ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಎಚ್‌ಎಂ: ಹೆಚ್ಚಳ ಅನುದಾನ ಬಿಡುಗಡೆ

Published 28 ಡಿಸೆಂಬರ್ 2023, 20:06 IST
Last Updated 28 ಡಿಸೆಂಬರ್ 2023, 20:06 IST
ಅಕ್ಷರ ಗಾತ್ರ

ಬೆಂಗಳೂರು: ರಾಷ್ಟ್ರೀಯ ಆರೋಗ್ಯ ಅಭಿಯಾನ (ಎನ್‌ಎಚ್‌ಎಂ) ನೌಕರರಿಗೆ ಹೆಚ್ಚಿಸಲಾಗಿದ್ದ ಶೇ 15ರಷ್ಟು ವೇತನಕ್ಕೆ ಸರ್ಕಾರವು ₹ 56.76 ಕೋಟಿ ಅನುದಾನವನ್ನು ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ.  

ಈ ಹೆಚ್ಚಳವು 2023ರ ಏ.1ರಿಂದಲೇ ಅನ್ವಯವಾಗಲಿದ್ದು, 16,847 ನೌಕರರು ಇದರ ಫಲಾನುಭವಿಗಳಾಗಿದ್ದಾರೆ. 

ಈ ಹಿಂದೆ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ನೌಕರರ ಆಗ್ರಹಕ್ಕೆ ಮಣಿದ ಎನ್‌ಎಚ್‌ಎಂ, 2023ರ ಸೆಪ್ಟೆಂಬರ್‌ನಲ್ಲಿ ವೇತನವನ್ನು ಶೇ 15ರವರೆಗೆ ಹೆಚ್ಚಿಸಿ ಆದೇಶಿಸಿತ್ತು. ಆದರೆ, ಅನುದಾನವನ್ನು ಬಿಡುಗಡೆ ಮಾಡಿರಲಿಲ್ಲ. ನೌಕರರ ಹೋರಾಟದ ಬಳಿಕ ಅಗತ್ಯ ಅನುದಾನವನ್ನು ಬಿಡುಗಡೆ ಮಾಡಿದೆ. 

‘ನಿವೃತ್ತ ಐಎಎಸ್ ಅಧಿಕಾರಿ ಪಿ.ಎನ್. ಶ್ರೀನಿವಾಸಾಚಾರಿ ಅಧ್ಯಕ್ಷ್ಯತೆಯ ಮಾನವ ಸಂಪನ್ಮೂಲ ಸಮಿತಿ ಸಲ್ಲಿಸಿದ್ದ ವರದಿಯಂತೆ ಶೇ 15ರಷ್ಟು ವೇತನ ಹೆಚ್ಚಳದ ಅನುದಾನವನ್ನು ಬಿಡುಗಡೆ ಮಾಡಿರುವುದು ಸಂತಸವನ್ನುಂಟು ಮಾಡಿದೆ’ ಎಂದು ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಶ್ರೀಕಾಂತ ಸ್ವಾಮಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT