ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕದ್ರಿ ಗೋಪಾಲನಾಥ್ ಮನದ ಮಾತು: ಸಂಗೀತಕ್ಕೆ ಜಾತಿ ಇಲ್ಲ

Last Updated 11 ಅಕ್ಟೋಬರ್ 2019, 11:16 IST
ಅಕ್ಷರ ಗಾತ್ರ

ಬೆಂಗಳೂರು ವಿಶ್ವವಿದ್ಯಾಲಯವು 14ನೇ ಮೇ 2011ರಂದು ಆಯೋಜಿಸಿದ್ದ ‘ಸಂಸ್ಕೃತಿ ಚಿಂತನ’ ಕಾರ್ಯಕ್ರಮದಲ್ಲಿ ಕದ್ರಿ ಗೋಪಾಲನಾಥ್ ಮಾಡಿದ ಭಾಷಣಸಂಗೀತಗಾರರ ಮನೋಧರ್ಮ ಹೇಗಿರಬೇಕು ಎಂದು ಸಾರಿ ಹೇಳಿತು. ಅವರ ಭಾಷಣದಸಾರಾಂಶ ಇಲ್ಲಿದೆ.

---

ಸಂಗೀತಕ್ಕೆ ಜಾತಿ, ಧರ್ಮದ ಭೇದವಿಲ್ಲ. ಸಪ್ತ ಸ್ವರಗಳೇ ಸಂಗೀತದ ಸರ್ವಸ್ವ. ಅವೇ ಅದರ ಜಾತಿ, ಮತ, ಧರ್ಮಗಳು.ಸಂಗೀತದಲ್ಲಿ ಸಾಧನೆಯೇ ಸರ್ವಸ್ವ.ಕಲಾವಿದನಿಗೆ ಸಾಧಿಸುವ ಮನಸ್ಸಿದ್ದರೆ ಯಾವುದೂ ಅಡ್ಡಿಯಾಗುವುದಿಲ್ಲ.

ದೇಶದಲ್ಲಿ ಸಾವಿರಾರು ಜಾತಿಗಳಿರಬಹುದು. ಆದರೆಸಂಗೀತಕ್ಕೆ ಅದರ ಹಂಗು ಇಲ್ಲ. ಪಂಚಭೂತಗಳಂತೆ ವಿಶ್ವದೆಲ್ಲೆಡೆ ಸಂಗೀತ ಹರಡಿದೆ. ಅದನ್ನು ಅರಿತುಕೊಳ್ಳುವ ಶಕ್ತಿ, ಸೂಕ್ಷ್ಮತೆ ಕಲಾವಿದನಿಗೆ ಇರಬೇಕು.

ಸಂಗೀತಗಾರನಿಗೆ ಯಾವುದೇ ಕಾರಣಕ್ಕೂ ಅಹಂಕಾರ ಬರಬಾರದು. ಸಂಗೀತ ಎನ್ನುವುದು ಒಂದು ದೊಡ್ಡ ಸಾಗರವಿದ್ದಂತೆ. ಎಷ್ಟು ಸಾಧಿಸಿದರೂ ಮುಂದಿನ ಮೆಟ್ಟಿಲು ಇದ್ದೇ ಇರುತ್ತದೆ.ಸಾಧಿಸುವುದು ಇನ್ನೂ ಸಾಕಷ್ಟಿದೆ ಎನ್ನುವ ವಿನಯವಂತಿಕೆ ಮತ್ತುನಿರಂತರ ಕಲಿಕೆಯ ಮನೋಭಾವವನ್ನು ಸಂಗೀತಗಾರರು ಬೆಳೆಸಿಕೊಳ್ಳಬೇಕು.

ವಿಶ್ವವಿದ್ಯಾಲಯಗಳು ಕೇವಲ ಪಠ್ಯಕ್ಕೆ ಮಾತ್ರ ಸೀಮಿತವಾಗಿವೆ ಎಂದು ಭಾವಿಸಿದ್ದೆ. ಇಂತಹ ಕಾರ್ಯಕ್ರಮ ಆಯೋಜಿಸಿರುವುದನ್ನು ಗಮನಿಸಿದರೆ ವಿ.ವಿ.ಗಳಿಗೆ ಸಂಸ್ಕೃತಿ, ಸಂಗೀತದ ಬೆಳವಣಿಗೆ ಬಗ್ಗೆ ಕಾಳಜಿ ಇದೆ ಎಂಬುದು ಅರಿವಾಗುತ್ತದೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT