ಬೆಂಗಳೂರು: ನಗರದಾದ್ಯಂತ ಹೊಸ ವರ್ಷದ ಸಡಗರದಲ್ಲಿ ಯುವಜನರು ತೇಲಿದರು. ಕೈ ಕೈ ಹಿಡಿದು ನಡೆದು, ಕುಣಿದು–ನಲಿದು ಸಂಭ್ರಮಿಸಿದರು.

ವಿವಿಧ ಪಬ್, ಬಾರ್, ರೆಸ್ಟೊರೆಂಟ್ಗಳು ತುಂಬಿದ್ದವು. ಎಂ.ಜಿ. ರಸ್ತೆ, ಕೋರಮಂಗಲ ಸೇರಿದಂತೆ ಹಲವು ರಸ್ತೆಗಳಲ್ಲಿ ಜನಸಂದಣಿ ಕಂಡುಬಂತು.

ಮಹಾತ್ಮ ಗಾಂಧಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ಒಪೆರಾ ಜಂಕ್ಷನ್, ರೆಸ್ಟ್ಹೌಸ್ ರಸ್ತೆ, ಸೇಂಟ್ ಮಾರ್ಕ್ಸ್ ರಸ್ತೆ, ರಿಚ್ಮಂಡ್ ರಸ್ತೆ, ರೆಸಿಡೆನ್ಸಿ ರಸ್ತೆಯಲ್ಲಿ ಸಂಭ್ರಮ ಮನೆ ಮಾಡಿತ್ತು. ಕೋರಮಂಗಲದಲ್ಲಿ ಹೆಚ್ಚಿನ ಯುವ ಸಮೂಹ ಕಂಡುಬಂತು.

ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್ನಲ್ಲಿ ಸುತ್ತಾಡುವಾಗ ನೂಕುನುಗ್ಗಲು ಆಗುವುದನ್ನು ತಪ್ಪಿಸಲು ಏಕಮುಖವಾಗಿ ಮಾತ್ರ ಸಾಗುವಂತೆ ಪೊಲೀಸರು ವ್ಯವಸ್ಥೆ ಮಾಡಿದ್ದರು. ಯಾರೂ ತಿರುಗಿ ಬರುವಂತಿಲ್ಲ. ಒಂದು ವೇಳೆ ಬರಬೇಕಿದ್ದರೆ ಸುತ್ತು ಹಾಕಿಯೇ ಬರುವಂತೆ ಮಾಡಲಾಗಿತ್ತು.

ಇಂದಿರಾನಗರದ 100 ಅಡಿ ರಸ್ತೆ, 12ನೇ ಮುಖ್ಯರಸ್ತೆಯ 80 ಅಡಿ ರಸ್ತೆ–ಡಬಲ್ ರೋಡ್ ಜಂಕ್ಷನ್, ಐಟಿಪಿಎಲ್ ಮುಖ್ಯರಸ್ತೆ, ಗರುಡಾಚಾರ್ ಪಾಳ್ಯ, ಕೋರಮಂಗಲದ ನ್ಯಾಷನಲ್ ಗೇಮ್ಸ್ ವಿಲೇಜ್–ಯುಕೊ ಬ್ಯಾಂಕ್ ರಸ್ತೆ, ವೈಡಿ ಮಠ ರಸ್ತೆ, ಬ್ಯಾಟರಾಯನಪುರದ ಮಾಲ್ ಆಫ್ ಏಷ್ಯಾ, ರಾಜಾಜಿನಗರದ ಓರಾಯನ್ ಮಾಲ್ ಮುಂದೆ ಭಾರಿ ಸಂಖ್ಯೆಯಲ್ಲಿ ಸೇರಿದ್ದ ಜನರು ಸಂಭ್ರಮದಿಂದ ಹೊಸವರ್ಷ ಆಚರಿಸಿದರು.

ನಾಗರಬಾವಿಯ ಕಿಂಗ್ಸ್ ಕ್ಲಬ್ ಸೇರಿದಂತೆ ಹಲವು ಕ್ಲಬ್, ಪಬ್ಗಳಲ್ಲಿ ಸಂಭ್ರಮ ಮುಗಿಲು ಮುಟ್ಟಿತ್ತು. ಫಿನಿಕ್ಸ್ ಮಾಲ್, ವೈಟ್ಫೀಲ್ಡ್, ಬೆಳ್ಳಂದೂರು, ಕೊತ್ತನೂರು, ಎಚ್ಎಸ್ಆರ್ ಲೇಔಟ್ನಲ್ಲಿ ಹರ್ಷದಿಂದ ಹೊಸ ವರ್ಷವನ್ನು ಬರಮಾಡಿಕೊಳ್ಳಲಾಯಿತು. ರಾತ್ರಿ 12 ಕಳೆಯುತ್ತಿದ್ದಂತೆಯೇ ಪರಸ್ಪರ ಹೊಸ ವರ್ಷದ ಶುಭಾಶಯ ವಿನಿಮಯ ಮಾಡಿಕೊಂಡು ಸಂಭ್ರಮಿಸಿದರು.

ಇಂದಿರಾನಗರದ 100 ಅಡಿ ರಸ್ತೆಯೊಂದರಲ್ಲಿಯೇ 30ಕ್ಕೂ ಅಧಿಕ ಪಬ್ಗಳು, ಹಲವು ಕ್ಲಬ್ಗಳು, ರೆಸ್ಟೊರೆಂಟ್ಗಳು ಇದ್ದು ಜನರು ಮುಂಗಡವಾಗಿ ಕಾಯ್ದಿರಿಸಿದ್ದರು.

ಮೆಟ್ರೊ ಬಂದ್: ನಮ್ಮ ಮೆಟ್ರೊ ರೈಲಿನ ಸಾಮರ್ಥ್ಯ ಮೀರಿ ಜನರು ಬರುವುದನ್ನು ತಡೆಯುವುದಕ್ಕಾಗಿ ಎಂ.ಜಿ. ರಸ್ತೆಯಲ್ಲಿ ನಮ್ಮ ಮೆಟ್ರೊ ನಿಲ್ದಾಣವನ್ನು ರಾತ್ರಿ 10 ಗಂಟೆಗೆ ಬಂದ್ ಮಾಡಲಾಗಿತ್ತು. ಹೀಗಾಗಿ, ಮೆಟ್ರೊ ರೈಲಿನಲ್ಲಿ ಸಂಚರಿಸುವವರು ಟ್ರಿನಿಟಿ ಇಲ್ಲವೇ ಕಬ್ಬನ್ ಪಾರ್ಕ್ ನಿಲ್ದಾಣಕ್ಕೆ ಹೋಗಬೇಕಾಯಿತು.

ರಾತ್ರಿ 12ಕ್ಕೆ ಹೊಸ ವರ್ಷವನ್ನು ಬರಮಾಡಿಕೊಂಡ ನಂತರ ನಿಧಾನವಾಗಿ ಜನದಟ್ಟಣೆ ಕರಗತೊಡಗಿತ್ತು. ಜನರಿಗೆ ರಾತ್ರಿ ಸಂಚಾರಕ್ಕೆ ಅನುಕೂಲ ಮಾಡಿಕೊಡಲು ನಮ್ಮ ಮೆಟ್ರೊ ರೈಲುಗಳು ತಡರಾತ್ರಿವರೆಗೆ ಸಂಚರಿಸಿದವು. ನೇರಳೆ ಮಾರ್ಗದಲ್ಲಿ ವೈಟ್ಫೀಲ್ಡ್ನಿಂದ ರಾತ್ರಿ 1.45ಕ್ಕೆ ಚಲ್ಲಘಟ್ಟದಿಂದ ರಾತ್ರಿ 2ಕ್ಕೆ ಕೊನೇ ರೈಲುಗಳು ಸಂಚರಿಸಿದವು. ಹಸಿರು ಮಾರ್ಗದಲ್ಲಿ ಮಾದಾವರದಿಂದ ಮತ್ತು ರೇಷ್ಮೆ ಸಂಸ್ಥೆಯಿಂದ ರಾತ್ರಿ 2ಕ್ಕೆ ಕೊನೇ ರೈಲುಗಳು ಹೊರಟವು. ಮೆಜೆಸ್ಟಿಕ್ನ ನಾಡಪ್ರಭು ಕೆಂಪೇಗೌಡ ಮೆಟ್ರೊ ನಿಲ್ದಾಣದಿಂದ ನಾಲ್ಕು ಟರ್ಮಿನಲ್ಗಳ ಕಡೆಗೆ ರಾತ್ರಿ 2.45ಕ್ಕೆ ಕೊನೇ ರೈಲುಗಳು ಸಂಚರಿಸಿದವು.

ಹಳದಿ ಮಾರ್ಗದಲ್ಲಿ ಬೊಮ್ಮಸಂದ್ರದಿಂದ ಆರ್ವಿ ರಸ್ತೆಯವರೆಗೆ ರಾತ್ರಿ 1.30ಕ್ಕೆ ಕಡೆಯ ರೈಲು ಸಂಚರಿಸಿತು. ಹಸಿರು ಮಾರ್ಗದಿಂದ ಹಳದಿ ಮಾರ್ಗಕ್ಕೆ ಅಂತರ್ ಬದಲಾಗುವವರಿಗೆ ಅನುಕೂಲ ಆಗುವಂತೆ ಆರ್ವಿ ರಸ್ತೆಯಿಂದ ಬೊಮ್ಮಸಂದ್ರ ಕಡೆಗೆ ಕೊನೇ ಮೆಟ್ರೊ ರಾತ್ರಿ 3.10ಕ್ಕೆ ಸಂಚರಿಸಿತು.

ಬಿಎಂಟಿಸಿ ಬಸ್ಗಳು ರಾತ್ರಿ 2 ಗಂಟೆಯವರೆಗೆ ವಿವಿಧೆಡೆ ಸಂಚರಿಸಿದವು. ಬ್ರಿಗೇಡ್ ರಸ್ತೆಯಿಂದ ಎಲೆಕ್ಟ್ರಾನಿಕ್ಸ್ ಸಿಟಿ, ಜಿಗಣಿ, ಎಂ.ಜಿ. ರಸ್ತೆಯಿಂದ ಸರ್ಜಾಪುರ, ಕೆಂಗೇರಿ, ಜನಪ್ರಿಯ ಟೌನ್ಶಿಪ್, ನೆಲಮಂಗಲ, ಯಲಹಂಕ, ಬಾಗಲೂರು, ಹೊಸಕೋಟೆ, ಚನ್ನಸಂದ್ರ, ಕಾಡುಗೋಡು, ಜೀವನ್ ಬಿಮಾನಗರಕ್ಕೆ ಸಂಚರಿಸಿದ ಬಸ್ಗಳು ತುಂಬಿ ಹೋಗಿದ್ದವು. ಆರ್.ವಿ. ರಸ್ತೆ ಮೆಟ್ರೊ ನಿಲ್ದಾಣದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ಗೆ, ಮೆಜೆಸ್ಟಿಕ್ನಿಂದ ಕೋರಮಂಗಲಕ್ಕೆ ತಡರಾತ್ರಿವರೆಗೆ ಬಸ್ಗಳು ಸಂಚರಿಸಿದವು.

ರೆಸಾರ್ಟ್ ಪಬ್ಗಳಲ್ಲಿ ಭರ್ಜರಿ ವ್ಯಾಪಾರ

ಪಬ್ಗಳಲ್ಲಿ ಭರ್ಜರಿ ವ್ಯಾಪಾರ ನಡೆಯಿತು. ಬೇಕರಿಗಳಲ್ಲಿ ವಿಭಿನ್ನವಾದ ಕೇಕ್ ತಯಾರಿಸಲಾಗಿತ್ತು. ಬೆಳಿಗ್ಗೆಯಿಂದಲೂ ಬೇಕರಿಗಳ ಮುಂದೆ ಜನದಟ್ಟಣೆ ಕಂಡುಬಂತು. ನೂತನ ವಿನ್ಯಾಸದ ಕೇಕ್ಗಳನ್ನು ಕತ್ತರಿಸಿ ಜನರು ಸಂಭ್ರಮಿಸಿದರು. ಈ ಬಾರಿ ಪ್ರವಾಸಿ ತಾಣಗಳ ಪ್ರವೇಶಕ್ಕೆ ನಿರ್ಬಂಧಿಸಲಾಗಿದೆ. ಆದ್ದರಿಂದ ರೆಸಾರ್ಟ್ಗಳು ಪಬ್ಗಳು ಜನರಿಂದ ಭರ್ತಿಯಾಗಿದ್ದವು. ಬೆಂಗಳೂರು ನಗರದ ಹೊರ ವಲಯದಲ್ಲಿರುವ ಬಹುತೇಕ ರೆಸಾರ್ಟ್ಗಳಲ್ಲಿ ಸಂಗೀತ ಹಾಗೂ ರೇನ್ ಡಾನ್ಸ್ ಸೇರಿದಂತೆ ಹಲವು ಮನರಂಜನೆಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಅಪಾರ್ಟ್ಮೆಂಟ್ಗಳಲ್ಲಿ ಸಂಭ್ರಮ

ಹೊಸ ವರ್ಷವನ್ನು ಸ್ವಾಗತಿಸಲು ನಗರದ ವಿವಿಧ ಅಪಾರ್ಟ್ಮೆಂಟ್ಗಳು ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸುತ್ತಿದ್ದವು. ಅಪಾರ್ಟ್ಮೆಂಟ್ ಸಂಘದವರು ಪಾರ್ಟಿಗಳನ್ನು ಆಯೋಜಿಸಿದ್ದರು. ಹಾಡು ನೃತ್ಯ ಸಂಗೀತ ಕಾರ್ಯಕ್ರಮಗಳು ನಡೆದವು. ರಾಜರಾಜೇಶ್ವರಿ ನಗರ ಮಹಾಲಕ್ಷ್ಮಿ ಬಡಾವಣೆ ಅಶೋಕ ನಗರ ಮತ್ತಿಕೆರೆ ಕೆಂಗೇರಿ ಬಸವನಗುಡಿ ಜಯನಗರ ಜೆ.ಪಿ ನಗರ ಪೀಣ್ಯ ಮಲ್ಲೇಶ್ವರ ಶೇಷಾದ್ರಿಪುರ ದೀಪಾಂಜಲಿ ನಗರ ಸುಬ್ರಹ್ಮಣ್ಯ ನಗರ ಯಶವಂತಪುರ ಜಾಲಹಳ್ಳಿ ದಾಸರಹಳ್ಳಿ ಎಚ್ಎಸ್ಆರ್ ಲೇಔಟ್ ಇಂದಿರಾನಗರ ದೊಮ್ಮಲೂರು ವೈಟ್ಫೀಲ್ಡ್ ವಿಜಯನಗರ ನಾಗರಬಾವಿ ಕೆಂಗೇರಿ ಯಲಹಂಕ ಕೆ.ಆರ್. ಪುರ ಶಿವಾಜಿನಗರ ಕಾಕ್ಸ್ಟೌನ್ ಬೆನ್ಸನ್ಟೌನ್ ಸೇರಿದಂತೆ ನಗರದ ಅನೇಕ ಪ್ರದೇಶಗಳ ಅಪಾರ್ಟ್ಮೆಂಟ್ಗಳಲ್ಲಿ ಹೊಸ ವರ್ಷದ ಸಂಭ್ರಮ ಮನೆ ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.