ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು:‘ಶೂನ್ಯ’ ದಾಖಲೆ ಬರೆದ ಮಳೆ

ಬೆಂಗಳೂರು: ಫೆಬ್ರುವರಿ, ಮಾರ್ಚ್‌ನಲ್ಲಿ ಒಂದು ಹನಿಯೂ ಸುರಿದಿಲ್ಲ
Published 26 ಮಾರ್ಚ್ 2024, 22:56 IST
Last Updated 26 ಮಾರ್ಚ್ 2024, 22:56 IST
ಅಕ್ಷರ ಗಾತ್ರ

ಆದಿತ್ಯ ಕೆ.ಎ.

ಬೆಂಗಳೂರು: ಈ ವರ್ಷದ ಫೆಬ್ರುವರಿ ಹಾಗೂ ಮಾರ್ಚ್‌ನಲ್ಲಿ ಮಳೆಯೇ ಸುರಿಯದ ಕಾರಣಕ್ಕೆ ಬೆಂಗಳೂರಿನಲ್ಲಿ ಬಿಸಿಲ ಬೇಗೆ ಹೆಚ್ಚಿದ್ದು, ಜನರನ್ನೂ ಹೈರಾಣಾಗಿಸುತ್ತಿದೆ.

ಮುಂಗಾರು ಪೂರ್ವದಲ್ಲಿ ಫೆಬ್ರುವರಿ ತಿಂಗಳಲ್ಲಿ 7.1 ಮಿ.ಮೀ ಹಾಗೂ ಮಾರ್ಚ್‌ನಲ್ಲಿ 14.7 ಮಿ.ಮೀ ನಗರದ ವಾಡಿಕೆ ಮಳೆ. ಆದರೆ, ಇದುವರೆಗೂ ನಗರದಲ್ಲಿ ‘ಒಂದು ಹನಿ’ಯೂ ಮಳೆ ಸುರಿದಿಲ್ಲ. ಹಿಂದಿನ ಕೆಲವು ವರ್ಷಗಳಂತೆಯೇ ‘ಶೂನ್ಯ’ ದಾಖಲೆ ಬರೆದಿದೆ. ಇದರಿಂದ ಒಣಹವೆ ವಾತಾವರಣವಿದ್ದು ಮಧ್ಯಾಹ್ನದ ವೇಳೆಯಲ್ಲಿ ಮನೆ ಹಾಗೂ ಕಚೇರಿಯಿಂದ ಹೊರಗೆ ಓಡಾಡದ ಪರಿಸ್ಥಿತಿಯಿದೆ. ಮಕ್ಕಳು, ವೃದ್ಧರನ್ನು ದಿನದಿಂದ ದಿನಕ್ಕೆ ಬಸವಳಿಯುವಂತೆ ಮಾಡುತ್ತಿದೆ ವಾತಾವರಣ. ಉದ್ಯಾನಗಳಲ್ಲೂ ತಂಪು ಗಾಳಿ ಬೀಸುತ್ತಿಲ್ಲ. ವಾಡಿಕೆಯಷ್ಟಾದರೂ ಮಳೆ ಆಗಿದ್ದರೆ ತಾಪಮಾನ ಇಳಿಕೆ ಆಗುತ್ತಿತ್ತು ಎಂದು ತಜ್ಞರು ಹೇಳುತ್ತಾರೆ.

ರಾಜ್ಯದ ಬೀದರ್, ಚಿಕ್ಕಮಗಳೂರು, ಕೊಡಗು ಜಿಲ್ಲೆಯ ಅಲ್ಲಲ್ಲಿ ಸಾಧಾರಣ ಮಳೆಯಾಗಿದ್ದರೂ ನಗರದಲ್ಲಿ ಮಾತ್ರ ಮೋಡದ ವಾತಾವರಣವೇ ಕಾಣಿಸುತ್ತಿಲ್ಲ. ಇನ್ನೂ ಒಂದು ವಾರ ನಗರದಲ್ಲಿ ‘ಬಿಸಿಲ ಪ್ರಕೋಪ’ ಹೀಗೆಯೇ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಜ್ಞರು ಮುನ್ಸೂಚನೆ ನೀಡಿದ್ದಾರೆ.

ಮೇನಲ್ಲಿ ಅಧಿಕ ಮಳೆ:

ಏಪ್ರಿಲ್‌ನಲ್ಲಿ 61.7 ಮಿ.ಮೀ ಹಾಗೂ ಮೇನಲ್ಲಿ 128.7 ಮಿ.ಮೀ ನಗರದ ವಾಡಿಕೆ ಮಳೆ ಪ್ರಮಾಣ. ಮೇನಲ್ಲಿ ವಾಡಿಕೆ ಮಳೆಯಾಗುವ ಸಾಧ್ಯತೆಯಿದೆ. ಆದರೆ, ಮುಂದಿನ ಎರಡು ತಿಂಗಳಲ್ಲಿ ಮಳೆಯ ಪ್ರಮಾಣ ಹೇಗಿರಲಿದೆ ಎಂಬುದನ್ನು ತಿಂಗಳಾಂತ್ಯದಲ್ಲಿ ನಿಖರವಾಗಿ ಮಾಹಿತಿ ನೀಡಲಾಗುವುದು ಎಂದು ಹವಾಮಾನ ಇಲಾಖೆ ಅಧಿಕಾರಿ ಎ.ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಉಷ್ಣಾಂಶ ಮತ್ತಷ್ಟು ಏರಿಕೆ:
ರಾಜ್ಯದ ಕೆಲವು ಭಾಗದಲ್ಲಿ ಗರಿಷ್ಠ ಉಷ್ಣಾಂಶವು 2 ಡಿಗ್ರಿಗಿಂತ ಹೆಚ್ಚಾದರೆ, ಬೆಂಗಳೂರಿನಲ್ಲಿ 1 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಮಾರ್ಚ್‌ನಲ್ಲಿ ನಗರದ ವಾಡಿಕೆ ಉಷ್ಣಾಂಶ 34 ಡಿಗ್ರಿ ಸೆಲ್ಸಿಯಸ್‌ ಆಗಿದೆ.

1996ರ ಮಾರ್ಚ್‌ 29ರಂದು 37.3 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ಉಷ್ಣಾಂಶ ದಾಖಲಾಗಿತ್ತು. 2016ರ ಏಪ್ರಿಲ್‌ 25ರಂದು 39.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿತ್ತು. ಅದು ದಾಖಲೆಯಾಗಿದೆ. ಈ ವರ್ಷದ ಮಾರ್ಚ್‌ 6ರಂದು 36 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿತ್ತು. ಈ ವರ್ಷ ಹಿಂದಿನ ದಾಖಲೆ ಅಳಿಸಿ ಹಾಕದಿದ್ದರೂ ವಾತಾವರಣದಲ್ಲಿ ಆಗಿರುವ ಬದಲಾವಣೆಯಿಂದ ತಾಪಮಾನ ಹೆಚ್ಚಿರುವಂತೆ ಭಾಸವಾಗುತ್ತಿದೆ. ಬಿಸಿಲ ಪರಿಣಾಮದಿಂದ ರೋಗಗಳು ಬಾಧಿಸುತ್ತಿವೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ನಗರದಲ್ಲಿ ಸುರಿದಿದ್ದ ಮಳೆ (ಸಂಗ್ರಹ ಚಿತ್ರ).
ನಗರದಲ್ಲಿ ಸುರಿದಿದ್ದ ಮಳೆ (ಸಂಗ್ರಹ ಚಿತ್ರ).

Quote - ನಗರದಲ್ಲಿ ಸದ್ಯಕ್ಕೆ ಉಷ್ಣಅಲೆಯ ವಾತಾವರಣ ಇಲ್ಲ. ಆದರೆ ತಾಪಮಾನದಲ್ಲಿ ಏರಿಕೆ ಆಗಲಿದ್ದು ಜನರು ಎಚ್ಚರಿಕೆ ವಹಿಸುವುದು ಅಗತ್ಯ. –ಎ.ಪ್ರಸಾದ್‌ ಹವಾಮಾನ ಇಲಾಖೆ ಅಧಿಕಾರಿ

Cut-off box - ಮಾರ್ಚ್‌ನಲ್ಲಿ ದಾಖಲಾದ ಗರಿಷ್ಠ ಉಷ್ಣಾಂಶ‌ ವರ್ಷ–ದಿನಾಂಕ;ಗರಿಷ್ಠ ತಾಪಮಾನ (ಡಿಗ್ರಿ ಸೆಲ್ಸಿಯಸ್‌ನಲ್ಲಿ)2013ರ ಮಾರ್ಚ್‌ 30;36.62016ರ ಮಾರ್ಚ್‌ 23;36.32017ರ ಮಾರ್ಚ್‌ 27;37.22019ರ ಮಾರ್ಚ್ 8;37.02020ರ ಮಾರ್ಚ್‌ 31;36.12024 ಮಾರ್ಚ್‌ 6;36.0

Cut-off box - 14 ವರ್ಷಗಳಲ್ಲಿ ಫೆಬ್ರುವರಿ ಹಾಗೂ ಮಾರ್ಚ್‌ನಲ್ಲಿ ಸುರಿದ ಮಳೆ ಪ್ರಮಾಣ (ಮಿ.ಮೀಗಳಲ್ಲಿ)ವರ್ಷ;ಫೆಬ್ರುವರಿ;ಮಾರ್ಚ್‌2011;44.1;0.2 2012;0.0;0.7 2013;2.9;0.6 2014;0.2;4.72015;0.0;37.72016;0.0;19.92017;0.0;47.82018;1.8;47.62019;58.0;0.02020;0.0;18.42021;10.3;0.02022;0.0;12.82023;5.0;9.02024;0.0;0.0

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT