಂ.ಎಸ್. ಯಶಸ್ ಎಂ.ಎಸ್ (148ನೇ ರ‍್ಯಾಂಕ್), ಬೆಂಗಳೂರಿನ ಶ್ರೀಜಾ ಚಟ್ಟೋಪಾಧ್ಯಾಯ (154), ವೀರೇಶ ಸಬರದ (157), ಎ.ಎಲ್‌.ಡಿ. ಜತಿನ್(412), ಮೈಸೂರಿನ ಡಿ. ಯದುನಂದನ್ (537), ಮಂಗಳೂರಿನ ಲೆ ರಾಯ್ ಡಿಸೋಜಾ (588), ಬೆಂಗಳೂರಿನ ಶ್ರೀ ಶ್ರೇಯಾ ಝಾ (712), ಪ್ರಜ್ವಲ್ ಕಶ್ಯಪ್ (900) ಮತ್ತು ಬೆಂಗಳೂರಿನ ಪೂರ್ಣ ರೆಡ್ಡಿ (934) ಆಕಾಶ್‌ನ ವಿವಿಧ ಶಾಖೆಗಳಲ್ಲಿ ತರಬೇತಿ ಪಡೆದಿದ್ದಾರೆ ಎಂದು ಸಂಸ್ಥೆ ಹೇಳಿದೆ.

‘ನಮ್ಮ ಸಂಸ್ಥೆಯ ಬೆಂಗಳೂರು ಕೇಂದ್ರದಿಂದ 7 ವಿದ್ಯಾರ್ಥಿಗಳನ್ನು ಒಳಗೊಂಡಂತೆ, ನಮ್ಮ ವಿವಿಧ ಕೇಂದ್ರಗಳಿಂದ 10 ವಿದ್ಯಾರ್ಥಿಗಳು ನೀಟ್‌ನಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ನಮ್ಮ ಸಂಸ್ಥೆಯಿಂದ ನೀಡುವ ಗುಣಮಟ್ಟದ ಪರೀಕ್ಷಾ ತರಬೇತಿಯು, ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಲು ಕಾರಣವಾಗಿದೆ’ ಎಂದು ಆಕಾಶ್‌ ಎಜುಕೇಷನಲ್ ಸರ್ವಿಸಸ್ ಲಿಮಿಟೆಡ್‌ನ ನಿರ್ದೇಶಕ ಆಕಾಶ್‌ ಚೌಧರಿ ಹೇಳಿದ್ದಾರೆ.

‘ಸಂಸ್ಥೆಯು ನೀಟ್‌ ಸೇರಿದಂತೆ ಶಾಲೆ ಅಥವಾ ಬೋರ್ಡ್‌ ಪರೀಕ್ಷೆಗಳು, ಎನ್‌ಟಿಎಸ್‌ಇ, ಕೆವಿಪಿವೈ ಮತ್ತು ಒಲಿಂಪಿಯಾಡ್‌ನಂತಹ ಸ್ಮರ್ಧಾತ್ಮಕ ಪರೀಕ್ಷೆಗಳಿಗೂ ತರಬೇತಿ ನೀಡುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT