ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಾತಿ–ಧರ್ಮಗಳ ತಾರತಮ್ಯ ಜೀವಂತ’

ವಿಮರ್ಶಕ ಎಸ್.ಆರ್.ವಿಜಯಶಂಕರ್
Last Updated 9 ಆಗಸ್ಟ್ 2021, 17:38 IST
ಅಕ್ಷರ ಗಾತ್ರ

ಬೆಂಗಳೂರು:‘ಜಾತಿ ಮತ್ತು ಧರ್ಮಗಳ ತಾರತಮ್ಯ ಈಗಲೂ ಜೀವಂತವಾಗಿದ್ದು, ಮಾನವನ ಬದುಕನ್ನೇ ಅಂಧಕಾರಗೊಳಿಸಿದೆ’ ಎಂದು ವಿಮರ್ಶಕ ಎಸ್.ಆರ್.ವಿಜಯಶಂಕರ್ ಬೇಸರ ವ್ಯಕ್ತಪಡಿಸಿದರು.

ಸ್ವಾಭಿಮಾನಿ ಕರ್ನಾಟಕ ವೇದಿಕೆಯು ಶೇಷಾದ್ರಿಪುರದಲ್ಲಿ ಆಯೋಜಿಸಿದ್ದ ‘ಸ್ವಾಭಿಮಾನಿ ಪುಸ್ತಕ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವೇದಿಕೆಯ ಅಧ್ಯಕ್ಷ ದ್ವಾರನಕುಂಟೆ ಪಾತಣ್ಣ,‘ಹಿಂದಿನ ವರ್ಷಗಳಲ್ಲಿ ವೇದಿಕೆ ಸದಸ್ಯರು ಪ್ರಕಟಿಸಿದ ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮ ನಡೆಯುತ್ತಿದ್ದವು. ಮೊದಲ ಬಾರಿಗೆಸ್ವಾಭಿಮಾನಿ ಪುಸ್ತಕ ಪ್ರಶಸ್ತಿ ನಡೆದಿದೆ’ ಎಂದರು.

ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟದ ಅಧ್ಯಕ್ಷ ಎಂ.ತಿಮ್ಮಯ್ಯ,‘ಆದಿಪುರಾಣ ಕಾವ್ಯ ರಚನೆಗೊಂಡು ಸಾವಿರಾರು ವರ್ಷಗಳು ಕಳೆದರೂ ಜನಮನದಲ್ಲಿ ಉಳಿದಿದೆ. ಅದರಲ್ಲಿರುವ ಸತ್ವ ಮುಂದಿನ ಸಾವಿರಾರು ವರ್ಷಗಳವರೆಗೆ ಉಳಿಯಲಿದೆ’ ಎಂದು ಹೇಳಿದರು.

ಪ್ರಶಸ್ತಿ ಪ್ರದಾನ: ಲೇಖಕರಾದ ಮಿರ್ಜಾ ಬಷೀರ್, ಮಂಜುಳಾ ಹಿರೇಮಠ, ಸ್ಮಿತಾ ಅಮೃತರಾಜ್ ಸಂಪಾಜೆ, ಜಾಣಗೆರೆ ವೆಂಕಟರಾಮಯ್ಯ, ಕಾ.ತ.ಚಿಕ್ಕಣ್ಣ ಅವರ ಕೃತಿಗಳಿಗೆ ‘ಸ್ವಾಭಿಮಾನಿ ಪುಸ್ತಕ ಪ್ರಶಸ್ತಿ’ ಸಹಿತ ₹5 ಸಾವಿರ ನಗದು ನೀಡಿ ಪುರಸ್ಕರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT