ಬುಧವಾರ, ಅಕ್ಟೋಬರ್ 5, 2022
26 °C

ಡಿಜೆ ಹಳ್ಳಿ ಗಲಭೆ, ಪ್ರವೀಣ್ ನೆಟ್ಟಾರು ಕೊಲೆ ಕೇಸ್‌: ಬೆಂಗಳೂರಿ‌ನಲ್ಲಿ ಎನ್ಐಎ ಶೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಡಿ.ಜೆ.ಹಳ್ಳಿ ಗಲಭೆ ಹಾಗೂ ಪ್ರವೀಣ್ ನೆಟ್ಟಾರು ಕೊಲೆ ಬಗ್ಗೆ ತನಿಖೆ ಮಡೆಸುತ್ತಿರುವ ಎನ್ಐಎ ಅಧಿಕಾರಿಗಳು, ಬೆಂಗಳೂರಿನ ಅಪಾರ್ಟ್‌ಮೆಂಟ್ ಸಮುಚ್ಚಯದ ಫ್ಲಾಟ್‌ವೊಂದರಲ್ಲಿ ಗುರುವಾರ ನಸುಕಿನಲ್ಲಿ ಶೋಧ ನಡೆಸಿದರು.

ಸ್ಥಳೀಯ ಪೊಲೀಸರ ಜೊತೆ ರಿಚ್ಮ‌ಂಡ್ ಟೌನ್‌ನಲ್ಲಿರುವ ಫ್ಲಾಟ್‌ಗೆ ಹೋಗಿದ್ದ ಎನ್‌ಐಎ ತಂಡ, ಎರಡು ಕಡೆ ಶೋಧ ನಡೆಸಿತು. ನಂತರ, ವಾಪಸು ತೆರಳಿತು. ಸದ್ಯ ಫ್ಲ್ಯಾಟ್ ಬಳಿ ಪೊಲೀಸರ ಭದ್ರತೆ ಇದೆ.

ದೇಶ, ರಾಜ್ಯದ ಹಲವು ನಗರಗಳಲ್ಲಿರುವ ಪಿಎಫ್ಐ ಕಚೇರಿ ಹಾಗೂ ಸಂಘಟನೆ ಸದಸ್ಯರ‌ ಮನೆಗಳಲ್ಲಿ ಎನ್ಐಎ ಅಧಿಕಾರಿಗಳು ಗುರುವಾರ ನಸುಕಿನಿಂದಲೇ ಶೋಧ ಆರಂಭಿಸಿದ್ದಾರೆ. ಹಲವರನ್ನು ವಶಕ್ಕೆ‌ ಪಡೆದಿದ್ದಾರೆ.

ಬೆಂಗಳೂರಿನಲ್ಲಿ ಶೋಧ ನಡೆಸಿದ ಫ್ಲ್ಯಾಟ್ ಯಾರಿಗೆ ಸೇರಿದ್ದು ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು